ಪ್ರತಿ ಸಿಮ್ ಅನ್ನು ಒಂದು ಮೂಲೆಯಲ್ಲಿ ಕಟ್ ಮಾಡಲಾಗಿರುತ್ತದೆ ಯಾಕೆ ಗೊತ್ತೇ?? ಬಲವಾದ ಕಾರಣ ಕೂಡ ಇದೆ.
ಪ್ರತಿ ಸಿಮ್ ಅನ್ನು ಒಂದು ಮೂಲೆಯಲ್ಲಿ ಕಟ್ ಮಾಡಲಾಗಿರುತ್ತದೆ ಯಾಕೆ ಗೊತ್ತೇ?? ಬಲವಾದ ಕಾರಣ ಕೂಡ ಇದೆ.
ನಮಸ್ಕಾರ ಸ್ನೇಹಿತರೇ ನಾವು ಮೊಬೈಲ್ ಸಿಮ್ ಅನ್ನು ನೋಡಿದಾಗ.ಒಂದು ಮೂಲೆಯಿಂದ ಸಿಮ್ ಅನ್ನು ಕತ್ತರಿಸಲಾಗಿರುತ್ತದೆ, ಇದನ್ನು ನೋಡಿದ ಪ್ರತಿ ಬಾರಿಯೂ ಕೂಡ ಯಾಕೆ ಹೀಗೆ ಕತ್ತರಿಸಿರಬಹುದು ಎಂಬ ಪ್ರಶ್ನೆ ಖಂಡಿತವಾಗಿಯೂ ಬರುತ್ತದೆ. ಇದು ಮಾತ್ರವಲ್ಲ, ಹಲವರಿಗೆ ಸಿಮ್‌ನ ಪೂರ್ಣ ವಿವರಣೆ ಕೂಡ ತಿಳಿದಿಲ್ಲ, ಆದರೆ ಎಲ್ಲರೂ ಮೊಬೈಲ್ ಫೋನ್ ಅನ್ನು ಬಳಸುತ್ತಾರೆ. ಆದ್ದರಿಂದ ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಆಸಕ್ತಿದಾಯಕ ಮಾಹಿತಿಯನ್ನು ಇಂದು ತಿಳಿಸುತ್ತೇವೆ ಕೇಳಿ.
ಮೊದಲನೆಯದಾಗಿ, ನೀವು ಮೊಬೈಲ್ ಫೋನ್ ಗಳು ಬಿಡುಗಡೆಯಾದ ದಿನಗಳನ್ನು ನೆನಪು ಮಾಡಿಕೊಂಡರೆ ಆ ಸಮಯದಲ್ಲಿ ಸಿಮ್ ಕೇವಲ ಒಂದು ಆಯತಾಕಾರದಲ್ಲಿ ಇರುತಿತ್ತು. ಅಲ್ಲಿ ಯಾವುದೇ ಮೂಲೆಯಲ್ಲಿಯೂ ಕೂಡ ಕಟ್ ಮಾಡಿರುತ್ತಿರಲಿಲ್ಲ. ಹಾಗೂ ಅದೇ ಸಮಯದಲ್ಲಿ ಯಾರಾದರೂ ಒಮ್ಮೆ ಸಿಮ್ ಕೊಂಡು ಮೊಬೈಲ್ ಹಾಕಿದರು ಎಂದರೆ ಆ ಸಿಮ್ ಬದಲಾಯಿಸುವ ಆಯ್ಕೆಯು ಇರಲಿಲ್ಲ ಹಾಗೂ ಅದರ ಕುರಿತು ಆಲೋಚನೆ ಕೂಡ ಮಾಡುತ್ತಿರಲಿಲ್ಲ.
ಆದರೆ ಕಾಲ ಕ್ರಮೇಣ ಜನರು ಒಂದೇ ಮೊಬೈಲ್ ನಲ್ಲಿ ವಿವಿಧ ಸಿಮ್ ಗಳನ್ನೂ ಬಳಸಲು ಆರಂಭಿಸಿದರು. ಹೀಗೆ ಸಿಮ್ ಬದಲಾಯಿಸಲು ಹೋದಾಗ ಮೊಬೈಲ್ ನಲ್ಲಿ ಸಿಮ್ ಸಂಪೂರ್ಣವಾಗಿ ಫಿಟ್ ಆಗಿ ಕೂರುತ್ತಿದ್ದ ಕಾರಣ ಸಿಮ್ ಅನ್ನು ಹೊರತೆಗೆಯಲು ಬಹಳ ಕಷ್ಟ ಪಡಬೇಕಾಗಿತ್ತು, ಅದೇ ಸಮಯದಲ್ಲಿ ಜನರು ಕ್ರಮೇಣ ಕೆಲವೊಂದು ತಿಂಗಳುಗಳಿಗೊಮ್ಮ ಸಿಮ್ ಬದಲಾಯಿಸಲು ಆರಂಭಿದರು. ಅದೇ ಕಾರಣಕ್ಕಾಗಿ ಸಿಮ್ ಬದಲಾಯಿಸುವಾದ ಸುಲಭವಾಗಲಿ ಎಂದು ಟೆಲಿಕಾಂ ಕಂಪನಿಗಳು ಆಲೋಚನೆ ಮಾಡಿ, ಸಿಮ್ ಅನ್ನು ಒಂದು ಮೂಲೆಯಲ್ಲಿ ಕತ್ತರಿಸಿದ್ದಾರೆ ತೆಗೆಯಲು ಹಾಕಲು ಸುಲಭ ಎಂಬ ಆಲೋಚನೆಗೆ ಬಂದವು. ಅಂದಿನಿಂದ ಪ್ರತಿ ಸಿಮ್ ಒಂದು ಮೂಲೆಯಲ್ಲೂ ಕಟ್ ಆಗಿರುತ್ತದೆ.