ಟಾಪ್ ನಟಿಯರಾಗಿ ಮಿಂಚಿ, ಗ್ಲಾಮರ್ ಪಾತ್ರಗಳಲ್ಲಿ ಸದ್ದು ಮಾಡಿ ಸನ್ಯಾಸತ್ವ ಸ್ವೀಕರಿಸಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಎಂದರೆ ಎಂಟರ್ಟೈನ್ಮೆಂಟ್ ಜೊತೆಗೆ ಗ್ಲಾಮರ್ ಕೂಡ ಇಲ್ಲಿ ಫೇಮಸ್. ಬೇರೆಲ್ಲಾ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಎಲ್ಲವೂ ಹೆಚ್ಚು. ಅಂತೆಯೇ ಈ ಅಂಶಗಳು ಕೆಲ ಸೌತ್ ನ ನಟ ನಟಿಯರಲ್ಲಿ ಕೂಡ ಇದೆ. ಆದರೆ ಬಾಲಿವುಡ್ ಗೆ ಹೋಲಿಸಿದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈ ತರಹದ ಡ್ರಾಮಾ ಹಾಗೂ ಗಾಸಿಪ್ ಹಾಗೂ ಕೆಲವು ವಿಚಾರಗಳು ಕಡಿಮೆಯೇ. ಅದಕ್ಕೆ ದಕ್ಷಿಣ ಭಾರತದ ಚಿತ್ರರಂಗವನ್ನು ಶ್ರದ್ಧಾವಂತರ ಚಿತ್ರರಂಗ ಎನ್ನುವುದು. ನಟಿಯರು ಎಂದಾಕ್ಷಣ ನಮಗೆ ಅನ್ನಿಸೋದು ಗ್ಲಾಮರ್ ಹಾಗೂ ಸೌಂದರ್ಯ.

ನಟಿಯರು ಕೂಡ ಕಷ್ಟಪಟ್ಟು ನಟಿಯರಾದ ಮೇಲೆ, ಆ ಸ್ಟಾರ್ ಗಿರಿಯನ್ನು ದುಡ್ಡಿನ ಮೂಲಕ ಮೆಂಟೇನ್ ಮಾಡಲು ಪ್ರಯತ್ನಿಸುತ್ತಾರೆ. ಯಾಕೆಂದರೆ ನಟಿಯರ ಸ್ಟಾರ್ ಗಿರಿ ಹೊಸ ನಟಿಯರು ಬರೋವಷ್ಟರವರೆಗೆ ಮಾತ್ರ. ಆದರೆ ಇಂದು ನಾವು ಹೇಳಹೊರಟಿರೋ ವಿಷಯದಲ್ಲಿ ಈ ನಟಿಯರು ಚಿತ್ರರಂಗದಲ್ಲಿ ಫುಲ್ ಗ್ಲಾಮರಸ್ ಪಾತ್ರಗಳಿಗೆ ಹೆಸರಾದವರು ನಂತರದ ದಿನಗಳಲ್ಲಿ ಹೇಳ ಹೆಸರಿಲ್ಲದೆ ಮಾಯವಾಗಿ ಹೋಗಿ ಆನಂತರ ಸನ್ಯಾಸಿಗಳಾಗಿ ಸಮಾಜದ ಮುಂದೆ ಬಂದವರೂ ಇದ್ದಾರೆ‌. ಇಂಹ ಐದು ನಟಿಯರ ಕುರಿತಂತೆ ಇಂದಿನ ವಿಷಯದಲ್ಲಿ ಹೇಳುತ್ತೇವೆ ಬನ್ನಿ.

ಮೊದಲಿಗೆ ಮಮತಾ ಕುಲಕರ್ಣಿ. ವಿಂಟೇಜ್ ಬಾಲಿವುಡ್ ಪ್ರಿಯರಿಗೆ ಮಮತಾ ಕುಲಕರ್ಣಿ ಹೆಸರು ತಿಳಿದೇ ಇರುತ್ತೆ. ಕಾರಣ ಅವರ ಗ್ಲಾಮರಸ್ ಪಾತ್ರಗಳು ಪಡ್ಡೆ ಹೈಕಳ ನಿದ್ದೆಯನ್ನು ಕೆಡಿಸಿತ್ತು. ಇವರ ಖ್ಯಾತ ಚಿತ್ರಗಳು ಆಶಿಕ್‌ ಆವಾರಾ, ಸಬೆಬಡಾ ಖೀಲಾಡಿ, ಬಾಜಿ, ಕರಣ್‌ ಅರ್ಜುನ್‌. 2013 ರಲ್ಲಿ ಮಮತಾ ಕುಲಕರ್ಣಿ ಸನ್ಯಾಸಿನಿ ಯಾಗಿರೋ ಫೋಟೋ ಗಳು ಅಂತರ್ಜಾಲದಲ್ಲಿ ಸರಿದಾಡೋ ಮೂಲಕ ಅವರು ಸನ್ಯಾಸಿ ಆಗಿದ್ದಾರೆ ಅನ್ನೋ ಗುಸುಗುಸು ಒಳಮಾತುಗಳು ನಿಜವಾದವು ಆದರೆ, 2014 ರಲ್ಲಿ ಮಮತಾ ಕೀನ್ಯಾದಲ್ಲಿ ಮಾಡಬಾರದ ಅವ್ಯವಹಾರಗಳನ್ನು ಮಾಡುತ್ತಿದ್ದಾರೆ ಎಂಬ ಬಲವಾದ ಆರೋಪದ ಮೇಲೆ ಬಂಧಿಸಲಾಗಿತ್ತು.

ಎರಡನೇದಾಗಿ ಅನು ಅಗರ್ವಾಲ್ ಕಾಣಿಸಿಕೊಳ್ಳುತ್ತಾರೆ. 90ರ ದಶಕದಲ್ಲಿ ಬಾಲಿವುಡ್ ನಲ್ಲಿ ಏಳು ಬೀಳು ಕಂಡು ಖ್ಯಾತ ನಟಿಯಾಗಿ ಫೇಮಸ್ ಆಗಿದ್ದ ಅನು ಅಗರ್ವಾಲ್. ನಂತರದ ದಿನಗಳಲ್ಲಿ ವಿಧಿಯ ಆಟಕ್ಕೆ ಸಿಲುಕಿ ಆಕ್ಸಿಡೆಂಟ್ ನಲ್ಲಿ 29 ದಿನಗಳ ಕಾಲ ಕೋಮಾಗೆ ಜಾರಿದರು. ನಂತರ ಗುಣಮುಖರಾದಮೇಲೆ ತಮ್ಮ ಚಿಂತನೆಯನ್ನು ಪೂರ್ಣವಾಗಿ ಆಧ್ಯಾತ್ಮಿಕದತ್ತ ಬದಲಾಯಿಸಿ ಯೋಗಗುರುವಾಗಿ ತಮ್ಮ ನವಜೀವನವನ್ನು ಶುರು ಮಾಡಿದರು. ಇಂದಿಗೂ ಬಿಹಾರ ರಾಜ್ಯದಲ್ಲಿ ಯೋಗಶಾಲೆಯೊಂದನ್ನು ನಡೆಸಿಕೊಂಡಿದ್ದಾರೆ.

ಮೂರನೇ ಸ್ಥಾನದಲೀ ನಟಿ ರಂಜಿತಾ ಕಾಣಿಸಿಕೊಳ್ಳುತ್ತಾರೆ. ನಟಿ ರಂಜಿತಾ ರವರ ಬಗ್ಗೆ ನಿಮಗೆಲ್ಲ ಗೊತ್ತಿಲ್ಲದೇ ಇರೋದು ಏನಿಲ್ಲ. ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಖ್ಯಾತರಾಗಿದ್ದ ನಟಿ ರಂಜಿತಾ ಸ್ವಾಮಿ ನಿತ್ಯಾನಂದ ರವರ ಪ್ರಕರಣದಲ್ಲಿ ಎಲ್ಲೆಲ್ಲೂ ಸುದ್ಧಿಯಾಗಿದ್ದರು. ಇವರೂ ಕೂಡ ನಂತರದ ದಿನಗಳಲ್ಲಿ ನಿತ್ಯಾನಂದರವರ ಬಳಿಯೇ ದೀಕ್ಷೆ ಪಡೆದು ಸನ್ಯಾಸಿನಿ ಕೂಡ ಆಗಿರೋದು ಅಷ್ಟೊಂದು ಬೆಳಕಿಗೆ ಬರದ ವಿಚಾರ.

ನಾಲ್ಕನೇ ಸ್ಥಾನದಲ್ಲಿ ನಟಿ ಬರ್ಖಾ ಮದನ್. ಪಂಜಾಬ್ ಮೂಲದ ಬರ್ಖಾ ಮದನ್ ಬಾಲಿವುಡ್ ನಲ್ಲಿ ಖ್ಯಾತ ಚಿತ್ರಗಳಲ್ಲಿ ನಟಿಸಿದ್ದ ನಟಿ. ಅವರು ಎಷ್ಟು ಸುಂದರರಾಗಿದ್ದರು ಎಂದರೆ 1994 ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ಬರುತ್ತಾ ಬರುತ್ತಾ ಅವರ ಚಿತ್ರ ಬೌದ್ಧ ಧರ್ಮದ ಚಿಂತನೆಗಳತ್ತ ಹೊರಳಿತು. 2012 ರ ವರ್ಷಾಂತ್ಯದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿ ದೀಕ್ಷೆಯನ್ನು ಪಡೆದರು. ಮಾತ್ರವಲ್ಲದೆ ತಮ್ಮ ಹೆಸರನ್ನು ವೆನ್‌ ಜೆಟ್ಲನ್‌ ಸ್ಯಾಮ್ಟೆನ್‌ ಎಂದು ಬದಲಾಯಿಸಿ ಕೊಂಡರು.

ಐದನೇ ಸ್ಥಾನದಲ್ಲಿ ಕೊಹಿನೂರ್ ಸಿಂಗ್ ಕೊಹಿನೂರ್ ಸಿಂಗ್ ಯಾರಪ್ಪ ಇದು ಎಲ್ಲೂ ನೋಡಿಲ್ಲ ಕೇಳಿಲ್ಲ ಅಂತ ಅಂದ್ಕೊಂಡ್ರಾ, ಹೌದು ಕರೆಕ್ಟಾಗಿ ಅಂದ್ಕೊಂಡ್ರಿ ಯಾಕೆಂದರೆ ಇವರು ನೇಪಾಳದ ಮಾಡೆಲ್‌. ನೇಪಾಳದ ಆಲ್ಬಂ ಗಳಲ್ಲಿ ಇವರು ಪ್ರಸಿದ್ಧರಾದವರು. ಇವರಿಗೂ ಕೂಡ ಬರುತ್ತಾ ಜೀವನ ಆಧ್ಯಾತ್ಮಿಕದತ್ತ ಹೊರಳಿ ನಂತರದ ದಿನಗಳಲ್ಲಿ ಬೌದ್ಧ ದೀಕ್ಷೆಯನ್ನು ಪಡೆದು ಈಗ ಬೌದ್ಧ ಕೇಂದ್ರದಲ್ಲಿ ಸನ್ಯಾಸಿಯಾಗಿದ್ದಾರೆ.

ನೋಡಿದ್ರಲ್ಲಾ ಸ್ನೇಹಿತರರೆ ಇಷ್ಟೊಂದು ಚಂದದ ಅಂದದ ಸುಖವಾದ ಬದುಕು ಬಿಟ್ಟು, ಅದರಲ್ಲಿ ಕೂಡ ನಟಿಯರಾಗಿ ಅವರ ಫೇಮ್ ನ್ನು ಬಿಟ್ಟು ಸನ್ಯಾಸಿಯರಾಗಿರೋದು ನೋಡಿದರೆ ಹೇಳ್ಬೋದು ಬದುಕು ನಶ್ವರ. ಇಲ್ಲಿ ಯಾವ ಮೋಹ ಹಾಗೂ ಆಸೆಗಳು ಶಾಶ್ವತವಲ್ಲ. ಇಂದಿನ ಈ ವಿಚಾರವನ್ನು ನೋಡಿದ್ಮೇಲೆ ನಿಮಗೆ ಏನನ್ನಿಸಿತು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Facebook Comments

Post Author: Ravi Yadav