ವಿಶ್ವ ಟೆಸ್ಟ್ ಚಾಂಪಿಯನ್ ಗೆಲ್ಲುವ ತಂಡವನ್ನು ಕಾರಣಗಳ ಸಮೇತ ವಿವರಿಸಿದ ಬ್ರೆಟ್ ಲೀ, ಯಾವುದಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ವಿಶ್ವ ಟೆಸ್ಟ್ ಚಾಂಪಿಯನ್ ಇದೇ ಜೂನ್ 18 ರಿಂದ 22 ರ ವರೆಗೆ ನಡೆಯುವುದು ನಿಮಗೆ ತಿಳಿದಿದೆ. ಈಗ ಹಲವಾರು ಮಾಜಿ ಕ್ರಿಕೇಟಿಗರು ಈ ಸಂಭಂದ ಭವಿಷ್ಯವನ್ನು ನುಡಿಯುತ್ತಿರುವುದನ್ನು ಗಮನಿಸಿರುತ್ತಿರಿ. ಆಸ್ಟ್ರೇಲಿಯಾ ತಂಡ ಮೂರು ಭಾರಿ ವಿಶ್ವ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದ, ವೇಗದ ಬೌಲರ್ ಬ್ರೇಟ್ ಲೀ ಸಹ ಈಗ ಕಪ್ ಗೆಲ್ಲುವ ನೆಚ್ಚಿನ ತಂಡವನ್ನ ಹೆಸರಿಸಿದ್ದಾರೆ.

ಅವರ ಪ್ರಕಾರ ಫೈನಲ್ ನಡೆಯುತ್ತಿರುವ ಸೌತಾಂಪ್ಟನ್ ಕ್ರೀಡಾಂಗಣದ ಪಿಚ್, ಉತ್ತಮವಾಗಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸಹಕರಿಸುವ ಸ್ಪರ್ಧಾತ್ಮಕ ಪಿಚ್ ಆಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿರುವುದರಿಂದ ಬ್ಯಾಟ್ಸ್ ಮನ್ ಗಳು ಸುಲಭವಾಗಿ ರನ್ನು ಗಳಿಸಬಹುದು. ಆದರೇ ಯಾವ ತಂಡದ ಬೌಲರ್ ಗಳು ಉತ್ತಮ ಟೆಸ್ಟ್ ಮ್ಯಾಚ್ ಲೈನ್ ಎಂಡ್ ಲೆಂಗ್ತ್ ನಲ್ಲಿ ಬೌಲ್ ಮಾಡುತ್ತಾರೋ ಆ ತಂಡ ವಿಜಯಶಾಲಿಯಾಗುತ್ತದೆ ಎಂದು ಹೇಳಿದ್ದಾರೆ.

ಮೇಲ್ನೋಟಕ್ಕೆ ಪಂದ್ಯ ನಡೆಯುವ ಸೌತಾಂಪ್ಟನ್ ನ ವಾತಾವರಣ ಹೆಚ್ಚು ಕಡಿಮೆ ನ್ಯೂಜಿಲೆಂಡ್ ವಾತಾವರಣದ ಥರ ಇದೆ. ಅದಲ್ಲದೇ ಈಗ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ನಿಂದ ಗಮನಸೆಳೆಯುತ್ತಿದೆ. ಹಾಗಾಗಿ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನಶಿಪ್ ಪಟ್ಟ ಅಲಂಕರಿಸಲಿದೆ ಎಂದು ಬ್ರೇಟ್ ಲೀ ಭವಿಷ್ಯ ನುಡಿದಿದ್ದಾರೆ. ನಿಮ್ಮ ಪ್ರಕಾರ ಯಾವ ತಂಡಕ್ಕೆ ಅವಕಾಶ ಹೆಚ್ಚು, ಯಾವ ತಂಡ ಟೆಸ್ಟ್ ಗೆಲ್ಲುತ್ತದೆ ಎಂಬುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav