ತಮ್ಮ ಜೀವನವೆಲ್ಲ ಕಷ್ಟ ಪಟ್ಟು ದುಡಿದ ಹಣವನ್ನು ದಾನ ಮಾಡಿದ ಟಾಪ್ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗ ಚಿತ್ರರಂಗದಲ್ಲಿ ನಟಿಸುವ ನಟ-ನಟಿಯರು ಆದಷ್ಟು ಬೇಗ ದುಡ್ಡು ಮಾಡಿ ಜೀವನದಲ್ಲಿ ಸೆಟಲ್ ಆಗುವ ಬಗ್ಗೆ ಯೋಚನೆ ಮಾಡುತ್ತಾರೆ. ಈಗಿನ ಕಾಲಕ್ಕೆ ಹೋಲಿಸಿದರೆ ಅವರು ಮಾಡುತ್ತಿರುವ ಯೋಜನೆ ತಪ್ಪಲ್ಲ ಯಾಕೆಂದರೆ ಈಗ ಹಳೆ ನೀರು ಹೊಸ ನೀರು ಬಂದಾಗ ಹೇಗೆ ಕೊಚ್ಚಿಕೊಂಡು ಹೋಗುತ್ತೋ ಹಾಗೆ ಹೊಸ ಪ್ರತಿಭೆಗಳು ಬಂದಾಗ ಹಳೆ ಪ್ರತಿಭೆಗಳು ಸಹ ಮರೆಯಾಗುತ್ತವೆ. ಅದಕ್ಕಾಗಿ ಮರೆಯಾಗುವ ಮುನ್ನ ಆದಷ್ಟು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಆಗುವಷ್ಟು ಸಂಪತ್ತನ್ನು ಕೂಡಿಡಲು ಯೋಚಿಸುತ್ತಾರೆ.

ಈಗ ಚಿತ್ರರಂಗದಲ್ಲಿ ದುಡ್ಡಿಲ್ಲ ವೆಂದರೆ ಏನು ನಡೆಯೋದಿಲ್ಲ ದುಡ್ಡು ಕೊಟ್ಟರೆ ಮಾತ್ರ ನಟನೆ. ಅದಕ್ಕಾಗಿಯೇ ಚಿತ್ರರಂಗ ಈಗ ಪಕ್ಕ ಪೂರ್ತಿ ಕಮರ್ಷಿಯಲ್ ಆಗಿಬಿಟ್ಟಿದೆ. ಹಿಂದಿನ ಕಾಲದಲ್ಲಿ ಹಾಗಲ್ಲ ನಟರು ಬಾಂಧವ್ಯ ಗೋಸ್ಕರ ಸಿನಿಮಾ ಮಾಡಿ ನಂತರದಲ್ಲಿ ಸಂಭಾವನೆ ಪಡೆಯುತ್ತಿದ್ದರು. ಈಗಿನ ಕಾಲದಲ್ಲಿ ಅಂತಹ ಬಾಂಧವ್ಯವನ್ನು ನಿರೀಕ್ಷಿಸುವುದು ತುಂಬಾ ವಿರಳ ಬಿಡಿ. ಇಂದಿನ ಕೆಲ ನಟಿಯರು ತಾವು ದುಡಿದ ಕೋಟ್ಯಂತರ ಹಣ ವನ್ನು ಹೇಗೆ ದಾನ ಮಾಡಿ ಹೋದರು ಎಂಬ ಕುರಿತಂತೆ ಹೇಳಲಿದ್ದೇವೆ.

ಹೌದು ಕೇಳಲಿಕ್ಕೆ ಸ್ವಲ್ಪ ವಿಚಿತ್ರವೆನಿಸಿದರೂ ಇದು ನಡೆದಿದೆ ಇದು ನಡೆದಿರುವುದು ಕೂಡ ನಮ್ಮ ಭಾರತೀಯ ಚಿತ್ರರಂಗದಲ್ಲಿ. 1953 ರಂದು ಈ ನಟಿ ಚೆನ್ನೈನಲ್ಲಿ ಜನಿಸಿದರು. ಇವರ ಹೆಸರು ಶ್ರೀವಿದ್ಯಾ. ಇವರ ಬಗ್ಗೆ ನೀವು ಸಹ ಕೇಳಿರುತ್ತೀರಿ. ಆ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಎಲ್ಲ ಭಾಷೆಯ ಚಿತ್ರರಂಗದಲ್ಲಿ ಪೋಷಕ ಪಾತ್ರವನ್ನು ಶ್ರೀವಿದ್ಯಾ ಸಮರ್ಥವಾಗಿ ನಟಿಸಿದ್ದರು. ಕನ್ನಡದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಈಕೆ. ಅವರು ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪಾತ್ರ ಎಂದರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿತ್ತು.

1976 ನಲ್ಲಿ ಜಾರ್ಜ್ ಥಾಮಸ್ ಎಂಬವರನ್ನು ವಿವಾಹವಾಗುತ್ತಾರೆ. ನಂತರ ವೈವಾಹಿಕ ವಿಚ್ಛೇದನವನ್ನು ಕೂಡ ಪಡೆದುಕೊಳ್ಳುತ್ತಾರೆ. ಇದಾದ ಕೆಲವೇ ವರ್ಷಗಳಲ್ಲಿ ಅಂದರೆ ತಮ್ಮ 53 ನೇ ವಯಸ್ಸಿನಲ್ಲಿ ಈಕೆ ವಿಧಿವಶ ರಾಗುತ್ತಾರೆ. ಆದರೆ ತಾವು ಸಂಪಾದಿಸಿದ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಹೆಸರಿನಲ್ಲಿ ಬರೆದಿಟ್ಟು ಹೋಗುತ್ತಾರೆ. ಇದು ಈಕೆಯ ಒಳ್ಳೆಯ ಮನಸ್ಸಿನ ಗುಣಕ್ಕೆ ನಾವು ಸಲಾಂ ಹೊಡೆಯಲೇ ಬೇಕು.

ಈ ಲಿಸ್ಟ್ ನಲ್ಲಿ ಇನ್ನೊಬ್ಬರು ಸಹ ಇದ್ದಾರೆ‌. ನಾವು ಈಗ ಮಾತನಾಡೋಕೆ ಹೊರಟಿರೋದು ಖ್ಯಾತ ಹಿರಿಯ ನಟಿ ಕಾಂಚನ ರವರ ಬಗ್ಗೆ. ಹೌದು ಕಾಂಚನ ರವರು ಈಗಲೂ ಜೀವಂತವಾಗಿದ್ದಾರೆ ದಕ್ಷಿಣಭಾರತದ ಬಹುಭಾಷೆಯಲ್ಲಿ ಖ್ಯಾತ ನಟಿಯಾಗಿ ಮೆರೆದವರು. ಅಂದಿನ ಕಾಲಕ್ಕೆ ಬಹುಭಾಷಾ ಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದರು. ತಮ್ಮ ನಟನೆಯಿಂದ ಎಲ್ಲರನ್ನೂ ಬೆರಗುಗೊಳಿಸಿ ಸುಮಾರು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಅವರು ತಾವು ಸಂಪಾದಿಸಿದ್ದ 50 ಕೋಟಿಗೂ ಹೆಚ್ಚು ಹಣವನ್ನು ತಿರುಪತಿ ತಿಮ್ಮಪ್ಪ ಪ್ರಶ್ನೆಗೆ ದಾನಮಾಡಿ ಬಡಜನರಿಗೆ ಆಗಲೆಂದು ಕೊಟ್ಟವರು. ನೋಡಿ ಇಂತಹ ನಟಿಯರು ಜನಸೇವೆಗೆ ತಮ್ಮ ಆಸ್ತಿಪಾಸ್ತಿಯನ್ನು ದಾನ ಮಾಡಿದವರು ಇಂಥವರನ್ನು ನೋಡಿದರೆ ನಮಗೆ ಒಂದು ಕ್ಷಣ ರೋಮಾಂಚನ ಆಗುವುದನ್ನು ಖಚಿತ.

ಈ ಕಾಲದಲ್ಲಿ ತಾವಾಯಿತು ತಮ್ಮ ಸಂಸಾರ ವಾಯಿತು ಎಂದು ತಮ್ಮ ಆಸ್ತಿಪಾಸ್ತಿ ರಕ್ಷಣೆಯ ಕೆಲಸದಲ್ಲಿ ತೊಡಗಿರುವ ನಟ-ನಟಿಯರ ನಡುವೆ ಇಂತಹ ನಟನಟಿಯರು ಆಗಿನ ಕಾಲಕ್ಕೆ ತಮ್ಮ ಆಸ್ತಿಯನ್ನು ಒಳ್ಳೆ ಕೆಲಸಕ್ಕೆ ವಿನಿಯೋಗಿಸಿ ದಂತಹ ದಾನ ಮಾಡಿದಂತಹ ಧಾನ ಶೂರರು. ಇಂತಹವರನ್ನು ಇತಿಹಾಸ ನೆನಪು ಮಾಡಿಕೊಳ್ಳುತ್ತದೆ ಇಲ್ಲವೋ ನಾವಂತೂ ನೆನಪು ಮಾಡಿಕೊಳ್ಳಬೇಕು ಅದಕ್ಕಾಗಿಯೇ ಈ ವಿಷಯದಲ್ಲಿ ಇವರ ದಾನದ ಬಗ್ಗೆ ನಾನು ಹೇಳಿದ್ದು. ಇಬ್ಬರು ನಟಿಯರ ದಾನ ಧರ್ಮದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವುದರ ಮೂಲಕ ನಮಗೆ ತಪ್ಪದೆ ತಿಳಿಸಿ.

Facebook Comments

Post Author: Ravi Yadav