ಕನ್ನಡ ಕಿರುತೆರೆಯ ನಟ ಭವಾನಿ ಸಿಂಗ್ ಅವರ ಪತ್ನಿ ಕೂಡ ಖ್ಯಾತ ನಟಿಯಂತೆ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಅಲ್ಲದೇ ಅನೇಕ ರಿಯಾಲಿಟಿ ಶೋಗಳು ಪ್ರಸಾರವಾಗುತ್ತವೆ. ಇನ್ನು ಇವು ಜನರಿಗೆ ಮನರಂಜನೆ ನೀಡುವುದರ ಮೂಲಕ ಜನಪ್ರಿಯತೆ ಪಡೆದುಕೊಳ್ಳುತ್ತವೆ. ಅಷ್ಟೇ ಅಲ್ಲದೆ ಧಾರಾವಾಹಿಗಳಲ್ಲಿ ಅಭಿನಯಿಸುವ ಸಾಕಷ್ಟು ಕಲಾವಿದರು ಜನಪ್ರಿಯತೆ ಪಡೆದು ತಮ್ಮ ಬಣ್ಣದ ಲೋಕದಲ್ಲಿ ಗಟ್ಟಿಯಾದ ಸ್ಥಾನವನ್ನು ಪಡೆಯುತ್ತಾರೆ. ಇಂತಹ ನಟರಲ್ಲಿ ಭವಾನಿ ಸಿಂಗ್ ಕೂಡಾ ಒಬ್ಬರು. ಹೌದು ‘ಸುಬ್ಬಲಕ್ಷ್ಮಿ ಸಂಸಾರ’ ಎಂಬ ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ.

ಇದರ ಧಾರಾವಹಿಯಲ್ಲಿ ಭವಾನಿ ಸಿಂಗ್ ಅವರು ಖಳನಾಯಕನ ಪಾತ್ರದಲ್ಲಿ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಖಳ ನಾಯಕನಾಗಿ ಅಭಿನಯಿಸಿದ್ದರು ಕೂಡ ಇವರು ಯಾವ ನಾಯಕರಿಗೂ ಕೂಡ ಕಮ್ಮಿಯಿಲ್ಲ ಎಂಬಂತೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಧಾರಾವಾಹಿ ನಟ ಭವಾನಿ ಸಿಂಗ್ ಅವರಿಗೆ ಕನ್ನಡ ಕಿರುತೆರೆಯಲ್ಲಿ ಭಾರಿ ಯಶಸ್ಸನ್ನು ತಂದುಕೊಟ್ಟಿತು. ಇನ್ನು ಭವಾನಿ ಸಿಂಗ್ ಅವರು ಇತ್ತೀಚೆಗೆ ಕೆಲ ತಿಂಗಳುಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಅವರು ಮದುವೆಯಾಗಿರುವ ಅವರ ಪತ್ನಿ ಕೂಡ ಖ್ಯಾತ ನಟಿಯಾಗಿದ್ದಾರಂತೆ.

ಹಾಗಾದರೆ ಅವರು ಯಾರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಇದನ್ನು ಸಂಪೂರ್ಣವಾಗಿ ಓದಿ. ಹೌದು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸುಬ್ಬಲಕ್ಷ್ಮಿ ಸಂಸಾರ ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ಖಳನಾಯಕನಾಗಿ ಮಿಂಚಿರುವ ಭವಾನಿ ಸಿಂಗ್ ಅವರು ತಮ್ಮನ್ನು ತಾವು ರಜಪೂತ್ ಕನ್ನಡಿಗ ಎಂದು ಕರೆದುಕೊಳ್ಳುತ್ತಾರೆ. ಇನ್ನು ಇವರು ಸುಬ್ಬಲಕ್ಷ್ಮಿ ಸಂಸಾರ ಅಷ್ಟೇ ಅಲ್ಲದೆ ‘ರಕ್ಷಾಬಂಧನ’ ಎಂಬ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದರು.

ಆದರೆ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿ. ಧಾರವಾಹಿಯ ಮೂಲಕ ಅವರು ಜನಪ್ರಿಯತೆ ಪಡೆದು ಇಂದು ಕನ್ನಡ ಕಿರುತೆರೆಯ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನು ನಟ ಭವಾನಿ ಸಿಂಗ್ ಅವರು ಏಪ್ರಿಲ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದ್ದೂರಿಯಾಗಿ ಮದುವೆಯಾದ ಭವಾನಿ ಸಿಂಗ್ ಅವರ ಪತ್ನಿ ಕೂಡ ಕಿರುತೆರೆಯ ನಟಿಯಾಗಿದ್ದಾರೆ.

ಹೌದು ಭವಾನಿ ಸಿಂಗ್ ಅವರು ಪಂಕಜ ಎಂಬುವರನ್ನು ಮದುವೆಯಾಗಿದ್ದರು. ಪಂಕಜ ಅವರು ಕನ್ನಡ ಕಿರುತೆರೆ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಒಬ್ಬರನ್ನೊಬ್ಬರು ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇನ್ನು ಇವರ ಪ್ರೀತಿಗೆ ಅರ್ಥವನ್ನು ನೀಡಲು ಇತ್ತೀಚಿಗಷ್ಟೇ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಭವಾನಿ ಸಿಂಗ್ ಅವರು ಸಾಕಷ್ಟು ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿರುವಂತೆ ಅವರ ಪತ್ನಿ ಕೂಡ ಕಿರುತೆರೆ ಹಾಗೂ ಅನೇಕ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಭವಾನಿ ಸಿಂಗ್ ಹಾಗೂ ಅವರ ಪತ್ನಿ ಪಂಕಜ್ ಅವರು ದಾಂಪತ್ಯ ಜೀವನದ ಸವಿ ಅನುಭವವನ್ನು ಪಡೆಯುತ್ತಿದ್ದು ಸುಖ ಸಂಸಾರ ನಡೆಸುತ್ತಿದ್ದಾರೆ.

Post Author: Ravi Yadav