ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಈ ಬೌಲರ್ ಗಳನ್ನೂ ಆಡಿಸಿ ಎಂದು ಸಲಹೆ ನೀಡಿದ ಅಜಿತ್ ಅಗರ್ಕರ್, ಯಾರು ಆಡಬೇಕಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದೇ ಜೂನ್ 18 ರಿಂದ ಜೂನ್ 22 ರವರೆಗೆ ನಡೆಯಲಿರುವ ಪಂದ್ಯಕ್ಕೆ ಎರಡು ತಂಡಗಳು ಅಭ್ಯಾಸ ನಡೆಸುತ್ತಿವೆ. ಹೆಚ್ಚುವರಿ ತಯಾರಿಯಂತೆ ನ್ಯೂಜಿಲೆಂಡ್ ತಂಡ ಈಗ ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಆರಂಭಿಕ ಬ್ಯಾಟ್ಸ್ ಮನ್ ಕಾನ್ ವೇ ಹಾಗೂ ವೇಗದ ಬೌಲರ್ ಟೀಮ್ ಸೌಥಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಈ ಮಧ್ಯೆ ಕಳೆದ ವಾರ ಸೋಶಿಯಲ್ ಮೀಡಿಯಾದಲ್ಲಿ ಒಂದು ಆಡಿಯೋ ವೈರಲ್ ಆಯಿತು. ಆ ಆಡಿಯೋ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಮಧ್ಯ ನಡೆದ ಸಂಭಾಷಣೆ ಎಂದು ಹೇಳಲಾಗಿತ್ತು. ನ್ಯೂಜಿಲೆಂಡ್ ನ ಒಬ್ಬ ಪ್ರಮುಖ ಏಡಗೈ ಬ್ಯಾಟ್ಸ್ ಮನ್ ರನ್ನ ಹೇಗೆ ಕಟ್ಟಿಹಾಕುವುದು ಎಂದು ಶಾಸ್ತ್ರಿ ಮತ್ತು ಕೊಹ್ಲಿ ಚರ್ಚೆ ನಡೆಸುತ್ತಿದ್ದುದ್ದು ತಿಳಿದು ಬಂದಿತ್ತು. ಅದಲ್ಲದೇ ಮಹಮದ್ ಸಿರಾಜ್ ಸಹ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಚರ್ಚೆಯಾಗಿತ್ತು. ಒಂದು ವೇಳೆ ಮಹಮದ್ ಸಿರಾಜ್ ಆಡಿದರೇ, ಅವರಿಗೆ ಸ್ಥಾನ ಬಿಟ್ಟುಕೊಡುವ ಬೌಲರ್ ಯಾರು ಎಂಬ ಚರ್ಚೆ ಸಹ ಜೋರಾಗಿತ್ತು.

ಈ ನಡುವೆ ಭಾರತ ತಂಡದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಯಾವ ಭಾರತೀಯ ವೇಗದ ಬೌಲರ್ ಗಳು ಆಡಬೇಕೆಂದು ಹೇಳಿದ್ದಾರೆ. ಅವರ ಪ್ರಕಾರ ಭಾರತದ ಈ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ ಗಳನ್ನ ಆಡಿಸಿದರೇ, ಖಂಡಿತ ಭಾರತ ಟೆಸ್ಟ್ ನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಅಜಿತ್ ಅಗರ್ಕರ್ ಹೇಳಿರುವ ಪ್ರಕಾರ , ಭಾರತದ ವೇಗದ ಸಾರಥ್ಯವನ್ನ ವೇಗಿಗಳಾದ ಇಶಾಂತ್ ಶರ್ಮಾ, ಜಸಪ್ರಿತ್ ಬುಮ್ರಾ, ಮಹಮದ್ ಶಮಿ ನಿರ್ವಹಿಸಬೇಕು. ಸ್ಪಿನ್ನರ್ ಗಳಾಗಿ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ನಿರ್ವಹಿಸಬೇಕು ಎಂದು ಹೇಳಿದ್ದಾರೆ. ಈ ಟೆಸ್ಟ್ ಪಂದ್ಯಕ್ಕೆ ಐಸಿಸಿ ಡ್ಯೂಕ್ ಬಾಲ್ ಬಳಸುತ್ತಿದೆ, ಆ ಕಾರಣಕ್ಕೆ ಹಲವಾರು ವರ್ಷಗಳ ಅನುಭವ ಹಾಗೂ ಸದ್ಯ ಉತ್ತಮ ಲಯದಲ್ಲಿರುವ ಇಶಾಂತ್,ಬುಮ್ರಾ,ಶಮಿ ಯವರೇ ಸೂಕ್ತ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಭಾರತದ ಯಾವ ಬೌಲರ್ ಗಳು ಆಡಬೇಕು ಎಂಬ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Facebook Comments

Post Author: Ravi Yadav