ಒಂದು ಕಾಲದ ಟಾಪ್ ನಟ ವಿನೋದ್ ಆಳ್ವಾ ಅವರ ಹೆಂಡತಿ ಮತ್ತು ಮಗ ಯಾರು ಎಂದು ಗೊತ್ತಾ?? ಮಗ ಕೂಡ ಟಾಪ್ ನಟ.
ಒಂದು ಕಾಲದ ಟಾಪ್ ನಟ ವಿನೋದ್ ಆಳ್ವಾ ಅವರ ಹೆಂಡತಿ ಮತ್ತು ಮಗ ಯಾರು ಎಂದು ಗೊತ್ತಾ?? ಮಗ ಕೂಡ ಟಾಪ್ ನಟ.
ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಹಲವಾರು ಜನ ಹೊರಗಿನಿಂದ ಬಂದು ಇಲ್ಲಿ ನಟಿಸಿ ಸ್ಟಾರ್ ನಟರಾದವರು ಇದ್ದಾರೆ. ಇನ್ನು ಇಲ್ಲಿ ಕರ್ನಾಟಕದಲ್ಲಿ ಜನಿಸಿ ಪರಭಾಷೆಯಲ್ಲಿ ಹೀರೋ ಆಗಿ ನಂತರ ನಂತರ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವುದು ನಾವು ಕಂಡಿದ್ದೇವೆ. ಇದರಲ್ಲಿ ಯಶಸ್ವಿ ಪಡೆದ ಬೆರಳೆಣಿಕೆಯಷ್ಟು ಜನರಲ್ಲಿ ಇಂದು ನಾವು ಹೇಳಹೊರಟಿರುವ ನಟ ಕೂಡ ಒಬ್ಬರು.
ಹೌದು ಇವರು ಹುಟ್ಟಿದ್ದು ಮಂಗಳೂರಿನಲ್ಲಿ ಆದರೂ ನಟನಾಗಿ ಖ್ಯಾತಿ ಪಡೆದಿದ್ದು ತೆಲುಗು ಚಿತ್ರರಂಗದಲ್ಲಿ. ಟಾಲಿವುಡ್ ನಲ್ಲಿ ನಟನಾಗಿ ಖ್ಯಾತಿಯನ್ನು ಪಡೆದ ನಂತರ ಕನ್ನಡ ಚಿತ್ರರಂಗದಲ್ಲಿ ಎಂಟ್ರಿ ನೀಡಿ ಹೆಸರು ಪಡೆದವರೇ ನಟ ವಿನೋದ್ ಆಳ್ವ. 1963 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಇವರು ನಟನಾಗಿ ಪಾದಾರ್ಪಣೆ ಮಾಡಿದ್ದು ಟಾಲಿವುಡ್ ನ ಮಾಯ ದಾರಿ ಮೊಗುಡು ಎಂಬ ಚಿತ್ರದ ಮೂಲಕ.
ಈ ಚಿತ್ರ ಬಿಡುಗಡೆಯಾಗಿದ್ದು 1984 ರಲ್ಲಿ. ಇದಾದ ಒಂದು ವರ್ಷಕ್ಕೆ ನಟ ವಿನೋದ್ ಆಳ್ವಾರವರು ತವರುಮನೆ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಲ್ಲಿ ಕೂಡ ಯಶಸ್ವಿಯನ್ನು ಪಯಣವನ್ನು ಬೆಳೆಸಲು ಪ್ರಾರಂಭಿಸಿದರು. ಈ ಚಿತ್ರದ ನಂತರ ನಟ ವಿನೋದ್ ಆಳ್ವಾರವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಅವುಗಳಲ್ಲಿ ಮುಖ್ಯವಾದವು ನಮ್ಮ ಊರು ದೇವತೆ, ತಾಳಿಯ ಆಣೆ, ತಾಳಿಗಾಗಿ, ಭೂಮಿ ತಾಯಾಣೆ, ಧರ್ಮಪತ್ನಿ, ಸಾಹಸ ವೀರ, ತಾಯಿಕರುಳು, ತಾಯಿಯ ಆಸೆ, ಕೃಷ್ಣ ಮೆಚ್ಚಿದ ರಾಧೆ, ಮಾಧುರಿ, ಬಾಳ ಹೊಂಬಾಳೆ, ಹೊಸಕಾವ್ಯ, ಸಿಂಗಾರಿ ಬಂಗಾರಿ, ಕಾಡಿನ ವೀರ, ಅಮರ್ ಅಕ್ಬರ್ ಆಂತೋನಿ, ನೀಲಾಂಬರಿ, ಕುಳ್ಳರ ಲೋಕ, ಪಂಜಾಬಿ ಹೌಸ್, ತ್ರಿಶಕ್ತಿ, ಬಾರ್ಡರ್, ಶ್ರೀ ಕಾಳಿಕಾಂಬಾ, ಪಾಂಡವ, ಯಾಕೆ, ಗಡಿಪಾರು, ಒಂಟಿಮನೆ, ಪವರ್, ಇತ್ಯಾದಿ.
ವಿನೋದ್ ಆಳ್ವಾರವರು ಇದುವರೆಗೂ ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿನೋದ್ ಆಳ್ವಾರವರು ತಮ್ಮ ಸಿನಿ ಜೀವನದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮ ನಟನೆಯಿಂದ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆ ಕಾಲದಲ್ಲಿ ತೆಲುಗಿನ ಖ್ಯಾತ ನಟರಾದ ಚಿರಂಜೀವಿ ಹಾಗೂ ಬಾಲಯ್ಯ ರವರು ದೊಡ್ಡ ದೊಡ್ಡ ಬಜೆಟ್ ನ ಅದ್ದೂರಿ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದರೆ ನಟ ವಿನೋದ್ ಆಳ್ವಾ ಚಿಕ್ಕ ಚಿಕ್ಕ ಬಜೆಟ್ ಹೊಂದಿರುವ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದರು.
ಇದು ಅವರ ವಿಶೇಷತೆ ಎಂದೇ ಹೇಳಬಹುದು. ಅಲ್ಲದೆ ವಿನೋದ್ ಆಳ್ವಾರವರು ತೆಲುಗು ಚಿತ್ರರಂಗದಲ್ಲಿ ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಅತ್ಯುನ್ನತ ಪ್ರಶಸ್ತಿ ನಂದಿ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಆನಂತರದ ದಿನಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡರು ಅಷ್ಟೊಂದು ಯಶಸ್ಸನ್ನು ಪಡೆದ ನಟ ವಿನೋದ್ ಆಳ್ವ ಮುಂಬೈಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡರು. ಇನ್ನು ಇವರ ಮಕ್ಕಳು ಕೂಡ ಈ ಕ್ಷೇತ್ರದಲ್ಲಿ ಹೆಸರು ಮಾಡಲು ಸಿದ್ಧರಾಗಿದ್ದಾರೆ. ಹೌದು ನಟ ವಿನೋದ್ ಆಳ್ವಾ ರವರು ತಮ್ಮ ಮಕ್ಕಳನ್ನು ಸಹ ಚಿತ್ರರಂಗದಲ್ಲಿ ಪರಿಚಯಿಸಿ ಅವರನ್ನು ನಟರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ನಟ ವಿನೋದ್ ಆಳ್ವ ರವರಿಗೆ ಇಬ್ಬರು ಗಂಡು ಮಕ್ಕಳು. ವಿನೋದ ಅವರ ಮಕ್ಕಳ ಹೆಸರು ಆಯೆದಾ ಹಾಗೂ ಅನದ್. ತಮ್ಮಂತೆಯೇ ತಮ್ಮ ಮಕ್ಕಳು ಸಹ ಸಿನಿರಂಗದಲ್ಲಿ ಏನಾದರೂ ಹೆಸರು ಮಾಡಿ ಏನಾದರೂ ಸಾಧಿಸಬೇಕೆಂಬುದು ವಿನೋದ್ ಆಳ್ವಾ ಅವರ ಮಹದಾಸೆ. ಅದಕ್ಕಾಗಿ ತಮ್ಮ ಮಕ್ಕಳನ್ನು ಅತ್ಯುನ್ನುತ ಹೆಸರನ್ನು ಹೊಂದಿರುವ ಸಿನಿ ಶಿಕ್ಷಣ ಸಂಸ್ಥೆಗೆ ಈಗಾಗಲೇ ಸೇರಿಸಿದ್ದಾರೆ ಹಾಗೂ ಮಕ್ಕಳು ಕೂಡ ಶ್ರದ್ಧೆಯಿಂದ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಟ ವಿನೋದ್ ಆಳ್ವಾರವರಂತೆ ಅವರ ಮಕ್ಕಳು ಸಹ ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿಯನ್ನು ಗಳಿಸಿದರೆ ಅಚ್ಚರಿಪಡುವಂತಾದ್ದಿಲ್ಲ. ಹಿರಿಯ ನಟ ವಿನೋದ್ ಆಳ್ವ ರವರ ಜೀವನದ ಕುರಿತಂತೆ ಕಥೆ ಕೇಳಿದ್ರಲ್ಲ ನಿಮಗೆ ಅವರ ಕುರಿತಂತೆ ಏನನ್ನಿಸಿತು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ನಮಗೆ ತಿಳಿಸಿ.