ಮಾರ್ಗನ್ ಗೆ ಬಿಗ್ ಶಾಕ್ ನೀಡಿದ KKR, ನೂತನ ನಾಯಕನ್ಯಾರು ಗೊತ್ತೇ?? ಭಾರತದ ಭವಿಷ್ಯದ ನಾಯಕನ ಉಗಮವೇ??

ಮಾರ್ಗನ್ ಗೆ ಬಿಗ್ ಶಾಕ್ ನೀಡಿದ KKR, ನೂತನ ನಾಯಕನ್ಯಾರು ಗೊತ್ತೇ?? ಭಾರತದ ಭವಿಷ್ಯದ ನಾಯಕನ ಉಗಮವೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ಐಪಿಎಲ್ 2021ರ ಮುಂದುವರೆದ ಚರಣ ಯು.ಎ.ಇ ಯಲ್ಲಿ ನಡೆಯುತ್ತಿರುವುದು ತಿಳಿದಿದೆ. ಎಲ್ಲವೂ ಅಂದುಕೊಂಡಂತೆ ಆದರೇ, ಸೆಪ್ಟೆಂಬರ್ 18 ರಿಂದ ಐಪಿಎಲ್ ನಡೆಯಲಿದೆ. ಆದರೇ ಎಲ್ಲಾ ತಂಡಗಳಿಗೂ ಪ್ರಮುಖ ವಿದೇಶಿ ಆಟಗಾರರ ಸಮಸ್ಯೆ ಎದುರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮುಖ್ಯವಾಗಿ ವಿದೇಶಿ ಆಟಗಾರರ ಪೈಕಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು ಭಾಗವಹಿಸುವ ಸಾಧ್ಯತೆ ಕಡಿಮೆ.

ಇನ್ನು ಕಳೆದ ಭಾರಿ ನೀರಸ ಪ್ರದರ್ಶನ ತೋರಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ 2021ರಲ್ಲಿಯೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಇದಕ್ಕೆ ಶಾಕಿಂಗ್ ನ್ಯೂಸ್ ಎಂಬಂತೆ, ಕೊಲ್ಕತ್ತಾ ತಂಡದ ಸ್ಟಾರ್ ವೇಗಿ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ತಾವು ಐಪಿಎಲ್ ನ ಮುಂದುವರಿದ ಚರಣದಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಐಪಿಎಲ್ ನಡೆಯುವ ಸಮಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾ ದೇಶದ ವಿರುದ್ದ ಏಕದಿನ ಹಾಗೂ ಟಿ 20 ಸರಣಿ ಆಡಲಿದೆ. ಹಾಗಾಗಿ ಇಂಗ್ಲೆಂಡ್ ತಂಡದ ಏಕದಿನ ಮತ್ತು ಟಿ 20 ತಂಡದ ನಾಯಕರಾದ ಇಯಾನ್ ಮೋರ್ಗನ್ ಸಹ ಭಾಗವಹಿಸುವುದು ಈಗ ಅನುಮಾನವಾಗಿದೆ. ಹಾಗಾದರೇ ಕೆಕೆಆರ್ ತಂಡಕ್ಕೆ ಈಗ ನಾಯಕನಾರು ಎಂಬ ಹೊಸ ಸಮಸ್ಯೆ ಹುಟ್ಟಿಕೊಂಡಿದೆ.

ಕಳೆದ ಸೀಸನ್ ನಲ್ಲಿ ಮೊದಲ ಸುತ್ತಿನಲ್ಲಿ ನಾಯಕತ್ವ ವಹಿಸಿದ್ದ ದಿನೇಶ್ ಕಾರ್ತಿಕ್ ರನ್ನ ನಾಯಕರನ್ನಾಗಿ ಮಾಡಲು ತಂಡದ ಮ್ಯಾನೇಜ್ ಮೆಂಟ್ ಒಪ್ಪುತ್ತಿಲ್ಲ. ಕಾರಣ ದಿನೇಶ್ ಕಾರ್ತಿಕ್ ಪ್ರದರ್ಶನ ಉತ್ತಮವಾಗಿಲ್ಲ. ನಾಯಕನಾದರೇ ಆ ಒತ್ತಡದಲ್ಲಿ ಅವರ ಪ್ರದರ್ಶನ ಮತ್ತಷ್ಟು ಕಡಿಮೆಯಾಗಬಹುದು. ಹಾಗಾಗಿ ಕೆಕೆಆರ್ ತಂಡ ಈಗ ಹೊಸ ಭಾರತೀಯ ನಾಯಕನಿಗೆ ಹುಡುಕಾಡುತ್ತಿದೆ.

ತಂಡದ ಪ್ರಮುಖ ಕೋಚ್ ಬ್ರೆಂಡನ್ ಮೆಕಲಂ ಹಾಗೂ ಸಹಾಯಕ ಸಿಬ್ಬಂದಿ ಈ ಭಾರತೀಯ ಯುವಕನಿಗೆ ನಾಯಕತ್ವ ಪಟ್ಟ ಕಟ್ಟಲು ಸಿದ್ದರಾಗಿದ್ದಾರೆ. ಆರಂಭಿಕ ಬ್ಯಾಟ್ಸ್ ಮನ್ ಗಳಾದ ನೀತಿಶ್ ರಾಣಾ ಅಥವಾ ಶುಭಮಾನ್ ಗಿಲ್ ಇಬ್ಬರ ಹೆಸರು ನಾಯಕ ಸ್ಥಾನಕ್ಕೆ ಚರ್ಚೆಯಾಯಿತು. ಆದರೇ ಅನುಭವ, ಸಾಮರ್ಥ್ಯ ಹಾಗೂ ಭವಿಷ್ಯದ ಆಧಾರದ ಮೇಲೆ ಒಂದು ಹೆಸರನ್ನು ನಾಯಕತ್ವದ ಸ್ಥಾನಕ್ಕೆ ಕೆಕೆಆರ್ ತಂಡದ ಆಡಳಿತ ಮಂಡಳಿ ಬಹುತೇಕ ಅಂತಿಮಗೊಳಿಸಿದೆ.

ಹೌದು ಬೇರೆ ಯಾರೂ ಅಲ್ಲ, ಕೆಕೆಆರ್ ತಂಡದ ನೂತನ ನಾಯಕರಾಗಿ ಶುಭಮಾನ್ ಗಿಲ್ ಆಯ್ಕೆ ಬಹುತೇಖ ಅಂತಿಮವಾಗಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ಈ ಹಿಂದೆ ಭಾರತ ತಂಡದ ಅಂಡರ್ 19 ತಂಡದ ಉಪನಾಯಕರಾಗಿ ಹಾಗೂ ಪಂಜಾಬ್ ತಂಡದ ನಾಯಕರಾಗಿ ಅನುಭವ ಇರುವ ಗಿಲ್ ಹೆಸರು ಫೈನಲ್ ಮಾಡಿದೆ. ಸದ್ಯ ಭಾರತೀಯ ಟೆಸ್ಟ್ ತಂಡದಲ್ಲಿ ತಮ್ಮ ಪ್ರದರ್ಶನದ ಮೂಲಕ ಆರಂಭಿಕ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿರುವ ಶುಭಮಾನ್ ಗಿಲ್ ಭವಿಷ್ಯದ ಭಾರತ ತಂಡದ ನಾಯಕರಾಗುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಸದ್ಯ ಸೋಲಿನ ಮೇಲೆ ಸೋಲು ಕಂಡಿರುವ ಕೆಕೆಆರ್ ತಂಡಕ್ಕೆ ಯುವ ನಾಯಕ ಶುಭಮಾನ್ ಗಿಲ್ ಯಾವ ರೀತಿ ತಂಡವನ್ನ ಗೆಲುವಿನ ಹಳಿಗೆ ಕರೆದುಕೊಂಡು ಬರುತ್ತಾರೆಂಬುದು ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಶುಭಮಾನ್ ಗಿಲ್ ರನ್ನ ನಾಯಕನನ್ನಾಗಿ ಆಯ್ಕೆ ಮಾಡಿದ ಕೆಕೆಆರ್ ತಂಡದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.