ಯಶ್ ಕೇವಲ 5000 ನೀಡಿರಬಹುದು, ಆದರೆ… ಮಹತ್ವದ ಮಾತನ್ನು ಹೇಳಿದ್ದ ಸೂಪರ್ ಹಂದಿ ಪಾತ್ರದಾರಿ ಸೀನ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಚಿತ್ರೋದ್ಯಮಕ್ಕೆ ನೆರವಾಗಲು ಹಲವಾರು ಜನ ಮುಂದೆ ಬಂದಿದ್ದರು. ಆದರೇ ಅದರಲ್ಲಿ ಯಶ್ ಮಹತ್ ಅನ್ನುವ ಸಹಾಯ ಮಾಡಿದ್ದರು. ಚಿತ್ರರಂಗದಲ್ಲಿ ಸಂಕಷ್ಟದಲ್ಲಿ ಕಲಾವಿದ, ತಂತ್ರಜ್ಞ, ಸಹ ನಟರ ಕುಟುಂಬಗಳಿಗೆ, ಪ್ರತಿ ಕುಟುಂಬದ ಬ್ಯಾಂಕ್ ಅಕೌಂಟ್ ಗೆ ಐದು ಸಾವಿರ ರೂಪಾಯಿ ಜಮಾ ಮಾಡುತ್ತೇನೆ ಎಂದು ಹೇಳಿದ್ದರು. ನಟ ಯಶ್ ಹೇಳಿದಂತೆ ಆ ಐದು ಸಾವಿರ ರೂಪಾಯಿ ಹಣವನ್ನ ಸಂಕಷ್ಟದಲ್ಲಿದ್ದವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಆ ಹಣವನ್ನ ಪಡೆದ ಹಲವು ಕಲಾವಿದರು ನಟ ಯಶ್ ರವರಿಗೆ ತಮ್ಮದೇ ರೀತಿಯಲ್ಲಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಆದರೇ ಅದರಲ್ಲಿಯೂ ವಿಶೇಷವಾಗಿ ಹಂದಿ ಸೀನ ಹೇಳಿದ ಅಭಿನಂದನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಡುತ್ತಿದೆ. ಅಷ್ಟಕ್ಕೂ ಈ ಹಂದಿ ಸೀನ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು ಉಪೇಂದ್ರ ಅಭಿನಯದ ಸೂಪರ್ ಸಿನಿಮಾ ನೋಡಿರುತ್ತಿರೆಂದರೇ, ಅಲ್ಲಿ ಬರುವ ಧಡೂತಿ ಪಾತ್ರದ ಹೆಸರೇ ಹಂದಿ ಸೀನ. ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಸ್ಥೂಲ ಕಾಯವೇ ಅವರಿಗೆ ಇರುವ ಪ್ಲಸ್ ಪಾಯಿಂಟ್. ಹಂದಿ ಸೀನರವರ ನಿಜವಾದ ಹೆಸರು ಅರಸು ಎಂದು. ಆದರೇ ಸೂಪರ್ ಸಿನಿಮಾ ಹಿಟ್ ಆದ ನಂತರ ಹಲವಾರು ಜನ ಇವರನ್ನ ಹಂದಿ ಸೀನ ಎಂಬ ಹೆಸರಿನಿಂದ ಗುರುತಿಸುತ್ತಾರಂತೆ.

ಈಗ ಯಶ್ ರಿಂದ ಸಹಾಯ ಪಡೆದ ಅರಸು ಅಲಿಯಾಸ್ ಹಂದಿ ಸೀನ ಒಂದು ವಿಡಿಯೋ ಮೂಲಕ ಯಶ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ವೀಡಿಯೋದಲ್ಲಿ ಹೇಳಿರುವಂತೆ, ನಟ ಯಶ್ ರವರಿಗೆ ಐದು ಸಾವಿರ ರೂಪಾಯಿ ಅಂತಹ ದೊಡ್ಡ ಅಮೌಂಟ್ ಏನಲ್ಲ, ಆದರೇ 3000 ಜನರಿಗೆ ಅಂದರೇ ಬರೋಬ್ಬರಿ ಒಂದುವರೆ ಕೋಟಿ ರೂಪಾಯಿ ನೀಡಿದ್ದಾರಲ್ವಾ, ಅದು ದೊಡ್ಡ ಅಮೌಂಟ್, ಆ ದೇವರು ಯಶ್ ರವರ ಕುಟುಂಬವನ್ನ ಸದಾ ಹೀಗೆ ಇಟ್ಟಿರಲಿ, ಅವರ ಕೈ ಕಲ್ಪವೃಕ್ಷವಾಗಲಿ ಎಂದು ಮನತುಂಬಿ ಹಾರೈಸಿದ್ದಾರೆ. ಇದೇ ರೀತಿ ಹಿರಿಯ ನಟ ಎಂ.ಎಸ್ ಉಮೇಶ್, ಮದುಮಗ ಮೋಹನ್ ಜುನೇಜಾ ಹಲವಾರು ಜನ ಕಲಾವಿದರು, ತಂತ್ರಜ್ಞರು ಯಶ್ ರವರಿಗೆ ಅಭಿನಂದನೆಯ ಮಹಾಪೂರವನ್ನ ಸೋಶಿಯಲ್ ಮೀಡಿಯಾಗಳ ಮೂಲಕ ತಲುಪಿಸಿದ್ದಾರೆ. ನಟ ಯಶ್ ರವರು ಚಿತ್ರರಂಗದವರಿಗೆ ಮಾಡಿರುವ ಈ ಸಹಾಯದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav