ನಿಜ ಜೀವನದಲ್ಲಿ ಮದುವೆಯಾಗಬೇಕು ಎಂದು ಅಭಿಮಾನಿಗಳು ಬಯಸುತ್ತಿರುವ ಕಿರುತೆರೆಯ ಟಾಪ್ 5 ಜೋಡಿಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಹಾಗೂ ಅನೇಕ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಜೋಡಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಾರೆ. ಹೌದು ಧಾರವಾಹಿಗಳಲ್ಲಿ ನಟಿಸುವ ನಾಯಕನಟ ಹಾಗೂ ನಟಿ ಅಥವಾ ರಿಯಾಲಿಟಿ ಶೋಗಳಲ್ಲಿ ಬರುವ ಅನೇಕ ಸ್ಪರ್ಧಿಗಳು ಸಖತ್ ಕ್ಯೂಟ್ ಆಗಿ ಕಾಣುತ್ತಾರೆ.

ಇನ್ನು ಇಂತಹ ಕಿರುತೆರೆಯ ಜೋಡಿಗಳು ನಿಜಜೀವನದಲ್ಲಿ ಒಂದಾಗಬೇಕೆಂದು ಸಾಕಷ್ಟು ಅಭಿಮಾನಿಗಳು ಆಸೆಪಡುತ್ತಾರೆ. ಇನ್ನು ಅಂತಹ ಕಿವುಡ ಜೋಡಿಗಳು ನಿಜಜೀವನದಲ್ಲಿಯೂ ಕೂಡ ಮದುವೆಯಾಗಬೇಕೆಂದು ಅಭಿಮಾನಿಗಳು ಇಷ್ಟಪಡುವ ಕಿರುತೆರೆಯ ಟಾಪ್ 5 ಜೋಡಿಗಳು ಯಾವುವು ಗೊತ್ತಾ? ಹಾಗಾದರೆ ಜೋಡಿಗಳು ಯಾವವು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಬನ್ನಿ.

ರಂಜನಿ ಮತ್ತು ಕಿರಣ್: ಹೌದು ಕನ್ನಡ ಕಿರುತೆರೆಯ ಕ್ಯೂಟ್ ಜೋಡಿಗಳಲ್ಲಿ ರಂಜನಿ ಮತ್ತು ಕಿರಣ್ ಜೋಡಿ ಕೂಡ ಒಂದು. ಹೌದು ಇದೀಗ ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಕನ್ನಡತಿ ಕೂಡ ಒಂದಾಗಿದೆ. ಇತರ ಧಾರಾವಹಿಯಲ್ಲಿ ಸೌಪರ್ಣಿಕಾ ಪಾತ್ರದಲ್ಲಿ ನಟಿಸುತ್ತಿರುವ ರಂಜನಿ ರಾಘವನ್ ಹಾಗೂ ಹರ್ಷ ಪಾತ್ರದಲ್ಲಿ ನಟಿಸುತ್ತಿರುವ ಕಿರಣ್ ರಾಜ್ ಜೋಡಿ ಎಲ್ಲಾ ಪ್ರೇಕ್ಷಕರಿಗೆ ತುಂಬಾ ನೆಚ್ಚಿನ ಜೋಡಿಯಾಗಿದೆ. ಇನ್ನು ಇವರು ನೋಡಲು ಮೇಡ್ ಫಾರ್ ಈಚ್ ಅದರ್ ಎಂದು ಅನಿಸಿದ್ದು ಸಾಕಷ್ಟು ಅಭಿಮಾನಿಗಳು ಇವರು ನಿಜ ಜೀವನದಲ್ಲಿ ಕೂಡ ಒಂದಾಗಬೇಕೆಂದು ಆಶಿಸುತ್ತಿದ್ದಾರೆ.

ರಂಜನಿ ರಾಘವನ್ ಅವರು ಕೆಳದಿ ಚೆನ್ನಮ್ಮ, ಆಕಾಶದೀಪ, ಪುಟ್ಟಗೌರಿ ಮದುವೆ, ಕನ್ನಡತಿ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅದೇ ರೀತಿ ಕಿರಣ್ ರಾಜ್ ಅವರು ದೇವತೆ, ಗುಂಡಯ್ಯನ ಹೆಂಡತಿ, ಚಂದ್ರಮುಖಿ, ಕಿನ್ನರಿ ಸೇರಿದಂತೆ ಅನೇಕ ಕನ್ನಡ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಅನೇಕ ಹಿಂದಿ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ಈ ಜೋಡಿ ನಿಜಜೀವನದಲ್ಲಿಯೂ ಕೂಡ ಒಂದಾದರೆ ಸಾಕಷ್ಟು ಅಭಿಮಾನಿಗಳು ಖುಷಿಪಡುವುದಂತು ಸತ್ಯ.

ಅಂಕಿತ ಮತ್ತು ದೀಪಕ್ ಗೌಡ: ಹೌದು ಈ ಜೋಡಿ ಕೂಡ ಕನ್ನಡದ ಟಾಪ್ ಕ್ಯೂಟಿ ಜೋಡಿಗಳಲ್ಲಿ ಒಂದಾಗಿದೆ. ಈ ಜೋಡಿ ಕನ್ನಡ ಕಿರುತೆರೆಯ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಾಯಕನಟ ಹಾಗೂ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಹೌದು ಈ ಧಾರಾವಾಹಿಯಲ್ಲಿ ಅಂಕಿತ ಅಮರ್ ಅವರು ಮೀರಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ, ದೀಪಕ್ ಗೌಡ ಅವರು ಅನಿಕೇತ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿ ಕೂಡ ನಿಜ ಜೀವನದಲ್ಲಿ ಒಂದಾಗಲಿ ಎಂದು ಸಾಕಷ್ಟು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. ಇದೀಗ ಇವರಿಬ್ಬರೂ ಕೂಡ ಕಿರುತೆರೆಯಲ್ಲಿ ತೊಡಗಿಕೊಂಡಿದ್ದು ಮುಂದಿನ ದಿನಗಳಲ್ಲಿ ಒಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ನಮ್ರತಾ ಗೌಡ ಮತ್ತು ನಿನಾದ್: ನಮ್ರತಾ ಗೌಡ ಹಾಗೂ ತ್ರಿಶೂಲ್ ಅವರು ಒಟ್ಟಾಗಿ ಕನ್ನಡ ಕಿರುತೆರೆಯ ನಾಗಿಣಿ 2 ಎಂಬ ಧಾರಾವಾಹಿಯಲ್ಲಿ ನಾಯಕ ನಟಿ ಹಾಗೂ ನಟರಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಇವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಕನ್ನಡ ಕಿರುತೆರೆಯ ಮೇಡ್ ಫಾರ್ ಈಚ್ ಅದರ್ ಜೋಡಿ ಆಗಿದೆ.

ಇನ್ನು ಈ ಧಾರಾವಾಹಿಯಲ್ಲಿ ಅಮೃತ ಗೌಡ ಅವರು ಶಿವಾನಿ ಎಂಬ ಪಾತ್ರದಲ್ಲಿ ನಾಗಿಣಿಯಾಗಿ ಅಭಿನಯಿಸಿದರೆ, ನಿನಾದ್ ಅವರು ತ್ರಿಶೂಲ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಮ್ರತಾ ಗೌಡ ಅವರು ಮಂಗಳ ಗೌರಿ ಮದುವೆ ಎಂಬ ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ. ಇನ್ನು ತ್ರಿಶೂಲ್ ಅವರು ಅರಮನೆ ಸೇರಿದಂತೆ ಸಾಕಷ್ಟು ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಜೋಡಿ ಕೂಡ ನಿಜಜೀವನದಲ್ಲಿ ಮದುವೆಯಾಗಲಿ ಎಂದು ಸಾಕಷ್ಟು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ: ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಕೂಡ ಕನ್ನಡ ಕಿರುತೆರೆಯ ಖ್ಯಾತ ಜೋಡಿಗಳಲ್ಲಿ ಒಂದು. ಹೌದು ಜೋಡಿ ಕನ್ನಡದ ಬಿಗ್ ಬಾಸ್ ಸೀಸನ್ 7 ರಲ್ಲಿ ಕಾಣಿಸಿಕೊಂಡಿತ್ತು. ಇನ್ನು ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಹೆಚ್ಚಾಗಿ ಒಟ್ಟಿಗೆ ಓಡಾಡುತ್ತಿದ್ದರು. ಅಷ್ಟೇ ಅಲ್ಲದೆ ಇವರಿಬ್ಬರ ಮಧ್ಯೆ ಆತ್ಮೀಯತೆ ಕೂಡ ಹೆಚ್ಚಾಗಿ ಕಂಡಿದ್ದು ಹಲವಾರು ವೀಕ್ಷಕರು ಇವರಿಬ್ಬರ ಮಧ್ಯೆ ಪ್ರೀತಿ ಮೂಡಿದೆ ಎಂದು ಭಾವಿಸಿದ್ದರು.

ಹೀಗಾಗಿ ಈ ಜೋಡಿ ನಿಜ ಜೀವನದಲ್ಲೂ ಕೂಡ ದಾಂಪತ್ಯ ಜೀವನಕ್ಕೆ ಕಾರ್ಯದಲ್ಲಿ ಎಂದು ಸಾಕಷ್ಟು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. ಇನ್ನು ದೀಪಿಕಾ ದಾಸ್ ಅವರು ದೂದ್ ಸಾಗರ್, ಡ್ರೀಮ್ ಗರ್ಲ್ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ‘ಈ ಮನಸೆ’ ಎಂಬ ತೆಲುಗು ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿಯಲ್ಲಿ ಕೂಡ ನಾಯಕ ನಟಿಯಾಗಿ ನಟಿಸಿದ್ದರು.

ದಿವ್ಯ ಉರುಡುಗ ಮತ್ತು ಅರವಿಂದ್: ಇತ್ತೀಚಿಗೆ ಕನ್ನಡದ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಜೋಡಿ ಇದಾಗಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳ ಮೂಲಕ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದು ನಂತರದ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಕೂತು ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಇನ್ನು ಇವರ ಆತ್ಮೀಯತೆ ನೋಡಿ ಸಾಕಷ್ಟು ವೀಕ್ಷಕರು ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಅದಕ್ಕೆ ಸಾಕ್ಷಿ ಎಂಬಂತೆ ಇವರ ಚಟುವಟಿಕೆಗಳು ಬಿಗ್ ಬಾಸ್ ಮನೆಯಲ್ಲಿ ಅತಿಯಾಗಿ ಕಾಣಿಸಿಕೊಂಡಿದ್ದವು.

ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ದಿವ್ಯ ಉರುಡುಗ ಅವರು ತಮ್ಮ ತಂದೆ ತಮಗೆ ಕೊಟ್ಟ ಉಂಗುರವನ್ನು ಅರವಿಂದ್ ಅವರಿಗೆ ಕೊಟ್ಟಿದ್ದರು. ಇದೀಗ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮದುವೆ ವಿಚಾರವಾಗಿ ಸುದ್ದಿಯಲ್ಲಿದೆ. ಇನ್ನು ಈ ಜೋಡಿಯ ಫ್ಯಾನ್ ಪೇಜ್ ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗಿವೆ. ಹೀಗಾಗಿ ಈ ಜೋಡಿ ನಿಜಜೀವನದಲ್ಲಿ ಒಂದಾಗಬೇಕೆಂದು ಸಾಕಷ್ಟು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇನ್ನು ಈ ಜೋಡಿ ನಿಜಜೀವನದಲ್ಲಿ ಒಂದಾಗುತ್ತದೆಯೇ ಎಂಬುದನ್ನು ಕಾದುನೋಡಬೇಕು.

Post Author: Ravi Yadav