ಪ್ರತಿಯೊಬ್ಬ ಪುರುಷರು ಬೆಳ್ಳುಳ್ಳಿ ಹೆಚ್ಚು ಸೇವಿಸಬೇಕು ಯಾಕೆ ಗೊತ್ತೇ?? ಮಹಿಳೆಯರಿಗೂ ಹೆಚ್ಚಿನ ವರದಾನವೇ ಈ ಬೆಳ್ಳುಳ್ಳಿ.
ಪ್ರತಿಯೊಬ್ಬ ಪುರುಷರು ಬೆಳ್ಳುಳ್ಳಿ ಹೆಚ್ಚು ಸೇವಿಸಬೇಕು ಯಾಕೆ ಗೊತ್ತೇ?? ಮಹಿಳೆಯರಿಗೂ ಹೆಚ್ಚಿನ ವರದಾನವೇ ಈ ಬೆಳ್ಳುಳ್ಳಿ.
ನಮಸ್ಕಾರ ಸ್ನೇಹಿತರೇ ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿ ಬಳಸುವುದು ಸರ್ವೇಸಾಮಾನ್ಯ. ಹೌದು ಇದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಇನ್ನು ಕೆಲವರು ಬೆಳ್ಳುಳ್ಳಿ ತಿಂದರೆ ಬಾಯಿಯಿಂದ ದುರ್ವಾಸನೆ ಬರುತ್ತದೆ ಎಂದು ಅದನ್ನು ಕೆಲವರು ತಿನ್ನುವುದಿಲ್ಲ. ಇನ್ನು ಈ ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಕೂಡ ಕಂಡುಬರುತ್ತವೆ. ಅಷ್ಟೇ ಅಲ್ಲದೆ ಇದನ್ನು ಪ್ರತಿನಿತ್ಯ ಸೇವಿಸುವುದರ ಮೂಲಕ ನಾವು ಆರೋಗ್ಯಕರವಾಗಿ ಜೀವನ ಸಾಗಿಸಬಹುದು.
ಹೌದು ಇದು ಹಲವಾರು ಕಾಯಿಲೆಗಳಿಗೆ ಮನೆ ಮದ್ದಾಗಿದೆ. ಹೌದು ಬೊಜ್ಜಿನ ಸಮಸ್ಯೆಯಿಂದ ಚಿಂತೆಗೀಡಾದವರು ಪ್ರತಿನಿತ್ಯ ಬೆಳ್ಳುಳ್ಳಿ ಎಸಳನ್ನು ಸೇವಿಸುವುದರಿಂದ ಅವರು ಈ ಸಮಸ್ಯೆಯಿಂದ ಮುಕ್ತರಾಗಬಹುದು. ಇನ್ನು ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ನಮ್ಮ ತ್ವಚೆ ಮೇಲೆ ಆಗಿರುವ ಹುಲ್ಲು ಕಡ್ಡಿ ಮೇಲೆ ಬೆಳ್ಳುಳ್ಳಿ ರಸ ಹಚ್ಚಿದರೆ ಅವು ಕೂಡ ಕಡಿಮೆಯಾಗುತ್ತದೆ. ಇನ್ನೂ ಪ್ರತಿನಿತ್ಯ ಬೆಳ್ಳುಳ್ಳಿ ಎಸಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಕೂಡ ಸರಾಗವಾಗಿ ಸಾಗುತ್ತದೆ.
ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಸಾಗಿ ಹೃದಯದ ಆರೋಗ್ಯ ಕೂಡ ಸದೃಢವಾಗಿರುತ್ತದೆ. ಇನ್ನು ಕೂದಲು ಹಾಗೂ ಚರ್ಮದ ಸಮಸ್ಯೆಗಳನ್ನು ಎದುರಿಸುವ ಅವರು ಪ್ರತಿನಿತ್ಯ ಬೆಳ್ಳುಳ್ಳಿ ಸೇವಿಸಿದರೆ ಇಂತಹ ಸಮಸ್ಯೆಗಳಿಂದ ಅವರು ದೂರವಿರಬಹುದು. ಹೌದು ಬೆಳ್ಳುಳ್ಳಿಯಲ್ಲಿ ಕೂದಲನ್ನು ಸದೃಡಗೊಳಿಸುವ ಪೋಷಕಾಂಶಗಳಿದ್ದು ಇವು ಆಂತರಿಕವಾಗಿ ಕೂದಲನ್ನು ಸದೃಢಗೊಳಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹದ ಮೇಲೆ ಕುರು ಆದಾಗ ಅಲ್ಲಿ ಬೆಳ್ಳುಳ್ಳಿ ಎಸಳನ್ನು ಸ್ವಲ್ಪ ಜಜ್ಜಿ ಅದರ ಮೇಲೆ ಓದುವುದರ ಮೂಲಕ ಅದನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.
ಇನ್ನು ಬೆಳ್ಳುಳ್ಳಿಯಲ್ಲಿ ಪ್ಲೊನೋಯಿಡ್ಸ ಎಂಬ ಅಂಶವಿದ್ದು ಇದು ಡಿ ಎನ್ ಎ ಏನು ಆಗದಂತೆ ಕಾಪಾಡುತ್ತದೆ. ಇದರಿಂದ ನಾವು ಕ್ಯಾನ್ಸರ್ ನಂತಹ ರೋಗಗಳಿಂದ ಕೂಡ ದೂರವಿರಬಹುದು. ಇನ್ನು ಇಂದಿನ ದಿನಗಳಲ್ಲಿ ಎಲ್ಲರೂ ಹೆಚ್ಚಾಗಿ ಟೆನ್ಶನ್ ಅನುಭವಿಸುತ್ತಿರುತ್ತಾರೆ. ಇದರಿಂದಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಇಂತಹವರು ಕೂಡ ಪ್ರತಿನಿತ್ಯ ಬೆಳ್ಳುಳ್ಳಿ ಸೇವಿಸುವುದು ಉತ್ತಮ. ಇನ್ನು ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿರುವುದರಿಂದ ಇವು ನಮ್ಮ ದೇಹದಲ್ಲಿರುವ ರಾಸಾಯನಿಕ ವಸ್ತುಗಳನ್ನು ಹೊರಹಾಕಿ ನಮ್ಮ ದೇಹ ಆರೋಗ್ಯವಾಗಿರುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ನಿಯಂತ್ರಣದಲ್ಲಿಡುತ್ತದೆ.
ಪ್ರತಿದಿನ ಬೆಳಗ್ಗೆ ಬೆಳ್ಳುಳ್ಳಿಯ ಎರಡು ಹೆಸರುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲನ್ನು ನಿಯಂತ್ರಿಸಬಹುದು. ಇನ್ನೂ ಇಂದಿನ ದಿನಗಳಲ್ಲಿ ಬೊಜ್ಜು ಹಾಗೂ ದಪ್ಪಾಗಿರುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇಂಥವರು ತೂಕ ಇಳಿಸಿಕೊಳ್ಳಲು ಸಾಕಷ್ಟು ರೀತಿಯ ವ್ಯಾಯಾಮ ಹಾಗೂ ಅನೇಕ ರೀತಿಯ ರಾಸಾಯನಿಕ ಪದಾರ್ಥಗಳ ಮೊರೆಹೋಗುತ್ತಾರೆ. ಇವರು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 2 ಬೆಳ್ಳುಳ್ಳಿ ಎಸಳುಗಳನ್ನು ಸೇವಿಸುವುದು ಉತ್ತಮ. ಪ್ರತಿದಿನ 2 ಬೆಳ್ಳುಳ್ಳಿ ಎಸಳು ಹಾಗೂ ವ್ಯಾಯಾಮ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಉತ್ತಮ ಮಾರ್ಗ ಎಂದು ಹೇಳಬಹುದು.
ಇನ್ನು ಪ್ರತಿನಿತ್ಯ ಬೆಳ್ಳುಳ್ಳಿ ಎಸಳುಗಳನ್ನು ಬಾಯಲ್ಲಿಟ್ಟು ಜಗಿಯುವುದರಿಂದ ಸಾಂ-ಕ್ರಾಮಿಕ ರೋ-ಗಗಳಾದ ಜ್ವರ, ನೆಗಡಿ ಇತ್ಯಾದಿಗಳು ಕೂಡ ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ ಉಸಿರಾಟದ ತೊಂದರೆ ಇರುವವರಿಗೆ ಇದು ಉತ್ತಮ ಮನೆಮದ್ದಾಗಿದೆ. ಇದರಲ್ಲಿರುವ ಅಲೈಸಿನ್ ಪೋಷಕಾಂಶ ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಅಷ್ಟೇ ಅಲ್ಲದೆ ರಕ್ತವನ್ನು ಶುದ್ಧೀಕರಿಸಲು ಕೂಡ ಇದು ಸಹಕಾರಿಯಾಗಿದೆ. ಪ್ರತಿನಿತ್ಯ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದರ ಮೂಲಕ ಜೀರ್ಣಕ್ರಿಯೆ, ಸಾಂ-ಕ್ರಾಮಿಕ ರೋ-ಗ ಸೇರಿದಂತೆ ಸಾಕಷ್ಟು ಕಾಯಿಲೆಗಳಿಂದ ನಾವು ದೂರವಿರಬಹುದು.
ಇನ್ನು ಬೆಳ್ಳುಳ್ಳಿಯಲ್ಲಿರುವ ಯಝೋನ್ ಎಂಬ ರಾಸಾಯನಿಕ ಅಂಶ ನಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಕೂಡ ತಡೆಯುತ್ತದೆ. ಇನ್ನು ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದು ಆರೋಗ್ಯಕ್ಕೆ ಅತ್ಯುತ್ತಮ. ನೋಡಿದ್ರಲ್ಲ ಸ್ನೇಹಿತರೆ ಒಂದು ಬೆಳ್ಳುಳ್ಳಿ ಹೆಸರು ನಮ್ಮ ದೇಹದ ಆರೋಗ್ಯಕ್ಕೆ ಎಷ್ಟೆಲ್ಲ ರೀತಿಯಲ್ಲಿ ಸಹಾಯಮಾಡುತ್ತದೆ ಅಲ್ಲವೇ..! ಹಾಗಿದ್ದರೆ ಹಿಂದಿನಿಂದಲೇ ನೀವು ಪ್ರತಿನಿತ್ಯ ಒಂದು ಬೆಳ್ಳುಳ್ಳಿ ಎಸಳನ್ನು ತಿಂದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕೂಡ ಇದರ ಬಗ್ಗೆ ತಿಳಿಸಿಕೊಡಿ.