ಯಾರಿಗೂ ತಿಳಿಯದಂತೆ ಕಷ್ಟದಲ್ಲಿದ್ದ ವಿಜಯ ಲಕ್ಷ್ಮಿ ರವರಿಗೆ ವಿನೋದ್ ರಾಜ್ ರವರು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಒಬ್ಬ ನಟಿ ಆರೋಗ್ಯ ಅಸ್ವಸ್ಥತೆಯಿಂದ ಬಳಲುತ್ತಿದ್ದು ನಂತರ ದಿನಗಳಲ್ಲಿ ಕನ್ನಡ ನಟರಾದ ಸುದೀಪ್ ದರ್ಶನ್ ಯಶ್ ಹಾಗೂ ಶಿವಣ್ಣರವರ ಸಹಾಯದೊಂದಿಗೆ ಚೇತರಿಸಿಕೊಂಡು ಬಂದಿದ್ದು ನಿಮಗೆ ಗೊತ್ತಿದೆ. ಹೌದು ನಾವು ಮಾತನಾಡುತ್ತಿರುವುದು ನಟಿ ವಿಜಯಲಕ್ಷ್ಮಿ ಅವರ ಬಗ್ಗೆ. ಆದರೆ ಈ ನಟಿ ಮತ್ತೊಮ್ಮೆ ಈಗ ಸುದ್ದಿಯಲ್ಲಿದ್ದಾರೆ.

ನಟಿ ವಿಜಯಲಕ್ಷ್ಮಿ ಅಂದಿನ ಕಾಲದಲ್ಲಿ ಬಹುಭಾಷೆ ನಟಿಯಾಗಿ ಬಹುಬೇಡಿಕೆಯ ನಟಿಯಾಗಿಯೂ ಕೂಡ ಮಿಂಚಿ ಮೆರೆದವರು. ಆದರೆ ಈಗ ತನಗೆ ಅನ್ಯಾಯವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುತ್ತಾರೆ. ಹೌದು ಹಿಂದೆ ಅವರು ತಮಗೆ ಅನಾರೋಗ್ಯದ ಇದೆ ಸಹಾಯ ಮಾಡಿ ಎಂದು ಕನ್ನಡ ಚಿತ್ರರಂಗವನ್ನು ಕೋರಿದಾಗ, ಮೊದಲಿಗೆ ಸಹಾಯಕ್ಕೆ ಕಿಚ್ಚ ಸುದೀಪ್ ಅವರು ಬರುತ್ತಾರೆ ನಂತರ ಕನ್ನಡ ಚಿತ್ರರಂಗದ ಹಿರಿಯರಾದ ಶಿವಣ್ಣ ಹಾಗೂ ಯುವ ನಟರಾಜ ಯಶ್ ರವರು ಕೂಡ ಸಹಾಯ ಮಾಡುತ್ತಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಇವರಿಗೆ ಸಹ ಮಾಡಿದ್ದಾರೆ ಎಂದು ಕೆಲ ಮೂಲಗಳಿಂದ ತಿಳಿಯಲಾಗಿದೆ. ಈಗ ಈಕೆ ಮತ್ತೊಮ್ಮೆ ತನ್ನ ಅಕ್ಕ ಹುಷಾರ್ ಅವರಿಗೆ ಅನಾರೋಗ್ಯ ವಾಗಿದ್ದು ಆಕೆ ಗುಣಪಡಿಸಲು ಸಹಾಯಮಾಡಿ ಎಂದು ವಿಡಿಯೋ ಮೂಲಕ ಅಂಗಲಾಚುತ್ತಿದ್ದಾರೆ. ಈ ವಿಡಿಯೋಗೆ ಕಾಮೆಂಟ್ ಮಾಡಿದ ಕೆಲವರು ನೀವು ಸಜನ್ ಲೋಕೇಶ್ ಅವರಿಗೆ ಮೋಸ ಮಾಡಿದ್ದೀರಿ ನಿಮಗೆ ಇನ್ನೂ ಸಹಾಯಬೇಕು ಹಾಗೆ ಹೀಗೆ ಎಂದು ಬೇಸರ ವಾಗುವಂತಹ ಕಾಮೆಂಟ್ಗಳನ್ನು ಮಾಡಿದ್ದರು. ಇದಕ್ಕೆ ಉತ್ತರ ನೀಡಿದ ವಿಜಯಲಕ್ಷ್ಮಿಯವರು ನಾನೇನು ಸೃಜನ್ ಲೋಕೇಶ್ ಅವರಿಗೆ ಮೋಸ ಮಾಡಿಲ್ಲ ನನ್ನ ಕೈಯಿಂದಲೇ ಖರ್ಚು ಮಾಡಿ ನಿಶ್ಚಿತಾರ್ಥವನ್ನು ಕೂಡ ಮಾಡಿದ್ದೇನೆ.

ನಾನೇ ಯಾಕೆ ಲಕ್ಷಾಂತರ ರೂಪಾಯಿ ನನ್ನ ನಿಶ್ಚಿತಾರ್ಥಕ್ಕೆ ಖರ್ಚು ಮಾಡಿ ಅದನ್ನು ಮುರಿದು ಕೊಳ್ಳಲಿ ಎಂದು ಹೇಳಿದ್ದಾರೆ. ಅಂದಿನ ಪರಿಸ್ಥಿತಿ ಹಾಗೂ ನಡೆದ ನಿಜ ಸತ್ಯ ನನಗೆ ಮಾತ್ರ ಗೊತ್ತು ಅದರ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ ನೀವುನು ತಮ್ಮ ತಮ್ಮ ಅಭಿಪ್ರಾಯವನ್ನು ನಿಜವೆಂದು ಬಿಂಬಿಸುವಂತೆ ಮಾತನಾಡಬೇಡಿ ಎಂದು ಕೋರಿದ್ದಾರೆ. ಅಲ್ಲದೆ ಪದೇಪದೇ ಸಹ ಕೊಡಬೇಡಿ ಎಂದಿದ್ದರಲ್ಲ ನಾನು ನಿಮಗೆ ಏನು ಮಾಡಿದ್ದೇನೆ ಎಂದು ಅಸಹಾಯಕರಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸ್ಯಾಂಡಲ್ವುಡ್ ನಟರು ಯಾರು ವಿಜಯಲಕ್ಷ್ಮಿ ಇವರ ಅಕ್ಕ ಉಷಾ ಅವರ ಚಿಕಿತ್ಸೆಗೆ ಸಹಾಯ ಮಾಡಲು ಮುಂದೆ ಬರುತ್ತಾರೆ ಎಂದು ಕಾದು ನೋಡಬೇಕಾಗಿದೆ. ಇನ್ನೂ ಈ ಕಷ್ಟಕಾಲದಲ್ಲಿ ಕೂಡ ವಿಜಯಲಕ್ಷ್ಮಿಯವರಿಗೆ ಒಬ್ಬ ನಟ ಸಹಾಯ ಮಾಡಿದ್ದಾರೆ ಚಿಕಿತ್ಸೆಗೂ ಕೊಂಚ ಹಣವನ್ನು ಕೂಡ ನೀಡಿದ್ದಾರೆ ಎಂದು ತಿಳಿಯೋಣ ಬನ್ನಿ.

ಹೌದು ನಟಿ ವಿಜಯಲಕ್ಷ್ಮಿ ಅವರಿಗೆ ಒಬ್ಬ ಹಿರಿಯ ನಟ ಸಾಂತ್ವನ ಹೇಳಿದ್ದು ಮಾತ್ರವಲ್ಲದೆ ಕೊಂಚ ಹಣಕಾಸಿನ ಸಹಾಯ ಕೂಡ ನೀಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಅಂದಿನ ದಿನಗಳ ಡ್ಯಾನ್ಸಿಂಗ್ ಐಕಾನ್ ನಟನಾಗಿದ್ದ ವಿನೋದ್ ರಾಜ್ ರವರ ಬಗ್ಗೆ. ವಿನೋದ್ ರಾಜ್ ರವರು ಇತ್ತೀಚೆಗಷ್ಟೇ ತಮ್ಮ ಆಸ್ತಿ ಮಾರಿದ ಹಣದಲ್ಲಿ ಕನ್ನಡ ಚಿತ್ರರಂಗದ ಹಲವಾರು ಕಾರ್ಮಿಕರು ಹಾಗೂ ಬಡ ಜನರಿಗೆ ರೇಷನ್ ಕಿಟ್ ನೀಡಿ ಅವರ ಕಷ್ಟಕಾಲದಲ್ಲಿ ದೇವರಾಗಿ ಮೂಡಿಬಂದಿದ್ದರು.

ವಿನೋದ್ ರಾಜ್ ಅವರೇ ವಿಜಯಲಕ್ಷ್ಮಿಯವರ ಖಾತೆಗೆ 5000 ರೂಪಾಯಿ ಹಣವನ್ನು ಹಾಕಿ ಕರೆ ಮಾಡಿ ಸಾಂತ್ವನವನ್ನು ಕೂಡ ಹೇಳಿದ್ದಾರೆ ಅಲ್ಲದೆ ವಿನೋದ್ ರಾಜ್ ಅವರ ತಾಯಿ ಖ್ಯಾತ ಹಿರಿಯ ನಟಿ ಲೀಲಾವತಿ ಅಮ್ಮ ಕೂಡ ಫೋನ್ ಮಾಡಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ವಿಜಯಲಕ್ಷ್ಮಿ ಅವರು ಈ ಕುರಿತಂತೆ ಮಾತನಾಡುತ್ತಾ ಅವರು ಕೊಟ್ಟ ಹಣ ಕಡಿಮೆಯಾಗಿರಬಹುದು ಆದರೆ ಅವರ ಪ್ರೀತಿ ಹಾಗೂ ಕಾಳಜಿ ನಮಗೆ ಇನ್ನಷ್ಟು ಬಲವನ್ನು ತುಂಬಿದೆ ಎಂದು ಹೇಳಿದ್ದಾರೆ. ವಿನೋದ್ ರಾಜ್ ರವರ ಈ ಮಾನವೀಯ ಗುಣವೇ ತಾನೆ ನಮಗೆಲ್ಲರಿಗೂ ಇಷ್ಟವಾಗುವುದು. ಈ ವಿಷಯದ ಕುರಿತಂತೆ ನೀವು ಏನು ಹೇಳುತ್ತೀರಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಯಾವುದೇ ಸಂಕೋಚವಿಲ್ಲದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ನಮಗೆ ತಿಳಿಸಿ.

Facebook Comments

Post Author: Ravi Yadav