ಕನ್ನಡದ ಖ್ಯಾತ ನಟಿ ಸುಧಾರಾಣಿ ಅವರ ಕನಸಿನ ಮನೆ ಹೇಗಿದೆ ಗೊತ್ತಾ? ವಾವ್ ಎಷ್ಟೊಂದು ಸುಂದರ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸ್ಟಾರ್ ನಟಿಯರು ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ನಟಿಯರಲ್ಲಿ ಸುಧಾರಾಣಿ ಕೂಡ ಒಬ್ಬರು. ನಟಿ ಸುಧಾರಾಣಿ ಅವರು ತಮ್ಮ ಮೂರನೇ ವಯಸ್ಸಿನಲ್ಲಿಯೇ ಬಿಸ್ಕೆಟ್ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸುವುದರ ಮೂಲಕ ಬಣ್ಣ ಹಚ್ಚಿದವರು. ಅಷ್ಟೇ ಅಲ್ಲದೆ ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮಾ ಮತ್ತು ರಂಗನಾಯಕಿ ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದರು.

ಹೀಗೆ ಬಾಲ್ಯದಿಂದಲೇ ಬಣ್ಣದ ಲೋಕದಲ್ಲಿ ಬೆಳೆದು ಬಂದ ನಟಿ ಸುಧಾರಣಿ ಅವರು ತಮ್ಮ 12ನೇ ವಯಸ್ಸಿನಲ್ಲೇ ಶಿವರಾಜಕುಮಾರ್ ಅವರೊಂದಿಗೆ ‘ಆನಂದ್’ ಎಂಬ ಸಿನಿಮಾದಲ್ಲಿ ನಟಿಸುವುದರ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು 80 90ರ ದಶಕದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಹೀಗೆ ಬಾಲ್ಯದಿಂದ ಚಿತ್ರಂಗದಲ್ಲಿ ಗುರುತಿಸಿಕೊಂಡು ಜನಪ್ರಿಯತೆ ಪಡೆದ ನಟಿ ಸುಧಾರಾಣಿ ಅವರು ಆನಂದ್ ಸಿನಿಮಾದ ನಂತರ,

ಮನಮೆಚ್ಚಿದ ಹುಡುಗಿ, ರಣರಂಗ, ಕೃಷ್ಣ ನೀ ಕುಣಿದಾಗ, ಪಂಚಮವೇದ, ಮೈಸೂರು ಮಲ್ಲಿಗೆ, ಮಣ್ಣಿನ ದೋಣಿ, ಮನೆ ದೇವ್ರು, ಅನುರಾಗ ಸಂಗಮ, ಕಾವ್ಯ, ಸ್ಪರ್ಶ ಹೀಗೆ ಹಲವಾರು ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದರು. ಸುಧಾರಾಣಿ ಅವರು ಶಿವರಾಜಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಕುಮಾರ್ ಗೋವಿಂದ್, ಶಶಿಕುಮಾರ್, ಅಂಬರೀಷ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದಾರೆ. ಇನ್ನು ಇವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರವನ್ನು ಕೂಡ ಮಾಡಿದ್ದರು. ಇನ್ನು ನಟಿ ಸುಧಾರಾಣಿ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಅವರು ಡಾ. ಸಂಜಯ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಾಗ ಅಮೆರಿಕಾದಲ್ಲಿ ಪತಿಯೊಂದಿಗೆ ನೆಲೆಸಿದರು. ಆದರೆ ಇವರ ದಾಂಪತ್ಯ ಜೀವನ ಬಹು ವರ್ಷಗಳ ಕಾಲ ಸಾಗಲಿಲ್ಲ.

ಕೇವಲ ಆರು ವರ್ಷಗಳಲ್ಲಿ ಈ ದಂಪತಿಗಳು ದೂರವಾದರು. ನಂತರ ಸುಧಾರಣೆ ಅವರು ತಮ್ಮ ಸಂಬಂಧಿಯಾಗಿರುವ ಆಡಿಟರ್ ಗೋವರ್ಧನ್ ಎಂಬುವವರನ್ನು ಮದುವೆಯಾದರು. ಇದೀಗ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿರುವ ಸುಧಾರಣಿ ಅವರಿಗೆ ನಿಧಿ ಎಂಬ ಮುದ್ದಾದ ಮಗಳಿದ್ದಾಳೆ. ಇದೀಗ ಪತಿ ಹಾಗೂ ಮಗಳೊಂದಿಗೆ ಸುಖವಾಗಿರುವ ಸುಧಾರಾಣಿ ಅವರ ಕನಸಿನ ಮನೆ ಹೇಗಿದೆ ಗೊತ್ತಾ? ಹಾಗಾದರೆ ಮುಂದೆ ಓದಿ.

ಇದೀಗ ಸುಧಾರಾಣಿ ಅವರು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ಅಲ್ಲಿಯೇ ಪತಿಯೊಂದಿಗೆ ನೆಲೆಸಿದ್ದಾರೆ. ಅವರ ಮನೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಸಿಟಿಯಲ್ಲಿ ಮನೆ ಕಟ್ಟಿಸಿದರು ಕೂಡ ಮನೆಯ ಸುತ್ತಮುತ್ತ ಹಳ್ಳಿ ವಾತಾವರಣ ಇರುವಂತೆ ಗಿಡಮರಗಳನ್ನು ಹಚ್ಚಲಾಗಿದೆ. ಸುಧಾರಾಣಿ ಅವರು ತಮ್ಮ ಮನೆಯ ಸುತ್ತಮುತ್ತ ಹೂವಿನ ಗಿಡಗಳು, ತರಕಾರಿ, ಹಣ್ಣಿನ ಗಿಡಗಳು ಹಾಗೂ ಔಷಧೀಯ ಗುಣವಿರುವ ಸಾಕಷ್ಟು ಸಸ್ಯಗಳನ್ನು ಕೂಡ ಬೆಳೆಸಿದ್ದಾರೆ. ಹೀಗೆ ಅವರು ಪ್ರಕೃತಿಯ ಸೌಂದರ್ಯದ ಮಧ್ಯೆ ಮನೆಯನ್ನು ಕಟ್ಟಿಸಿದ್ದಾರೆ ಎಂದು ಹೇಳಬಹುದು. ಇನ್ನು ಒಂದು ರೀತಿಯಲ್ಲಿ ಹೇಳುವುದಾದರೆ ಅವರು ಪರಿಸರ ಪ್ರೇಮಿ ಎಂದು ಹೇಳಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Post Author: Ravi Yadav