ಹೋಟೆಲ್ ಗಿಂತ ಅದ್ಭುತ ರುಚಿ ಇರುವ ವೆಜ್ ಬಿರಿಯಾನಿ ಮಾಡುವುದು ಹೇಗೆ ಗೊತ್ತೇ?? ಎಲ್ಲರೂ ಕೇಳಿ ಕೇಳಿ ಎರೆಡೆರಡು ಸಾರಿ ಹಾಕಿಸ್ಕೊಳ್ತಾರೆ

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ವೆಜ್ ಬಿರಿಯಾನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯಲ್ಲಿ ವೆಜ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು: ಅರ್ಧ ಕೆಜಿ ಬಾಸುಮತಿ ರೈಸ್,1 ಟೊಮ್ಯಾಟೊ, 8 – 10 ಹುರುಳಿಕಾಯಿ, 1 ಆಲೂಗೆಡ್ಡೆ, 2 ಈರುಳ್ಳಿ, 1 ಕ್ಯಾರೆಟ್, 4 – 5 ಚಮಚ ಹಸಿ ಬಟಾಣಿ, 1 ಚಮಚ ಧನಿಯಾ ಪುಡಿ, 1 ಚಮಚ ಅಚ್ಚ ಕಾರದ ಪುಡಿ, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಗರಂ ಮಸಾಲ, 1 ಬಿರಿಯಾನಿ ಎಲೆ, 1 ಚಕ್ಕೆ, 2 ಏಲಕ್ಕಿ, 1 ಸ್ಟಾರ್ ಹೂವು, ಸ್ವಲ್ಪ ಕಸುರಿ ಮೇತಿ, 4 ಲವಂಗ, ಸ್ವಲ್ಪ ಸೋಂಪುಕಾಳು, 1 ಜಾಪತ್ರೆ, 1 ಅನಾನಸ್ ಮೊಗ್ಗು, ಸ್ವಲ್ಪ ಕಲ್ಲುಹೂವು, 2 ಚಮಚ ಮೊಸರು, 2 ಚಮಚ ಎಣ್ಣೆ, 2 ಚಮಚ ತುಪ್ಪ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ, 2 ಹಸಿ ಮೆಣಸಿನ ಕಾಯಿ, 1 ಚಮಚ ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು.

ಹೋಟೆಲ್ ಶೈಲಿಯಲ್ಲಿ ವೆಜ್ ಬಿರಿಯಾನಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ತೆಗೆದುಕೊಂಡ ಅಕ್ಕಿ ಹಾಗೂ ನೀರನ್ನು ಹಾಕಿ 10 – 15 ನಿಮಿಷಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆ ಮತ್ತು ತುಪ್ಪವನ್ನು ಹಾಕಿ ಕಾಯಲು ಬಿಡಿ. ಕಾದ ನಂತರ ಇದಕ್ಕೆ ಚಕ್ಕೆ, ಲವಂಗ, ಸೋಂಪುಕಾಳು, ಕಸೂರಿ ಮೇತಿ, ಸ್ಟಾರ್ ಹೂವು, ಕಲ್ಲು ಹೂವು, ಅನಾನಸ್ ಮೊಗ್ಗು, ಜಾಪತ್ರೆ, ಏಲ್ಲಕಿ, ಬಿರಿಯಾನಿ ಎಲೆಯನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಪುದಿನ ಸೊಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೇಟೊ ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಟೊಮೇಟೊ ಸಾಫ್ಟ್ ಆಗುವವರೆಗೆ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲಾವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸಣ್ಣಗೆ ಹಚ್ಚಿದ ಕ್ಯಾರೆಟ್, ಹಸಿಬಟಾಣಿ, ಸಣ್ಣಗೆ ಹಚ್ಚಿದ ಹುರುಳಿಕಾಯಿ, ಸಣ್ಣಗೆ ಹಚ್ಚಿದ ಆಲೂಗಡ್ಡೆಯನ್ನು ಹಾಕಿ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಮೊಸರು, ನಿಂಬೆ ಹಣ್ಣಿನ ರಸವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನೆನೆಸಿದ ಬಾಸುಮತಿ ಅಕ್ಕಿ, 3 ಲೋಟ ನೀರು, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ವೆಜ್ ಬಿರಿಯಾನಿ ಸವಿಯಲು ಸಿದ್ದ.

Post Author: Ravi Yadav