ಬಿಡುಗಡೆಯಾಯಿತು ಮೋಸ್ಟ್ ಡಿಸೈರಬಲ್ ವುಮನ್ ಪಟ್ಟಿ, ಮೊದಲನೇ ಸ್ಥಾನ ಗಿಟ್ಟಿಸಿಕೊಂಡ ಕನ್ನಡದ ನಟಿ ಯಾರು ಗೊತ್ತೇ??
ಬಿಡುಗಡೆಯಾಯಿತು ಮೋಸ್ಟ್ ಡಿಸೈರಬಲ್ ವುಮನ್ ಪಟ್ಟಿ, ಮೊದಲನೇ ಸ್ಥಾನ ಗಿಟ್ಟಿಸಿಕೊಂಡ ಕನ್ನಡದ ನಟಿ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿ ವರ್ಷದಂತೆ ಈ ಭಾರಿಯೂ ಬೆಂಗಳೂರು ಟೈಮ್ಸ್ ತನ್ನ ಮೋಸ್ಟ್ ಡಿಸೈರಬಲ್ ವುಮೆನ್ಸ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೋಸ್ಟ್ ಡಿಸೈರಬಲ್ ವುಮೆನ್ಸ್ ಎಂದರೇ, ಯಾವ ಮಹಿಳಾ ನಟಿ, ನಿರೂಪಕಿ, ಉದ್ಯಮಗಾರ್ತಿ ತಮ್ಮ ಸಾಮಾಜಿಕ ಜೀವನದಲ್ಲಿ ಹೆಚ್ಚು ಜನಪ್ರಿಯರಾಗಿರುತ್ತಾರೋ, ಆ ಆಧಾರದಲ್ಲಿ ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಅವಾರ್ಡ್ ಆಗಿದೆ. ಬೆಂಗಳೂರು ಟೈಮ್ಸ್ ಹಲವಾರು ವರ್ಷಗಳಿಂದ ಇದನ್ನು ನಡೆಸಿಕೊಂಡು ಬರುತ್ತಿದೆ.
ಈ ಭಾರಿ 30 ಜನರ ಪಟ್ಟಿ ಬಿಡುಗಡೆ ಮಾಡಿದ್ದು ಆದರಲ್ಲಿ ಸಿನಿಮಾ ನಟಿಯರು, ಮಹಿಳಾ ಕ್ರಿಕೇಟರ್ ಗಳು, ಸುದ್ದಿ ವಾಹಿನಿಯ ನಿರೂಪಕಿಯರು, ಚಾನೆಲ್ ಗಳ ನಿರೂಪಕಿಯರು ಸೇರಿದ್ದಾರೆ. ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ. (ಎಲ್ಲ 30 ಸ್ಥಾನಗಳನ್ನು ನೀಡಲು ಸಾಧ್ಯವಾಗದಿರುವ ಕಾರಣ ಆಯ್ದ ಕೆಲವೊಂದು ಸೆಲೆಬ್ರೆಟಿಗಳ ಕುರಿತು ಮಾಹಿತಿ ನೀಡಲಾಗಿದೆ.)
ಮೊದಲನೆಯದಾಗಿ 21ನೇ ಸ್ಥಾನದಲ್ಲಿ ಸಂಯುಕ್ತಾ ಹೆಗಡೆ, 22 ನೇ ಸ್ಥಾನದಲ್ಲಿ ಕ್ರಿಕೇಟರ್ ವೇದಾ ಕೃಷ್ಣಮೂರ್ತಿ, 23 ನೇ ಸ್ಥಾನದಲ್ಲಿ ಶ್ರಿಲೀಲಾ, 24 ನೇ ಸ್ಥಾನದಲ್ಲಿ ದೀಪಿಕಾ ದಾಸ್, 25 ನೇ ಸ್ಥಾನದಲ್ಲಿ ಧನ್ಯಾ ರಾಮಕುಮಾರ್, 26 ನೇ ಸ್ಥಾನದಲ್ಲಿ ಶುಭ್ರ ಅಯ್ಯಪ್ಪ, 27 ನೇ ಸ್ಥಾನದಲ್ಲಿ ಅನುಪಮಾ ಗೌಡ, 28 ನೇ ಸ್ಥಾನದಲ್ಲಿ ನಿರೂಪಕಿ ಅನುಶ್ರೀ, 29 ನೇ ಸ್ಥಾನದಲ್ಲಿ ರಾಧಿಕಾ ನಾರಾಯಣ್ ಹಾಗೂ ಕೊನೆಯ ಸ್ಥಾನ ಮತ್ತು ಅಂತಿಮವಾದ ಸ್ಥಾನ 30 ರಲ್ಲಿ ಭಾವನಾ ಮೆನೆನ್ ಇದ್ದಾರೆ.
ಇನ್ನು 11ನೇ ಸ್ಥಾನದಲ್ಲಿ ಮಾನ್ವಿತಾ ಕಾಮತ್, 12 ನೇ ಸ್ಥಾನದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ನಿಹಾರಿಕಾ, 13 ನೇ ಸ್ಥಾನದಲ್ಲಿ ಹರಿಪ್ರಿಯಾ, 14 ನೇ ಸ್ಥಾನದಲ್ಲಿ ಮಿಲನಾ ನಾಗರಾಜ್, 15 ನೇ ಸ್ಥಾನದಲ್ಲಿ ರಚಿತಾ ರಾಮ್, 16 ನೇ ಸ್ಥಾನದಲ್ಲಿ ಶ್ರದ್ಧಾ ಶ್ರೀನಾಥ್, 17 ನೇ ಸ್ಥಾನದಲ್ಲಿ ಅಮೃತಾ ಅಯ್ಯಂಗಿರ್, 18 ನೇ ಸ್ಥಾನದಲ್ಲಿ ಶೃತಿ ಪ್ರಕಾಶ್, 19 ನೇ ಸ್ಥಾನದಲ್ಲಿ ರತಿ ಹಲ್ಜಿ, 20 ನೇ ಸ್ಥಾನದಲ್ಲಿ ಶರ್ಮಿಳಾ ಮಾಂಡ್ರೆ ಇದ್ದಾರೆ.
ಇನ್ನು ಇತ್ತಿಚಿನ ದಿನಗಳಲ್ಲಿ ತಮ್ಮ ಮಾತುಗಳಿಂದ, ನಡೆಯಿಂದ ಟ್ರೋಲ್ ಪೇಜ್ ಗಳಿಗೆ ವೀಪರೀತ ಆಹಾರವಾಗಿದ್ದ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನ ಗಳಿಸುವ ಮೂಲಕ 2020 ರ ಮೋಸ್ಟ್ ಡಿಸೈರಬಲ್ ವುಮೆನ್ ಆಗಿ ಆಯ್ಕೆಯಾಗಿದ್ದಾರೆ. 2019 ರಲ್ಲಿ 6 ನೇ ಸ್ಥಾನದಲ್ಲಿದ್ದ ರಶ್ಮಿಕಾ ಈ ಭಾರಿ ಐದು ಸ್ಥಾನ ಜಿಗಿದು ಮೊದಲನೇ ಸ್ಥಾನದಲ್ಲಿದ್ದಾರೆ.ರಶ್ಮಿಕಾ ಗೆ ತೀವ್ರ ಪೈಪೊಟಿ ನೀಡಿರುವ ನಟಿಯರ ಸಾಲಿನಲ್ಲಿ
2ನೇ ಸ್ಥಾನದಲ್ಲಿ ತಾನ್ಯಾ ಹೋಪ್, 3 ನೇ ಸ್ಥಾನದಲ್ಲಿ ಶಾನ್ವಿ ಶ್ರೀವಾಸ್ತವ್, 4 ನೇ ಸ್ಥಾನದಲ್ಲಿ ಆಶಿಕಾ ರಂಗನಾಥ್ ಹಾಗೂ 5 ನೇ ಸ್ಥಾನದಲ್ಲಿ ಶ್ರೀನಿಧಿ ಶೆಟ್ಟಿ ಇದ್ದಾರೆ. 6 ನೇ ಸ್ಥಾನದಲ್ಲಿ ನಿಶ್ವಿಕಾ ನಾಯ್ಡು,7 ನೇ ಸ್ಥಾನದಲ್ಲಿ ಆಶಾ ಭಟ್, 8 ನೇ ಸ್ಥಾನದಲ್ಲಿ ಪ್ರಣಿತಾ ಸುಭಾಶ್, 9 ನೇ ಸ್ಥಾನದಲ್ಲಿ ಐಂದ್ರಿತಾ ರೇ, 10 ನೇ ಸ್ಥಾನದಲ್ಲಿ ಅದಿತಿ ಪ್ರಭುದೇವ ಇದ್ದಾರೆ. ಈ 30 ಜನರಲ್ಲಿ ನಿಮ್ಮ ನೆಚ್ಚಿನ ತಾರೆ ಯಾರು ಮತ್ತು ಅವರು ಎಷ್ಟನೇ ಸ್ಥಾನದಲ್ಲಿ ಇರಬೇಕಿತ್ತು ಎಂಬುದನ್ನ ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ.