ಬಾಹುಬಲಿ ಖ್ಯಾತಿಯ ರಾಜಮೌಳಿ -ವಿಜಯೇಂದ್ರ ಪ್ರಸಾದ್ ನಿರ್ದೇಶಿಸುತ್ತಿರುವ ಹಾಲಿವುಡ್ ಸಿನಿಮಾ ಯಾವುದು ಗೊತ್ತೇ??
ಬಾಹುಬಲಿ ಖ್ಯಾತಿಯ ರಾಜಮೌಳಿ -ವಿಜಯೇಂದ್ರ ಪ್ರಸಾದ್ ನಿರ್ದೇಶಿಸುತ್ತಿರುವ ಹಾಲಿವುಡ್ ಸಿನಿಮಾ ಯಾವುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ನೀವು ಬಾಹುಬಲಿ ಸಿನಿಮಾ ನೋಡಿರುತ್ತಿರಿ. ಆ ಸಿನಿಮಾದ ನಿರ್ದೇಶಕ ರಾಜಮೌಳಿ ಎಂದು ತಿಳಿದಿರುತ್ತಿರಿ. ಆದರೇ ರಾಜಮೌಳಿ ಸಿನಿಮಾಗಳಿಗೆ ಕತೆ ಬರೆಯುವವರ ಹೆಸರು ವಿಜಯೇಂದ್ರ ಪ್ರಸಾದ್ ಎಂದು. ಇವರು ರಾಜಮೌಳಿಯವರ ತಂದೆ. ಈ ತಂದೆ-ಮಗನ ಜೋಡಿ ಹಲವಾರು ಹಿಟ್ ಗಳನ್ನ ಕೊಟ್ಟಿದೆ. ರಾಜಮೌಳಿಯವರ ಯಮದೊಂಗ, ಮಗಧೀರ, ಈಗ, ಸೈ ಹೀಗೆ ಎಲ್ಲಾ ಸಿನಿಮಾಗಳಿಗೂ ಕತೆಯನ್ನ ಒದಗಿಸಿದವರು ವಿಜಯೇಂದ್ರ ಪ್ರಸಾದ್ ರವರು.
ವಿಜಯೇಂದ್ರ ಪ್ರಸಾದ್ ಕೇವಲ ಮಗನ ಸಿನಿಮಾಗೆ ಮಾತ್ರ ಕತೆ ಬರೆದಿಲ್ಲ. ಅವರು ಹಲವು ನಿರ್ದೇಶಕರಿಗೂ ಕತೆಗಳನ್ನ ಬರೆದುಕೊಟ್ಟಿದ್ದಾರೆ. ಅದರಲ್ಲಿ ಕೆಲವು ಕನ್ನಡ ಸಿನಿಮಾಗಳು ಸಹ ಸೇರಿವೆ. ತಮಿಳಿನ ಮರ್ಸೆಲ್, ಹಿಂದಿಯ ಭಜರಂಗಿ ಭಾಯಿಜಾನ್, ಕನ್ನಡದ ಅಪ್ಪಾಜಿ, ಕುರುಬನ ರಾಣಿ, ಪಾಂಡುರಂಗವಿಠಲ, ಜಾಗ್ವಾರ್ ಸಿನಿಮಾಗಳಿಗೂ ಸಹ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದರು.
ಈಗ ರಾಜಮೌಳಿ ಹಾಗೂ ವಿಜಯೇಂದ್ರ ಪ್ರಸಾದ್ ಎಂಬ ತಂದೆ ಮಗನ ಜೋಡಿ ಹಾಲಿವುಡ್ ಚಿತ್ರರಂಗ ಪ್ರವೇಶಿಸುತ್ತಿದೆ. ರಾಜಮೌಳಿಯವರ ಮೊದಲ ಹಾಲಿವುಡ್ ಚಿತ್ರಕ್ಕೆ ಈಗಾಗಲೇ ಕತೆ ಬರೆದು ಸಿದ್ದಪಡಿಸಿದ್ದಾರೆ ವಿಜಯೇಂದ್ರ ಪ್ರಸಾದ್ ರವರು. ಹಾಲಿವುಡ್ ನಟ ರೈಮಂಡ್ ಈ ಸಿನಿಮಾದ ಹೀರೋ. ಈ ಬಗ್ಗೆ ಚಾನೆಲ್ ಒಂದರಲ್ಲಿ ಹೇಳಿಕೆ ಕೊಟ್ಟಿರುವ ವಿಜಯೇಂದ್ರ ಪ್ರಸಾದ್ , ಇದು ಇಂಡಿಯನ್ ಕಂಟೆಂಟ್ ಸಿನಿಮಾನೇ, ಆದರೇ ಇಂಟರ್ ನ್ಯಾಷನಲ್ ಮಾನದಂಡಗಳನ್ನು ಒಳಗೊಂಡಿರುತ್ತದೆ ಎಂದು ಹೇಳುವ ಮೂಲಕ ಈ ಸಿನಿಮಾ ಬಿಗ್ ಬಜೆಟ್ ಸಿನಿಮಾವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜಮೌಳಿ ಹಾಲಿವುಡ್ ಗೆ ತೆರಳುವುದು ಪಕ್ಕಾ ಆಗಿದೆ. ತಂದೆಯ ಕತೆಗಳನ್ನೇ ದೃಶ್ಯ ರೂಪದಲ್ಲಿ ಅದ್ಭುತವಾಗಿ ತೋರಿಸಿ, ಸಂಪೂರ್ಣ ಭಾರತೀಯ ಚಿತ್ರರಂಗವನ್ನೇ ಉತ್ಕಟ ದರ್ಜೆಗೆ ಕೊಂಡೊಯ್ದ ರಾಜಮೌಳಿ ಹಾಲಿವುಡ್ ನಲ್ಲಿ ಯಾವ ರೀತಿಯ ಸಿನಿಮಾ ಮಾಡುತ್ತಾರೆಂಬುದೇ ಸದ್ಯದ ಕುತೂಹಲ. ಸದ್ಯ RRR ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನ ನಿರ್ದೇಶಿಸೀ, ಬಿಡುಗಡೆಗೆ ಸಿದ್ದ ಮಾಡುತ್ತಿದ್ದಾರೆ ರಾಜಮೌಳಿ. ಕೋರೋನಾ ಕೊಂಚ ಕಡಿಮೆಯಾದ ತಕ್ಷಣ , ಬಹುಷಃ ಮುಂದಿನ ಜನವರಿಯಲ್ಲಿ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುವ ನೀರಿಕ್ಷೆಯಿದೆ.