ಸಚಿನ್ ಪುತ್ರ ಅರ್ಜುನ್ ರ ಫೇವರೆಟ್ ಆಟಗಾರ ಯಾರು ಗೊತ್ತಾ?? ಕೋಹ್ಲಿ, ರೋಹಿತ್, ಧೋನಿ ಇವರಾರು ಅಲ್ಲ. ಮತ್ಯಾರು??

ನಮಸ್ಕಾರ ಸ್ನೇಹಿತರೇ ಸಚಿನ್ ತೆಂಡೂಲ್ಕರ್ ಭಾರತ ಕ್ರಿಕೇಟ್ ನ ದಂತಕಥೆ. ಇವರು ಕ್ರಿಕೇಟ್ ಇತಿಹಾಸದಲ್ಲಿ ಮಾಡಿರುವ ರೆಕಾರ್ಡ್ ಗಳನ್ನ ಯಾರೊಬ್ಬರು ಮುರಿಯಲು ಸಾಧ್ಯವಿಲ್ಲ. ಅಂತಹ ಲೆಜೆಂಡ್ ಕ್ರಿಕೇಟರ್ ಸಚಿನ್. ನಿವೃತ್ತಿ ನಂತರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಹ ಉತ್ತಮ ಕ್ರಿಕೇಟರ್. ಮುಂಬೈನ17 ಹಾಗೂ 19 ವರ್ಷದೊಳಗಿನವರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಸಾಲಿನ ಹರಾಜಿನಲ್ಲಿ ಸಚಿನ್ ಪುತ್ರ ಅರ್ಜುನ್ ಬರೋಬ್ಬರಿ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಿನಲ್ಲಿ ಸೇಲಾಗಿದ್ದರು. ಆದರೇ ಆಡುವ 11 ರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಆದರೇ ನೆಟ್ಸ್ ನಲ್ಲಿ ತಮ್ಮ ತಂಡದ ಬೌಲರ್ ಗಳಿಗೆ ಕರಾರುವಕ್ಕಾಗಿ ಬಲಗೈ ವೇಗಿಯಾಗಿ ಬೌಲ್ ಮಾಡುತ್ತಿದ್ದರು.

ಮೂಲತಃ ಏಡಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ಬೌಲರ್ ಆಗಿರುವ ಅರ್ಜುನ್ ಒಬ್ಬ ಆಲ್ ರೌಂಡರ್ ಆಗಿದ್ದಾರೆ. ಇತ್ತಿಚೆಗೆ ನಡೆದ ಸಂದರ್ಶನದಲ್ಲಿ ಒಂದು ಕೌತುಕ ಘಟನೆ ನಡೆಯಿತು. ಅರ್ಜುನ್ ರಿಗೆ ನಿಮ್ಮ ನೆಚ್ಚಿನ ಕ್ರಿಕೇಟರ್ ಯಾರು ಎಂಬ ಪ್ರಶ್ನೆ ಕೇಳಲಾಯಿತು. ಎಲ್ಲರೂ ಅರ್ಜುನ್ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಹೆಸರು ಹೇಳಬಹುದೆಂದು ನೀರಿಕ್ಷಿಸಿದ್ದರು. ಅದಿಲ್ಲವೇ ಮುಂಬೈ ಇಂಡಿಯನ್ಸ್ ನ ರೋಹಿತ್ ಶರ್ಮಾ, ಅಥವಾ ವಿರಾಟ್ ಕೊಹ್ಲಿ ಇಲ್ಲವೇ ಮಹೇಂದ್ರ ಸಿಂಗ್ ಧೋನಿ ಹೆಸರು ಹೇಳಬಹುದೆಂದು ಅಂದಾಜಿಸಿದ್ದಾರೆ.

ಆದರೇ ಎಲ್ಲರ ನೀರಿಕ್ಷೆ ತಲೆಕೆಳಗಾಗುವಂತಹ ಉತ್ತರವನ್ನ ಅರ್ಜುನ್ ತೆಂಡೂಲ್ಕರ್ ನೀಡಿದ್ದಾರೆ. ಹೌದು ಅರ್ಜುನ್ ರ ನೆಚ್ಚಿನ ಕ್ರಿಕೇಟರ್ ಭಾರತೀಯ ವೇಗಿ ಜಸ್ಪ್ರಿತ್ ಬುಮ್ರಾರಂತೆ. ಅವರು ನನ್ನ ನೆಚ್ಚಿನ ಕ್ರಿಕೇಟರ್. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರ ಜೊತೆ ನೆಟ್ಸ್ ನಲ್ಲಿ ಬಹಳಷ್ಟು ಕಲಿತಿದ್ದೆನೆ. ನನ್ನ ಬೌಲಿಂಗ್ ಸುಧಾರಣೆಗೆ ಅವರಿಂದ ಹಲವಾರು ಸಲಹೆಗಳನ್ನು ಪಡೆದಿದ್ದೆನೆ ಎಂದು ಅರ್ಜುನ್ ಹೇಳಿದರು. ಒಟ್ಟಿನಲ್ಲಿ ಭವಿಷ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ತಂದೆಯ ರೀತಿ ಭಾರತೀಯ ಕ್ರಿಕೇಟ್ ತಂಡವನ್ನು ಪ್ರತಿನಿಧಿಸುತ್ತಾರೋ ಇಲ್ಲವೋ ಎಂಬುದನ್ನ ಕಾಲವೇ ನಿರ್ಧರಿಸಲಿದೆ. ಅರ್ಜುನ್ ರ ಈ ಅಭಿಪ್ರಾಯಕ್ಕೆ ನಿಮ್ಮ ಅಭಿಪ್ರಾಯಗಳನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav