ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್ -5 ಕನ್ನಡ ಚಲನಚಿತ್ರಗಳು ಯಾವುವು ಗೊತ್ತಾ??

ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್ -5 ಕನ್ನಡ ಚಲನಚಿತ್ರಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಯೂ ಟ್ಯೂಬ್ ಬಹಳಷ್ಟು ಜನ ಪ್ರತಿದಿನ ವೀಕ್ಷಿಸುವ ಜಾಲತಾಣ. ಕಾಮಿಡಿ, ಭವಿಷ್ಯ, ಅಡುಗೆ, ಸೌಂದರ್ಯ, ಶೃಂಗಾರ, ಕ್ರೀಡೆ, ಸಂಗೀತ, ಹೀಗೆ ಎಲ್ಲಾ ಪ್ರಕಾರದ ವಿಡೀಯೋಗಳನ್ನು ಸಹ ವೀಕ್ಷಿಸಬಹುದು. ಅದರಲ್ಲೂ ಓಟಿಟಿ ಪ್ಲಾಟ್ ಫಾರ್ಮ್ ಬರುವುದಕ್ಕಿಂತ ಮುಂಚೆ ಯೂಟ್ಯೂಬ್ ನಲ್ಲೇ ಹಲವಾರು ಜನ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರು. ಈಗಲೂ ಓಟಿಟಿ ಪ್ಲಾಟ್ ಫಾರ್ಮ್ ಗೆ ಸಬ್ಸ್ಕ್ರಿಪ್ಶನ್ ಇಲ್ಲದಿರುವವರೂ ಇಂದಿಗೂ ಸಹ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಲು ಆಯ್ಕೆ ಮಾಡಿಕೊಂಡಿರುವುದು ಯೂ ಟ್ಯೂಬ್ ನ್ನ. ಹಾಗಾದಾರೆ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿದ ಟಾಪ್ – 5 ಕನ್ನಡ ಚಲನಚಿತ್ರಗಳು ಯಾವುವು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ಮೊದಲ ಸ್ಥಾನದಲ್ಲಿ ಯಜಮಾನ – ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ ಸೂಪರ್ ಹಿಟ್ ಚಿತ್ರ. ಸಹೋದರತ್ವದ ಬಗ್ಗೆ ನಿರ್ಮಿಸಿದ್ದ ಈ ಸಿನಿಮಾ ಅಂದೇ ಗೋಲ್ಡನ್ ಜ್ಯೂಬಿಲಿ ಆಚರಿಸಿತ್ತು. ಯೂ ಟ್ಯೂಬ್ ನಲ್ಲಿ ಈ ಸಿನಿಮಾವನ್ನು ಮೂರು ಚಾನೆಲ್ ಗಳು ಅಪಲೋಡ್ ಮಾಡಿದ್ದವು. ಆ ಮೂರು ಚಾನೆಲ್ ಗಳಿಂದ 60 ಮಿಲಿಯನ್ ಜನ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅದಲ್ಲದೇ ಈ ಚಿತ್ರದ ಕೆಲವು ತುಣುಕುಗಳನ್ನ ಕಟ್ ಮಾಡಿ, ಸಹ ಅಪಲೋಡ್ ಮಾಡಲಾಗಿತ್ತು. ಆ ವಿಡೀಯೋಗಳನ್ನು ಸಹ ಮಿಲಿಯನ್ ಗಟ್ಟಲೇ ಜನ ವೀಕ್ಷಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ – ನಟ ಯಶ್ ರವರ ವೃತ್ತಿ ಜೀವನದ ಮೊದಲ ಸೂಪರ್ ಹಿಟ್ ಸಿನಿಮಾ. ಯಶ್-ರಾಧಿಕಾ ಜೋಡಿ, ಹಾಗೂ ಸಿನಿಮಾದ ಫ್ಯಾಮಿಲಿ ಡ್ರಾಮಾ ಪ್ರೇಕ್ಷಕರಿಗೆ ಹಬ್ಬ ಮಾಡಿಸಿತ್ತು. ಈ ಚಿತ್ರ ಯೂಟ್ಯೂಬ್ ನಲ್ಲಿ ಅಪಲೋಡ್ ಆದ ದಿನದಿಂದ ಇಲ್ಲಿರವರೆಗೂ ಬರೋಬ್ಬರಿ ಐವತ್ತೇರೆಡು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ.

ಮೂರನೇ ಸ್ಥಾನದಲ್ಲಿ ಗೂಗ್ಲಿ – ಪವನ್ ಓಡೆಯರ್ ನಿರ್ದೇಶನದ, ಯಶ್ ಹಾಗೂ ಕೃತಿ ಕರಭಂದ ಅಭಿನಯಿಸಿದ ಚಿತ್ರ. ಕಾಲೇಜ್ ಲವಸ್ಟೋರಿ ಯುವಜನತೆಗೆ ಕಿಕ್ ಕೊಟ್ಟಿತ್ತು. ಈ ಸಿನಿಮಾ ಸಹ ಇಲ್ಲಿಯವರೆಗೂ 38 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಕಂಡಿದೆ.

ನಾಲ್ಕನೇ ಸ್ಥಾನದಲ್ಲಿ ಉಗ್ರಂ – ಪ್ರಶಾಂತ್ ನೀಲ್ ನಿರ್ದೇಶಿಸಿದ್ದ ಮೊದಲ ಸಿನಿಮಾ. ಮುರಳಿಯವರಿಗೆ ಭರ್ಜರಿ ಮರುಹುಟ್ಟು ನೀಡಿದ ಸಿನಿಮಾ ಇದು. ತನ್ನ ವಿಚಿತ್ರ ಮೇಕಿಂಗ್ ಹಾಗೂ ಬಿಜಿಎಂ ನಿಂದ ಸದ್ದು ಮಾಡಿದ್ದ ಈ ಸಿನಿಮಾ ಯೂಟ್ಯೂಬ್ ನಲ್ಲಿ ಬರೋಬ್ಬರಿ 34 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ.

ಐದನೇ ಸ್ಥಾನದಲ್ಲಿ ಐರಾವತ – ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ, ಅಂಬಾರಿ ಅರ್ಜುನ್ ನಿರ್ದೇಶಿಸಿದ್ದ ಸಿನಿಮಾ. ದರ್ಶನ್ – ಪ್ರಕಾಶ್ ರೈ ಜುಗಲ್ ಬಂದಿ ಯಿಂದ ಪ್ರೇಕ್ಷಕರಿಗೆ ಖುಷಿ ಕೊಟ್ಟಿತ್ತು. ಈ ಸಿನಿಮಾ ಸಹ ಬರೋಬ್ಬರಿ 31 ಮಿಲಿಯನ್ ಗೂ ಅಧಿಕ ಭಾರಿ ಯೂಟ್ಯೂಬ್ ನಲ್ಲಿ ವೀಕ್ಷಣೆ ಕಂಡಿದೆ. ನೀವು ಯೂಟ್ಯೂಬ್ ನಲ್ಲಿ ನೋಡಿದ ಬೆಸ್ಟ್ ಸಿನಿಮಾ ಯಾವುದು ಎಂದು ನಮಗೆ ಕಮೆಂಟ್ ಮೂಲಕ ತಿಳಿಸಿ.