ತನಗಿಂತ 11 ವರ್ಷದ ದೊಡ್ಡವಳ ನಟಿಯ ಪ್ರೀತಿಯಲ್ಲಿ ಹುಚ್ಚರಾಗಿದ್ದಾರೆ ರಿಷಬ್, ಆ ಟಾಪ್ ನಟಿ ಯಾರು ಗೊತ್ತೇ??

ತನಗಿಂತ 11 ವರ್ಷದ ದೊಡ್ಡವಳ ನಟಿಯ ಪ್ರೀತಿಯಲ್ಲಿ ಹುಚ್ಚರಾಗಿದ್ದಾರೆ ರಿಷಬ್, ಆ ಟಾಪ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಹಾಗೂ ಭಾರತೀಯ ಕ್ರಿಕೆಟ್ ಈ ಎರಡೂ ರಂಗಗಳು ಮೊದಲಿನಿಂದಲೂ ಸಹ ಒಂದಕ್ಕೊಂದು ಬಿಡಸಲಾರದ ನಂಟಿನಂತೆ ಕೂಡಿಕೊಂಡು ಬಂದಿವೆ. ಬಾಲಿವುಡ್ ನಟಿಯರು ಕ್ರಿಕೆಟ್ ಸ್ಟಾರ್ ಗಳನ್ನು ಮದುವೆ ಆಗಿರೋದು ಮೊದಲಿನಿಂದಲೂ ಮೂಡಿಬಂದಿದೆ. ಉದಾಹರಣೆಗೆ ವಿರಾಜ್ ಕೊಹ್ಲಿ ಅನುಶ್ಕಾ ಶರ್ಮಾ, ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ. ಹೀಗೆ ಲಿಸ್ಟ್ ಹೇಳ್ತಾ ತುಂಬಾ ಆಗೋಗುತ್ತೆ. ಆದರೆ ಈ ಲಿಸ್ಟ್ ಇನ್ನೊಬ್ಬರ ಎಂಟ್ರಿ ಆದರೂ ಅಚ್ಚರಿ ಪಡೋವಂತದ್ದು ಏನೂ ಇಲ್ಲ.

ಈಗಿನ ಕ್ರಿಕೆಟ್ ಜಗತ್ತಿನಲ್ಲಿ ಭಾರತ ತಂಡಕ್ಕೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ರವರ ನಿವೃತ್ತಿಯ ‌ಬಿಸಿ ಜೋರಾಗೇ ತಟ್ಟಿತ್ತು. ಅವರ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟ್ಸ್ಮನ್ ಗರಡನ್ನು ಸರಿದೂಗಿಸಬಲ್ಲಂತಹ ಅಟಗಾರನ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್ ತಂಡ ಹಲವಾರು ಆಟಗಾರರನ್ನು ಪರೀಕ್ಷಿಸಿ ನಂತರ ಯಶಸ್ವಿಯಾದವರು ರಿಶಭ್ ಪಂತ್. ರಿಶಭ್ ಪಂತ್ ಗೆ ಇನ್ನೂ ಕೇವಲ 21 ವರ್ಷ ವಯಸ್ಸಷ್ಟೇ ಆದರೂ ಭಾರತ ತಂಡಕ್ಕಾಗಿ ಅವರು ಜವಾಬ್ದಾರಿಯುತ ಆಟವಾಡೋದು ನೋಡಿ ಅವರ ಫ್ಯಾನ್ ಆಗದೇ ಇರೋಕೆ ಚಾನ್ಸೇ ಇಲ್ಲ.

ಧೋನಿಯವರನ್ನು ತಮ್ಮ ಸ್ಪೂರ್ತಿಯಾಗಿ ತೆಗೆದುಕೊಂಡು ಕ್ಯಾಪ್ಟನ್ ಕೊಹ್ಲಿಯ ನಾಯಕತ್ವದಲ್ಲಿ ರಿಶಭ್ ಪಂತ್ ಈಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಈಗಾಗಲೇ ಭರವಸೆಯ ಆಟಗಾರನಾಗಿ ಹೆಸರು ಮಾಡಿದ್ದೂ ಈ ಬಾರಿಯ ಐಪಿಎಲ್ 2021 ನಲ್ಲಿ ಕೂಡ ದೆಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡು ಅದ್ಭುತ ಫಲಿತಾಂಶವನ್ನು ಕೂಡ ತೋರಿಸಿದ್ದಾರೆ. ರಿಶಭ್ ಪಂತ್ ರವರ ಆಟದ ಜೊತೆಗೆ ಅವರ ಫನ್ನಿ ಮಾತುಗಳು ಸಹ ಎಲ್ಲರನ್ನು ಗಮನ ಸೆಳೆಯುತ್ತದೆ.

ರಿಶಭ್ ಪಂತ್ ರವರು ಈಗ ಸುದ್ಧಿಯಾಗುತ್ತಿರುವ ಮುಖ್ಯ ಕಾರಣ ಎಂದರೆ ಇತ್ತೀಚಿನ ಸಂದರ್ಶನ ವೊಂದರಲ್ಲಿ ನಿಮ್ಮ ನೆಚ್ಚಿನ ನಟಿ ಯಾರೆಂದು ಕೇಳಿದಾಗ ಹೀಗೆ ಹೇಳಿದ್ದಾರೆ. ಹೌದು ರಿಶಭ್ ಪಂತಾ ರವರನ್ನು ಸಂದರ್ಶಕರು ನಿಮ್ಮ ನೆಚ್ಚಿನ ನಟಿ ಯಾರೆಂದು ಹೇಳಿದಾಗ ನನ್ನ ನೆಚ್ಚಿನ ನಟಿ ಶ್ರದ್ಧಾ ಕಪೂರ್. ಅವಕಾಶ ಸಿಕ್ಕರೆ ಅವರೊಂದಿಗೆ ಡೇಟ್ ಗೆ ಹೋಗಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಶ್ರದ್ಧಾ ಕಪೂರ್ ಬಾಲಿವುಡ್ ನ ಖ್ಯಾತ ಹಿರಿಯ ನಟ ಶಕ್ತಿ ಕಪೂರ್ ರವರ ಮಗಳು ಹಾಗೂ ಈಗ ಬಾಲಿವುಡ್ ನಲ್ಲಿ ತಮ್ಮ ನಟನೆಯಯಿಂದಾಗಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿರುವಂತಹ ಸ್ಟಾರ್ ನಟಿ.

ಇನ್ನೊಂದು ವಿಷಯದ ಬಗ್ಗೆ ಅವಲೋಕಿಸುವುದಾದರೆ ರಿಶಭ್ ಪಂತ್ ರವರಿಗೆ ಮೊದಲೇ ಹೇಳಿದಂತೆ 21 ವರ್ಷ ಇತ್ತ ಶ್ರದ್ಧಾ ಕಪೂರ್ ರವರಿಗೆ 32 ವರ್ಷ. ತಮಗಿಂತ 11 ವರ್ಷ ದೊಡ್ಡವರಾಗಿರುವ ನಟಿಯೊಂದಿಗೆ ರಿಶಭ್ ಡೇಟ್ ಕುರಿತಂತೆ ಮಾತನಾಡಿದ್ದಾರೆ. ಅಂದಹಾಗೆ ಈಗಿನ ಕಾಲದಲ್ಲಿ ವಯಸ್ಸಿನ ಅಂತರ ಅಷ್ಟಾಗಿ ಏನು ಕಾಡಿಲ್ಲ ಕಾಡೋದು ಇಲ್ಲ. ಇತ್ತ ಈ ಹೇಳಿಕೆ ಕುರಿತಂತೆ ಶ್ರದ್ಧಾ ಕಪೂರ್ ಏನು ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಅಂದ ಹಾಗೇ ಈ ಹಿಂದೆ ರಿಶಭ್ ಪಂತ್ ರವರು ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌಟೇಲಾ ರವರ ನಂಬರ್ ನ್ನು ಬ್ಲಾ ಕ್ ಮಾಡಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ಧಿಯಾಗಿತ್ತು. ರಿಶಭ್ ಪಂತ್ ರವರ ಕುರಿತಂತೆ ನಿಮ್ಮ ಅಭಿಪ್ರಾಯಗಳೇನು ಕಾಮೆಂಟ್ ಮೂಲಕ ತಿಳಿಸಿ.