ಮುಂದಿನ ಐಪಿಎಲ್ ನಲ್ಲಿ ಹೊಸದಾಗಿ ಸೇರಿಕೊಳ್ಳುವ ಸಾಧ್ಯತೆ ಇರುವ ಟಾಪ್ 5 ನಗರಗಳು ಯಾವ್ಯಾವು ಗೊತ್ತೇ??
ಮುಂದಿನ ಐಪಿಎಲ್ ನಲ್ಲಿ ಹೊಸದಾಗಿ ಸೇರಿಕೊಳ್ಳುವ ಸಾಧ್ಯತೆ ಇರುವ ಟಾಪ್ 5 ನಗರಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಪ್ರಪಂಚದ ಶ್ರೀಮಂತ ಸ್ಪೋರ್ಟ್ಸ್ ಲೀಗ್ ನಲ್ಲಿ ನಮ್ಮ ಐಪಿಎಲ್ ಕೂಡ ಒಂದು. ಇಡೀ ಪ್ರಪಂಚದಲ್ಲಿ ಇರೋ ಕ್ರಿಕೆಟ್ ಸಂಸ್ಥೆಗಳಲ್ಲಿ ಭಾರತದ ಬಿಸಿಸಿಐ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನ್ನೋದು ನಿಮಗೆ ಗೊತ್ತೇ ಇದೆ. ಈ ಬಾರಿಯ ಐಪಿಎಲ್ ಲಾಕ್ ಡೌನ್ ಕಾರಣಗಳಿಂದ ಹಾಗೂ ಕಠಿಣ ನಿಯಮಗಳಿಂದಾಗಿ ಟೂರ್ನಮೆಂಟ್ ರದ್ದಾಗಿತ್ತು ಹಾಗೂ ಇದೇ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರವರೆಗೆ ದುಬೈನಲ್ಲಿ ಪಂದ್ಯಾವಳಿಗಳನ್ನು ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ.
ಹಾಗಾಗಿ ನಿರಾಶರಾಗಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ನ ಮಹಾ ಹಬ್ಬ ವಾಪಾಸ್ ಬರುತ್ತಿರುವ ಖುಷಿ ಇದೆ. ಈಗ ಐಪಿಎಲ್ ನಲ್ಲಿ 8 ತಂಡಗಳು ಭಾರತದ 8 ನಗರಗಳನ್ನು ಪ್ರತಿನಿಧಿಸಿ ಭಾಗವಹಿಸುತ್ತಿವೆ. ಆದರೆ ಮುಂದಿನ ವರ್ಷ ಅಂದರೆ 2022 ರಲ್ಲಿ ದೊಡ್ಡ ಬದಲಾವಣೆಯ ಸೂಚನೆಯ ಗಾಳಿ ಬೀಸತೊಡಗಿದೆ. ಹೌದು 2022 ರಲ್ಲಿ ನಡೆಯುವ ಮೆಗಾ ಆಕ್ಷನ್ ನಲ್ಲಿ ಇನ್ನೂ 5 ನಗರಗಳನ್ನು ಪ್ರತಿನಿಧಿಸುವ ತಂಡಗಳು ಐಪಿಎಲ್ 2022 ರಲ್ಲಿ ಭಾಗಿಯಾಗಲಿವೆ ಗಂಬ ಮಾಹಿತಿಗಳು ಈಗಾಗಲೇ ಕೆಲವು ಮೂಲಗಳಿಂದ ಸೋರಲಾರಂಭಿಸಿವೆ.
2022 ರಲ್ಲಿ ನಡೆಯೋ ಮೆಗಾ ಆಕ್ಷನ್ ನಲ್ಲಿ ತಂಡಗಳ ಕಂಪ್ಲೀಟ್ ರಿಶಫಲ್ ನಡೆಯೋ ಸಾಧ್ಯತೆಯಿದೆ. ಇದರಲ್ಲಿ ಇನ್ನೂ 5 ತಂಡಗಳು ಭರ್ತಿಯಾಗೋ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ. ಈಗಾಗಲೇ ಬೆಂಗಳೂರು ನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ನ್ನು ಪ್ರತಿನಿಧಿಸಲು ಮುಂಬೈ ಇಂಡಿಯನ್ಸ್, ಚೆನ್ನೈ ಯನ್ನು ಪ್ರತಿನಿಧಿಸಲು ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್ ನ್ನು ಪ್ರತಿನಿಧಿಸಲು ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ ವನ್ನು ಪ್ರತಿನಿಧಿಸಲು ರಾಜಸ್ಥಾನ ರಾಯಲ್ಸ್, ದೆಲ್ಲಿಯನ್ನು ಪ್ರತಿನಿಧಿಸಲು ದೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾವನ್ನು ಪ್ರತಿನಿಧಿಸಲು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ನ್ನು ಪ್ರತಿನಿಧಿಸಲು ಪಂಜಾಬ್ ಕಿಂಗ್ಸ್ ಈಗಾಗಲೇ ಐಪಿಎಲ್ ತಂಡಗಳಾಗಿವೆ.
ಇನ್ನು 2022 ಕ್ಕೆ ಭಾಗವಹಿಸುವ 5 ತಂಡಗಳ ಕುರಿತಂತೆ ನಮಗೆ ಕೆಲ ಮಾಹಿತಿಗಳೂ ಸಿಕ್ಕಿವೆ. ಮಾಹಿತಿಯ ಪ್ರಕಾರ ಮೊದಲಿಗೆ ಪುಣೆ. ಹೌದು ಪುಣೆ ಈ ಸ್ಪರ್ಧೆಯಲ್ಲಿ ಪ್ರಮುಖ ಸ್ಪರ್ಧಿಯಾಗಿದೆ. ಯಾಕೆಂದರೆ ಪುಣೆ ಹೆಸರಲ್ಲಿ ಈಗಾಗಲೇ ಐಪಿಎಲ್ ಹಿಸ್ಟರಿಯಲ್ಲಿ ಎರಡು ತಂಡಗಳು ಬಂದು ಹೋಗಿವೆ. ಒಂದು ಪುಣೆ ವಾರಿಯರ್ಸ್, ಈ ತಂಡದಲ್ಲಿ ಸೌರವ್ ಗಂಗೂಲಿ ಹಾಗೂ ಯುವರಾಜ್ ಸಿಂಗ್ ರಂತಹ ಆಟಗಾರರು ಆಡಿದ್ದರು. ನಂತರ ಪುಣೆ ಸೂಪರ್ ಜೈಂಟ್ಸ್ ತಂಡ ಕೂಡ ಧೋನಿ ಹಾಗೂ ಸ್ಟೀವ್ ಸ್ಮಿತ್ ರವರ ನಾಯಕತ್ವ ಕಂಡಿದ್ದ ತಂಡವಾಗಿತ್ತು.
ಒಳ್ಳೆಯ ಸಪೋರ್ಟ್ ಕೂಡ ಈ ತಂಡಕ್ಕೆ ಸಿಗಲಿದೆ. ಎರಡನೇದಾಗಿ ಅಹಮದಾಬಾದ್. ಈ ಹಿಂದೆ ಗುಜರಾತ್ ಹೆಸರಿನಲ್ಲಿ ರೈನಾ ನಾಯಕತ್ವದಲ್ಲಿ ಒಂದು ತಂಡವು ಐಪಿಎಲ್ ನಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಈಗಷ್ಟೇ ಮೊಟೆರಾ ಸ್ಟೇಡಿಯಂ ಅಹಮದಾ ಬಾದ್ ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ಎಂಬ ಮರುನಾಮಕರಣ ಪಡೆದು ಜಗತ್ತಿನಲ್ಲಿ ಅತೀ ದೊಡ್ಡ ಸ್ಟೇಡಿಯಂ ಆಗಿ ಮಿಂಚುತ್ತಿದ್ದು, ಅಹಮದಾಬಾದ್ ಹೆಸರಿನಲ್ಲಿ ಒಂದು ತಂಡ ಐಪಿಎಲ್ ಇರಬೇಕು ಎನ್ನುವ ಸದ್ದು ಅಲ್ಲಿನ ಅಭಿಮಾನಿಗಳಲ್ಲಿ ಜಾಸ್ತಿಯಾಗಿದೆ.
ಮೂರನೇದಾಗಿ ಕೊಚ್ಚಿ. ಕೊಚ್ಚಿ ಟಸ್ಕರ್ಸ್ ಕೇರಳ ಎಂಬ ತಂಡದ ಹೆಸರನ್ನು ಈ ಹಿಂದೆ ನೀವೂ ಐಪಿಎಲ್ ನಲ್ಲಿ ಕೇಳಿರುತ್ತಿರಾ. ರವೀಂದ್ರ ಜಡೇಜ ಕೂಡ ಈ ತಂಡದಲ್ಲಿ ಆಡಿದ್ದರು. ನಂತರ ಈ ತಂಡ ಕೂಡ ಬ್ಯಾನ್ ಆಗಿತ್ತು. ಈಗ ಕೊಚ್ಚಿ ತಂಡದ ಬೇಡಿಕೆ ಜಾಸ್ತಿಯಾಗಿದ್ದು ಕೇರಳದ ತಂಡವೊಂದು ಕಣಕ್ಕಿಳಿದರೆ ಸೌತ್ ಇಂಡಿಯಾದ ಎಲ್ಲಾ 4 ರಾಜ್ಯಗಳ ತಂಡಗಳು ಕಣಕ್ಕಿಳಿದಂತಾಗುತ್ತದೆ. ನಾಲ್ಕನೇದಾಗಿ ಲಕ್ನೋ. ಲಕ್ನೋ ದಲ್ಲಿ ಕೂಡ 50000 ಜನರು ಕೂರಬಲ್ಲಂತಹ ಇಂಟರ್ ನ್ಯಾಷನಲ್ ಸ್ಟೇಡಿಯಂ ಇದ್ದೂ ಇದು ಈಗಾಗಲೇ ಹಲವಾರು ಅಂತರಾಷ್ಟ್ರೀಯ ಪಂದ್ಯಗಳನ್ನು ಹೋಸ್ಟ್ ಮಾಡಿದೆ ಹಾಗಾಗಿ ಲಕ್ನೋ ತಂಡ ಕೂಡ ಐಪಿಎಲ್ 2022 ನಲ್ಲಿ ಭಾಗವಹಿಸುವ ಉಮೇದುವಾರಿಕೆ ತೋರಿದೆ.
ಐದನೇದಾಗಿ ಇಂದೋರ್. ಇಂಡಿಯಾದ ಕ್ಲೀನೆಸ್ಠ್ ಸಿಟಿಗಳಲ್ಲಿ ಹೆಸರು ಸಂಪಾದಿಸಿರುವ ಈ ನಗರದಲ್ಲಿ ಈಗಾಗಘಲೇ ಹೋಳ್ಕರ್ ಸ್ಟೇಡಿಯಂ ಇದ್ದು ಅದಾಗಲೇ ಹಲವಾರು ಅಂತರಾಷ್ಟ್ರೀಯ ಪಂದ್ಯಗಳನ್ನು ಹೋಸ್ಟ್ ಮಾಡಿರುವ ಅನುಭವ ಇದೆ. ಈ ನಗರದಲ್ಲಿ ಕೂಡ ಒಂದು ತಂಡ 2022 ರ ಐಪಿಎಲ್ ನ ಮೆಗಾ ಆಕ್ಷನ್ ನಲ್ಲಿ ಭಾಗವಹಿಸಲಿದೆ. ನಿಮಗೆ ಏನನ್ನಿಸುತ್ತದೆ 2022 ರ ಐಪಿಎಲ್ ನಲ್ಲಿ ಹೊಸ 5 ತಂಡಗಳು ಪಾಲ್ಗೊಳ್ಳುತ್ತವೆಯಾ ಇಲ್ಲವಾ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.