ಕೊಹ್ಲಿ, ರೋಹಿತ್,ಬುಮ್ರಾ ಅಲ್ಲವೇ ಅಲ್ಲ, ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆ ದಿನಾಂಕ ಗೊತ್ತಾಗಿದೆ. ಇದೇ ಜೂನ್ 18 ರಿಂದ ಜೂನ್ 22ರವರೆಗೆ ಟೆಸ್ಟ್ ಪಂದ್ಯ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಈ ಪಂದ್ಯವನ್ನ ನೇರ ಪ್ರಸಾರ ಮಾಡಲಿದೆ. ಇದೇ ಜೂನ್ 3 ರಂದು ಭಾರತ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ಈ ಮಧ್ಯೆ ಆಟಗಾರರ ಮಧ್ಯೆ ಟಾಕ್ ವಾರ್ ಶುರು ಆಗಿದೆ. ಇವೆಲ್ಲದರ ನಡುವೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಆಟಗಾರರ ಪಟ್ಟಿ ತಯಾರಿಸಿದೆ. ವಿಪರ್ಯಾಸವೆಂದರೇ ಕೊಹ್ಲಿ, ರೋಹಿತ್, ಬುಮ್ರಾ ಯಾರು ಈ ಪಟ್ಟಿಯಲ್ಲಿ ಇಲ್ಲ. ಆ ಪ್ರಮುಖ ಪಾತ್ರವಹಿಸುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಮೊದಲನೆಯದಾಗಿ ಮಹಮದ್ ಸಿರಾಜ್ – ಸಿರಾಜ್ ಪಾಲಿಗೆ 2020 ಪ್ರಮುಖ ವರ್ಷ. ಐಪಿಎಲ್ ನಿಂದ ಹಿಡಿದು ಆಸ್ಟ್ರೇಲಿಯಾ ಪ್ರವಾಸದಲ್ಲೂ ಸಿರಾಜ್ ಹೀರೋ ಆಗಿದ್ದರು. ಇತ್ತಿಚಿಗೆ ನಡೆದ ಐಪಿಎಲ್ ನಲ್ಲಿಯೂ ದಾಖಲೆಯ ಗಂಟೆಗೆ146 ಕೀ.ಮಿ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇಂಗ್ಲೆಂಡ್ ನ ಬೌನ್ಸಿ ಹಾಗೂ ವೇಗಿಗಳಿಗೆ ಸಹಕಾರಿಯಾಗುವ ಪಿಚ್ ನಲ್ಲಿ ಖಂಡಿತವಾಗಿಯೂ ಸಿರಾಜ್ ಕಮಾಲ್ ಮಾಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಮಹಮದ್ ಶಮಿ ಬದಲು ಮಹಮದ್ ಸಿರಾಜ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಇನ್ನು ಎರಡನೆಯದಾಗಿ ರವೀಂದ್ರ ಜಡೇಜಾ – ಸರ್ ಜಡೇಜಾ ಆಪತ್ಭಾಂಧವ. ಬೌಲಿಂಗ್ ಅಥವಾ ಬ್ಯಾಟಿಂಗ್ ನಲ್ಲಿ ತಂಡ ಕಷ್ಟದಲ್ಲಿದ್ದಾಗಲೇ ಸದಾ ನೆರವಿಗೆ ಬರುತ್ತಾರೆ. ನ್ಯೂಜಿಲೆಂಡ್ ತಂಡದಲ್ಲಿ ಹೆಚ್ಚು ಬಲಗೈ ಬ್ಯಾಟ್ಸ್ ಮನ್ ಗಳು ಇರುವ ಕಾರಣ, ಖಂಡಿತವಾಗಿಯೂ ಜಡೇಜಾ ಬೌಲಿಂಗ್ ನಲ್ಲಿ ಪ್ರಭಾವಿಯಾಗುತ್ತಾರೆ. ಇನ್ನು ಬೌನ್ಸಿ ಪಿಚ್ ನಲ್ಲಿ ಹೆಚ್ಚು ಸಿಕ್ಸರ್ ಭಾರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇನ್ನು ಕೊನೆಯದಾಗಿ ರಿಷಭ್ ಪಂತ್ – ಸದ್ಯ ವಿಶ್ವದ ನಂ 1 ವಿಕೇಟ್ ಕೀಪರ್ ಬ್ಯಾಟ್ಸಮನ್. 140 ಕೀ.ಮಿ ಗಳಲ್ಲಿ ಬರುವ ಎಸೆತಗಳಿಗೂ ಪ್ಯಾಡಲ್ ಸ್ವೀಪ್ ಮಾಡುವ ಮೂಲಕ ಚೆಂಡನ್ನ ಬೌಂಡರಿಗೆ ಕಳಿಸುವ ಸಾಮರ್ಥ್ಯವುಳ್ಳ ಆಟಗಾರ. ಸದ್ಯ ಉತ್ತಮ ಫಾರ್ಮ್ ನಲ್ಲಿರುವ ಪಂತ್, ಆ ಫಾರ್ಮ್ ನ್ನ ಇಂಗ್ಲೆಂಡ್ ನಲ್ಲಿ ಸಹ ಮುಂದುವರಿಸುವ ಸಾಧ್ಯತೆ ಇದೆ. ಇವರು ಮೂರು ಜನ ಒಳ್ಳೆಯ ಪ್ರದರ್ಶನ ನೀಡಿದರೇ ಖಂಡಿತ ಭಾರತ ವಿಶ್ವಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸುವ ಸಾಧ್ಯತೆ ಹೆಚ್ಚು. ಭಾರತದ ಪರ ಪ್ರಮುಖ ಪಾತ್ರ ವಹಿಸುವ ನಿಮ್ಮ ಆಯ್ಕೆಯನ್ನು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.