UAE ನಲ್ಲಿ ನಡೆಯಲಿರುವ ಉಳಿದ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??
UAE ನಲ್ಲಿ ನಡೆಯಲಿರುವ ಉಳಿದ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಇಂದಿಗೂ ಶ್ರೀಮಂತ ಸಂಸ್ಥೆಯಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಐಪಿಎಲ್. ಲಲಿತ್ ಮೋದಿ ಹುಟ್ಟು ಹಾಕಿದ ಈ ಕ್ರಿಕೆಟ್ ಮಹಾ ಹಬ್ಬ ಬಿಸಿಸಿಐ ಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಕ್ರಿಕೆಟ್ ಕಂಡು ಹಿಡಿದ ಆಂಗ್ಲರಿಗಿಂತಲೂ ದುಪ್ಪಟ್ಟು ಕ್ರಿಕೆಟ್ ನಲ್ಲಿ ಯಶಸ್ಸನ್ನು ಪಡೆದವರು ಭಾರತೀಯರು ಎಂದರೆ ಯಾವ ತಪ್ಪು ಕೂಡ ಇಲ್ಲ. ಐಪಿಎಲ್ ನ ಐಶರಾಮಿ ತನವನ್ನು ಮ್ಯಾಚ್ ಮಾಡುವಂತಹ ಯಾವುದೇ ಕ್ರಿಕೆಟ್ ಲೀಗ್ ಇಲ್ಲಿಯವರೆಗೆ ಜನ್ಮ ಪಡೆದಿಲ್ಲ ಇನ್ನು ಮುಂದೆ ಬರೋದು ಇಲ್ಲ.
ಐಪಿಎಲ್ ನ್ನು ಕಾಪಿ ಮಾಡಿ ಹಲವಾರು ದೇಶಗಳು ತಮ್ಮದೇ ಆದ ಟೂರ್ನಮೆಂಟ್ ನ್ನು ಮಾಡಿದರೂ ಸಹ ಐಪಿಎಲ್ ನ ಒಂದು ಪರ್ಸೆಂಟ್ ಗೂ ನಿಲ್ಲಲಾಗಿಲ್ಲ. ಇಂದಿಗೂ ಬಿಸಿಸಿಐ ಐಸಿಸಿ ಯನ್ನು ತನ್ನ ಇಶಾರೆಗೆ ಕುಣಿಸುತ್ತದೆ ಎಂದರೆ ಅದು ಐಪಿಎಲ್ ನ ಶ್ರೀಮಂತಿಕೆಯ ಪವರ್. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಇದರಿಂದ ಭಾರತದ ಆರ್ಥಿಕತೆ ವಿಲೀನವಾಗುವ ಆದಾಯ ಕೂಡ ದೊಡ್ಡ ಮೊತ್ತದ್ದೇ.
ಆದರೆ ಈ ಬಾರಿಯ ಐಪಿಎಲ್ ನಾರ್ಮಲ್ ಆಗಿ ಪ್ರಾರಂಭವಾದರೂ ಲಾಕ್ ಡೌನ್ ನಿಂದ ಎಲ್ಲವೂ ಅರ್ಧಕ್ಕೆ ನಿಂತಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೊಮ್ಮೆ ಐಪಿಎಲ್ 2021 ರ ದ್ವಿತೀಯಾರ್ಧ ದುಬೈನಲ್ಲಿ ನಡೆಯೋ ಗಾಳಿಸುದ್ಧಿ ಈಗ ನಿಜವಾಗಿದೆ. ಹೌದು ಬಿಸಿಸಿಐ ಐಪಿಎಲ್ 2021 ನ ಎರಡನೇ ಚರಣವನ್ನು ದುಬೈನಲ್ಲಿ ಸೆಪ್ಟೆಂಬರ್ 15ರಿಂದ ಆಕ್ಟೋಬರ್ 15 ರ ನಡುವೆ ಮಾಡುವ ಅಧಿಕೃತ ಪ್ರಕಟಣೆಯನ್ನು ಹೊರ ಹಾಕಿದೆ.
ಆದರೆ ಈಗ ಅದರಲ್ಲಿ ಕೂಡ ಒಂದು ಸಮಸ್ಯೆ ಕಾಡುತ್ತಿದೆ. ದುಬೈನಲ್ಲಿ ನಡೆಯಲಿರೋ ಈ ಬಾರಿಯ ಮಃಂದೀವೆರದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನ ಬಹುತೇಕ ಆಟಗಾರರು, ಹಾಗೂ ಇನ್ನೂ ಕೆಲವು ವಿದೇಶಿ ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಯಾವ ಆ 10 ವಿದೇಶಿ ಆಟಗಾರರು ದುಬೈನಲ್ಲಿ ನಡೆಯಲಿರೋ ಐಪಿಎಲ್ 2021 ನಲ್ಲಿ ಭಾಗವಹಿಸುತ್ತಿಲ್ಲ ಎಂಬುದನ್ನು ನೋಡೋಣ.
ಮೊದಲನೆಯದಾಗಿ ಜಾಸ್ ಬಟ್ಲರ್. ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡೋ ಆಂಗ್ಲ ಬ್ಯಾಟ್ಸ್ಮನ್ ಜಾಸ್ ಬಟ್ಲರ್ ಈ ಬಾರಿಯ ಐಪಿಎಲ್ ಗೆ ಹಾಜರಾಗೋದು ಅನುಮಾನವಾಗಿದೆ. ಎರಡನೆಯದಾಗಿ ಬೆನ್ ಸ್ಟೋಕ್ಸ್. ಇನ್ನೊಬ್ಬ ಇಂಗ್ಲಿಷ್ ಆಟಗಾರ. ಬೆನ್ ಸ್ಟೋಕ್ಸ್ ಈಗಿನ ಕಾಲದ ಬೆಸ್ಟ್ ಆಲ್-ರೌಂಡ್ ಕ್ರಿಕೆಟಿಗರಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರೂ ಕೂಡ ಇಂಗ್ಲೆಂಡ್ ತಂಡದ ಪಾಕಿಸ್ತಾನ ವಿರುದ್ಧ ಪಂದ್ಯಗಳಲ್ಲಿ ಭಾಗವಹಿಸುವುದರಿಂದ ಈ ಬಾರಿಯ ಐಪಿಎಲ್ ನಲ್ಲಿ ಭಾಗವಹಿಸೋದಿಲ್ಲ. ಇನ್ನು ಮೂರನೆಯದಾಗಿ ಇಯೋನ್ ಮಾರ್ಗನ್. ಮಾರ್ಗನ್ ಇಂಗ್ಲೆಂಡ್ ತಂಡದ ಕಪ್ತಾನ ಹಾಗೂ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕಪ್ತಾನ ಕೂಡ ಹೌದು. ಈ ಬಾರಿ ಕೆಕೆಆರ್ ತನ್ನ ಅಸಲಿ ಕಪ್ತಾನ ಇಲ್ಲದೇ ಆಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ನಾಲ್ಕನೆಯದಾಗಿ ಜಾನಿ ಬೇರ್ಸ್ಟೋ. ಮತ್ತೊಬ್ಬ ಭರವಸೆಯ ಆಂಗ್ಲ ಬ್ಯಾಟ್ಸ್ಮನ್ ಜಾನಿ ಕೂಡ ಪಾಕಿಸ್ತಾನದ ವಿರುದ್ಧದ ಇಂಗ್ಲೆಂಡ್ ತಂಡದ ಪಂದ್ಯಗಳಲ್ಲಿ ಹಾಜರಾಗೋದ್ರಿಂದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಭರವಸೆಯ ಬ್ಯಾಟ್ಸ್ಮನ್ ನ ಕೊರತೆ ಎದ್ದು ಕಾಣೋದಂತೂ ನಿಜ. ಇನ್ನು ೫ ನೇ ಯದಾಗಿ ಡೇವಿಡ್ ಮಲನ್. ಈಗಿನ ಐಸಿಸಿ RANKING ನಲ್ಲಿ ಟಿಟ್ವೆಂಟಿಯ ಟಾಪ್ ಬ್ಯಾಟ್ಸ್ಮನ್. ಈತ ಕೂಡ ಇಂಗ್ಲೆಂಡ್ ತಂಡದವನು. ಪಂಜಾಬ್ ತಂಡಕ್ಕೆ ಇವರ ಬ್ಯಾಟಿಂಗ್ ಕೊರತೆ ಈ ಬಾರಿ ದುಬೈನಲ್ಲಿ ಕಾಡೋದಂತೂ ಖಚಿತ.
ಇನ್ನು ಗ್ಲೆನ್ ಮ್ಯಾಕ್ಸ್ ವೆಲ್. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳೇಯವನ್ನು ಸೇರಿದ್ದ ಮ್ಯಾಕ್ಸಿ ತಮ್ಮ ಬ್ಯಾಟಿಂಗ್ ನಿಂದ ತಂಡದ ನಂಬುಗೆಯ ಬ್ಯಾಟ್ಸ್ಮನ್ ಆಗಿದ್ದರು. ಆದರೆ ಈ ಬಾರಿ ದುಬೈನಲ್ಲಿ ಆರ್.ಸಿ.ಬಿ. ತಂಡವನ್ನು ಮ್ಯಾಕ್ಸ್ ವೆಲ್ ಸೇರಿಕೊಳ್ಳೋದು ಅನುಮಾನವೇ. ಅಷ್ಟೇ ಅಲ್ಲದೆ ಮಾರ್ಕಸ್ ಸ್ಟೋನಿಸ್. ಆಸ್ಟ್ರೇಲಿಯಾದ ಭರವಸೆಯ ಆಲ್-ರೌಂಡರ್ ಆಟಗಾರ ಸ್ಟೋನಿಸ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಡೆಯೋ ಬಾಂಗ್ಲಾದೇಶ ವಿರುದ್ಧ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಆಡೋದ್ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಲಭ್ಯ ವಾಗೋದಿಲ್ಲ.
ಇನ್ನು ಜೇ ರಿಚರ್ಡ್ ಸನ್. ಪಂಜಾಬ್ ಗೆ 14 ಕೋಟಿ ಬರೋಬ್ಬರಿ ಬೆಲೆಗೆ ಮಾರಾಟವಾಗಿದ್ದ ಆಸ್ಟ್ರೇಲಿಯಾ ಬೌಲರ್ ಈ ಬಾರಿ ದುಬೈನ ಫ್ಲೈಟ್ ಹತ್ತೋದು ಅನುಮಾನ. ಅಷ್ಟೇ ಅಲ್ಲದೆ ಸ್ಟೀವ್ ಸ್ಮಿತ್. ಆಸ್ಟ್ರೇಲಿಯಾದ ಬಹುಮೂಲ್ಯ ಆಟಗಾರ ಈ ಬಾರಿ ದೆಲ್ಲಿಯ ಪಾಳೇಯವನ್ನು ಸೇರದೆ, ಆಸ್ಟ್ರೇಲಿಯಾ ತಂಡದೊಂದಿಗೆ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಕೊನೆಯದಾಗಿ ಡೇವಿಡ್ ವಾರ್ನರ್. ಡೇವಿಡ್ ವಾರ್ನರ್ ಕೂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಳೇಯದಲ್ಲಿ ಗೈರು ಹಾಜರಾಗೋದು ಖಂಡಿತ. ನೋಡಿದ್ರಲ್ಲಾ ಈ 10 ಆಟಗಾರರು ಐಪಿಎಲ್ 2021 ರ ಎರಡನೇ ಚರಣಕ್ಕೆ ಗೈರು ಹಾಜರಾಗಬಹುದಾದ ಆಟಗಾರರು. ನಿಮಗೆ ಈ ಲಿಸ್ಟ್ ನಲ್ಲಿ ನಿಮಗೆ ಯಾವ ಕ್ರಿಕೆಟಿಗ ಐಪಿಎಲ್ ಗೆ ವಾಪಾಸ್ ಬರಬಹುದು ಎಂದು ಕಾಮೆಂಟ್ ಮೂಲಕ ತಿಳಿಸಿ.