ಎಲ್ಲ ದೇಶಗಳನ್ನು ಕರೆತಂದು ಐಪಿಎಲ್ ಗೆ ರಂಗು ನೀಡಲು ಅಖಾಡಕ್ಕಿಳಿದ ಗಂಗೂಲಿ, ಪಾಕಿಸ್ತಾನ್ ಗೆ ಬಾರಿ ಮುಜುಗರ. ಮಾಡಿದ್ದೇನು ಗೊತ್ತಾ??
ಎಲ್ಲ ದೇಶಗಳನ್ನು ಕರೆತಂದು ಐಪಿಎಲ್ ಗೆ ರಂಗು ನೀಡಲು ಅಖಾಡಕ್ಕಿಳಿದ ಗಂಗೂಲಿ, ಪಾಕಿಸ್ತಾನ್ ಗೆ ಬಾರಿ ಮುಜುಗರ. ಮಾಡಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಅರ್ಧಕ್ಕೆ ನಿಂತು ಹೋಗಿರುವ ಐಪಿಎಲ್ ಟೂರ್ನಿಯನ್ನು ಮುಂದುವರೆಸಲು ಭಾರತ ದೇಶದ ಕ್ರಿಕೆಟ್ ಸಂಸ್ಥೆ ಯುಎಇ ದೇಶದ ಮೊರೆ ಹೋಗಿದೆ. ಕಳೆದ ಬಾರಿ ಬಯೋ ಬಬಲ್ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿ, ಯಶಸ್ಸು ಗಳಿಸಿದ್ದ ಕಾರಣ ಈ ಬಾರಿಯೂ ಕೂಡ ಉಳಿದ ಪಂದ್ಯಗಳನ್ನು ಆಯೋಜನೆ ಮಾಡಲು ಯುಎಇ ದೇಶದ ಮೊರೆ ಹೋಗಲಾಗಿದೆ. ಆದರೆ ಹೀಗೆ ಉಳಿದ ಐಪಿಎಲ್ ಟೂರ್ನಿಯನ್ನು ನಡೆಸಲು ಆಯೋಜನೆ ನಡೆಸುತ್ತಿರುವ ಸಮಯದಲ್ಲಿ ಇದರ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಹಾಗೂ ಇದಕ್ಕೆ ಹಲವಾರು ವ್ಯತಿರಿಕ್ತ ಮಾತುಗಳು ಕೇಳಿ ಬಂದಿವೆ.
ಯಾಕೆಂದರೆ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲನೆಯದಾಗಿ ವಿಶ್ವ ಕಪ್ ಟೂರ್ನಿ ಹತ್ತಿರ ವಿರುವ ಕಾರಣ ಹಾಗೂ ಕೋರೋಣ ಕಾರಣದಿಂದ ಐಪಿಎಲ್ ನಡೆಸಬಾರದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇ ಕಾರಣಕ್ಕಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ದೇಶಗಳು ತಮ್ಮ ಆಟಗಾರರನ್ನು ಕಳುಹಿಸುವುದಿಲ್ಲ ಎನ್ನುತ್ತಿವೆ. ಅಷ್ಟೇ ಅಲ್ಲದೇ, ತನಗೆ ಯಾವುದೇ ಸಂಬಂಧ ವಿಲ್ಲದೆ ಇದ್ದರೂ ಪಾಕಿಸ್ತಾನ ಕೂಡ ಐಸಿಸಿ ಬಳಿ ವಿಶ್ವಕಪ್ ಟೂರ್ನಿಗೂ ಮುನ್ನ ಯಾವುದೇ ಕಾರಣಕ್ಕೂ ಆಟಗಾರರಿಗೆ ಆಟವಾಡಲು ಅನುಮತಿ ನೀಡಬಾರದು ಎಂದು ಹೇಳುತ್ತಿದೆ.
ಹೀಗೆ ಪಾಕಿಸ್ತಾನ ಪ್ರತಿಕ್ರಯಿಸಿದ ಕೂಡಲೇ ಎಚ್ಚೆತ್ತ ಸೌರವ್ ಗಂಗೂಲಿ ರವರು ಶತಾಯ ಗತಾಯ ಐಪಿಎಲ್ ಟೂರ್ನಿಯನ್ನು ಯಶಸ್ವಿಗೊಳಿಸಬೇಕು ಎಂಬ ಪಣ ತೊಟ್ಟಂತೆ ಕಾಣುತ್ತಿದೆ. ಹೌದು ಸ್ನೇಹಿತರೇ, ಇದೀಗ ಈ ಕುರಿತು ಅಖಾಡಕ್ಕೆ ಇಳಿದಿರುವ ಸೌರವ್ ಗಂಗೂಲಿ ರವರು, ನೇರವಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ದೇಶಗಳ ಕ್ರಿಕೆಟ್ ಬೋರ್ಡ್ ಗಳ ಜೊತೆ ಮಾತುಕತೆ ಆರಂಭಿಸಿದ್ದಾರೆ ಇದೇ ಸಮಯದಲ್ಲಿ ವಿಶ್ವಕಪ್ ಟೂರ್ನಿಯನ್ನು ಕೂಡ ಆಯೋಜನೆಯನ್ನು ತಡೆಯಲು, ಬಿಸಿಸಿಐ ಹೇಳುವ ವರೆಗೆ ಭಾರತ ಪರಿಸ್ಥಿತಿಯನ್ನು ಅವಲೋಕಿಸಿ ಸುಮ್ಮನೆ ಇರಲು ಐಸಿಸಿ ಗೆ ಸೂಚಿಸಿದೆ ಹಾಗೂ ಬಿಸಿಸಿಐ ಕುದ್ದು ವಿಶ್ವಕಪ್ ದಿನಾಂಕಗಳನ್ನು ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಐಸಿಸಿ ಅಲ್ಲಿ ತಮ್ಮ ಹವಾ ಏನು ಎಂಬುದನ್ನು ಪಾಕಿಸ್ತಾನಕ್ಕೆ ತೋರಿಸಿದ್ದಾರೆ.