‘ಮೊನಾಲಿಸಾ’, ‘ಅಮೃತ ವರ್ಷಿಣಿ’, ಖ್ಯಾತಿಯ ನಟ ಧ್ಯಾನ್ ಅವರು ಇದೀಗ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಅದೆಷ್ಟೋ ಕಲಾವಿದರು ಕೆಲವೇ ಕೆಲವು ಸಮಯಗಳಲ್ಲಿ ಜನಪ್ರಿಯತೆ ಪಡೆದು ನಂತರ ದಿನಗಳು ಕಳೆದಂತೆ ಅವರು ಚಿತ್ರರಂಗದಿಂದ ಮಾಯವಾಗುತ್ತಾರೆ. ಹೌದು ಸಾಕಷ್ಟು ನಟ ಹಾಗೂ ನಟಿಯರು ಒಂದಾನೊಂದು ಕಾಲದಲ್ಲಿ ಜನಪ್ರಿಯತೆ ಪಡೆದು ನಂತರ ದಿನಗಳು ಕಳೆದಂತೆ ಬಣ್ಣದ ಲೋಕದಿಂದ ದೂರವಾಗುತ್ತಾರೆ. ಅಂತಹ ನಟರಲ್ಲಿ ಧ್ಯಾನ್ ಕೂಡ ಒಬ್ಬರು.

ಹೌದು ನಟ ಧ್ಯಾನ್ ಅವರು ಕನ್ನಡ ಸೇರಿದಂತೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ನನ್ನ ಪ್ರೀತಿಯ ಹುಡುಗಿ, ಮೊನಾಲಿಸಾ, ಅಮೃತದಾರೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದೇ ರೀತಿ ಹಿಂದಿ ಭಾಷೆಯಲ್ಲಿ 9 ಹಾಗೂ ತಮಿಳು ಭಾಷೆಯ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ ನಟ ಧ್ಯಾನ್ ಅವರು ಬರುಬರುತ್ತಾ ಬಣ್ಣದ ಲೋಕದಿಂದ ದೂರವಾಗಿಬಿಟ್ಟರು.

ಇನ್ನು ಇವರು ನನ್ನ ಪ್ರೀತಿಯ ಹುಡುಗಿ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪದಾರ್ಪಣೆ ಮಾಡಿದರು. ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ ಸನ್ನು ಪಡೆದ ನಟ ಧ್ಯಾನ್ ಅವರು ಇದೀಗ ಚಿತ್ರರಂಗದಿಂದ ದೂರ ಉಳಿದು ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ? ಹಾಗಾದರೆ ಇಲ್ಲಿರುವ ಸಂಪೂರ್ಣ ಮಾಹಿತಿಯನ್ನು ಒಮ್ಮೆ ಓದಿ. ಹೌದು ಧ್ಯಾನ ಅವರ ನಿಜವಾದ ಹೆಸರು ಸಮೀರ್ ದತ್ತಾಣಿ‌. ಇವರು 1982 ರಲ್ಲಿ ಗುಜರಾತ್ ನಲ್ಲಿ ಹುಟ್ಟಿದರು.

ಇವರು ಕನ್ನಡ ಚಿತ್ರರಂಗದಲ್ಲಿ ನನ್ನ ಪ್ರೀತಿಯ ಹುಡುಗಿ ಎಂಬ ಸಿನೆಮಾದ ಮೂಲಕ ಪರಿಚಿತರಾದವರು. ನಂತರ ಇವರಿಗೆ ಮೊನಾಲಿಸ ಹಾಗೂ ಅಮೃತದಾರೆ ಚಿತ್ರಗಳು ಭಾರಿ ಯಶಸ್ಸನ್ನು ತಂದುಕೊಟ್ಟವು. ನಂತರ ಅವರು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಅಲ್ಲಿಯೂ ಕೂಡ ಯಶಸ್ಸನ್ನು ಪಡೆದರು. ಇನ್ನು ಇವರು 2011ರಲ್ಲಿ ರಿತಿಕ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ಸಮಾರಂಭವು ಡೆಹರಾಡೂನ್ ನಲ್ಲಿ ಆಯೋಜಿಸಲಾಗಿತ್ತು.

ಇನ್ನು ಇವರ ಮದುವೆಗೆ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಇನ್ನೂ ಕಾಲಕಳೆದಂತೆ ಅವಕಾಶಗಳು ಕಡಿಮೆಯಾಗಿದ್ದಕ್ಕಾಗಿಯೋ ಅಥವಾ ಅವರೇ ಸ್ವತಃ ನಿರ್ಧಾರ ಮಾಡಿ ಚಿತ್ರರಂಗದಿಂದ ದೂರ ಉಳಿದರೋ ಗೊತ್ತಿಲ್ಲ. ಒಟ್ಟಾರೆಯಾಗಿ ಅವರು ಬಣ್ಣದ ಲೋಕದಿಂದ ದೂರ ಉಳಿದುಬಿಟ್ಟರು. ಇದೆಲ್ಲದರ ನಂತರ 2014 ರಲ್ಲಿ ತೆರೆಕಂಡ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಎಂಬ ಸಿನಿಮಾದಲ್ಲಿ ಹಾಗೂ ಲವ್ ಯು ಆಲಿಯಾ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಆ ಸಿನಿಮಾಗಳ ನಂತರ ಅವರು ಸಿನಿ ಪರದೆ ಮೇಲೆ ಮತ್ತೆ ಕಾಣಿಸಿಕೊಳ್ಳಲೇ ಇಲ್ಲ. ಇನ್ನು ಅವರ ಕುಟುಂಬ ಟೆಕ್ಸ್ಟೈಲ್ ಇಂಡಸ್ಟ್ರಿಸ್ ಬಿಜಿನೆಸ್ ಮಾಡುತ್ತಿದ್ದು ನಟ ಧ್ಯಾನ್ ಅವರು ಕೂಡ ಅದೇ ಬಿಜಿನೆಸ್ ನಲ್ಲಿ ಸಕ್ರಿಯರಾಗಿದ್ದಾರೆ. ಹೀಗೆ ಚಿತ್ರರಂಗದಿಂದ ದೂರ ಉಳಿದಿರುವ ನಟ ಧ್ಯಾನ ಅವರು ಇದೀಗ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನೊಬ್ಬರ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿರುವ ವಿಡಿಯೋದಲ್ಲಿ ತಿಳಿಸಲಾಗಿದೆ. ಇನ್ನು ಅವರು ಮತ್ತೆ ಚಿತ್ರರಂಗಕ್ಕೆ ಮರಳಿ ಬರಲಿ ಎಂದು ನಾವು ಈ ಮೂಲಕ ಹಾರೈಸೋಣ.

Post Author: Ravi Yadav