UAE ನಲ್ಲಿ ಟೂರ್ನಿ ಫಿಕ್ಸ್ ಆದ ಬೆನ್ನಲ್ಲೇ, ಐಪಿಎಲ್ ಗೆ ಬಿಗ್ ಶಾಕ್, ಆರ್ಸಿಬಿ ತಂಡಕ್ಕೆ ಕೂಡ ಕಹಿ ಸುದ್ದಿ. ಏನು ಗೊತ್ತಾ??
UAE ನಲ್ಲಿ ಟೂರ್ನಿ ಫಿಕ್ಸ್ ಆದ ಬೆನ್ನಲ್ಲೇ, ಐಪಿಎಲ್ ಗೆ ಬಿಗ್ ಶಾಕ್, ಆರ್ಸಿಬಿ ತಂಡಕ್ಕೆ ಕೂಡ ಕಹಿ ಸುದ್ದಿ. ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಮೇ4 ಕ್ಕೆ ಅರ್ಧಕ್ಕೆ ನಿಂತಿದ್ದ ಐಪಿಎಲ್ ನಿಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಒಂದು ವೇಳೆ ಐಪಿಎಲ್ ಸರಿಯಾಗಿ ವೇಳಾಪಟ್ಟಿಯಂತೆ ನಡೆದಿದ್ದರೇ, ಈಗಾಗಲೇ ಫೈನಲ್ ಗೆ ಹೋಗುವ ತಂಡಗಳು ಯಾವುವು ಎಂದು ಗೊತ್ತಾಗುತ್ತಿತ್ತು. ಕಪ್ ಗಾಗಿ ಅಹಮದಾಬಾದ್ ನ ದೊಡ್ಡ ಕ್ರೀಡಾಂಗಣ ಸಜ್ಜಾಗಿರುತ್ತಿತ್ತು. ಆದರೇ ಈ ಮಧ್ಯ ಐಪಿಎಲ್ ನಲ್ಲಿ ಉಳಿದ 31 ಪಂದ್ಯಗಳನ್ನ ಸೆಪ್ಟೆಂಬರ್ ನಲ್ಲಿ ನಡೆಸಲು ಬಿಸಿಸಿಐ ಯೋಜನೆ ಹಮ್ಮಿಕೊಂಡಿತ್ತು.
ಸೆಪ್ಟೆಂಬರ್ 18 ರಿಂದ ಯು.ಎ.ಇ ಯಲ್ಲಿ ಉಳಿದ ಪಂದ್ಯಗಳನ್ನು ಹಮ್ಮಿಕೊಳ್ಳುವುದು. ಅಕ್ಟೋಬರ್ 9 ಅಥವಾ 10 ರಂದು ಫೈನಲ್ ನಡೆಸುವ ಲೆಕ್ಕಾಚಾರದಲ್ಲಿತ್ತು. 10 ದಿನ ಡಬಲ್ ಹೆಡರ್ (ಒಂದೇ ದಿನ ಎರಡು ಪಂದ್ಯ) ಗಳನ್ನು ನಡೆಸುವ ಮೂಲಕ ಬಾಕಿ ಉಳಿದ ಪಂದ್ಯಗಳನ್ನು ಮುಗಿಸಿ ಈ ಭಾರಿಯ ಐಪಿಎಲ್ ನ ಅನಿಶ್ಚಿತತೆಗೆ ಕೊನೆಗಾಣಿಸಲು ಬಿಸಿಸಿಐ ನಿರ್ಧರಿಸಿತ್ತು. ಆದರೇ ಬಿಸಿಸಿಐ ನಿರ್ಧಾರಕ್ಕೆ ಈಗ ಬಿಗ್ ಶಾಕ್ ಬಂದಿದೆ.
ಐಪಿಎಲ್ ನ ಮುಂದುವರಿದ ಪಂದ್ಯಗಳಿಗೆ ನಮ್ಮ ದೇಶದ ಆಟಗಾರರು ಭಾಗವಹಿಸುವುದಿಲ್ಲ ಎಂದು ಎರಡು ಪ್ರಮುಖ ದೇಶದ ಕ್ರಿಕೇಟ್ ಮಂಡಳಿಗಳು ತಿಳಿಸಿವೆ. ಹೌದು ನಿಮ್ಮ ಊಹೆ ನಿಜ. ಆ ಎರಡು ದೇಶಗಳು ಬೇರೆ ಯಾವುದು ಅಲ್ಲ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳು. ಹೌದು ಇಂಗ್ಲೆಂಡ್ ದೇಶದ ಕ್ರಿಕೇಟ್ ಸಂಸ್ಥೆಯ ಎಂ.ಡಿ ಆಶ್ಲೈ ಗೈಲ್ಸ್ ತಿಳಿಸಿರುವ ಪ್ರಕಾರ, ಇಂಗ್ಲೆಂಡ್ ಆಟಗಾರರು ಟಿ20 ವಿಶ್ವಕಪ್ ಟೂರ್ನಿಯ ತನಕ ಬಿಡುವಿಲ್ಲದ ಪ್ರವಾಸವನ್ನ ಹೊಂದಿದ್ದಾರೆ. ಮತ್ತು ಐಪಿಎಲ್ ಗಾಗಿ ನಾವು ಈಗ ನಿಗದಿಪಡಿಸಿರುವ ಸರಣಿಗಳ ವೇಳಾಪಟ್ಟಿಯಲ್ಲಿ ನಾವು ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಡ್ಡಿತುಂಡಾದಂತೆ ಹೇಳಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡದ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸುವುದು ಕಷ್ಟಸಾಧ್ಯವಾಗಿದೆ.
ಈ ಜೊತೆಗೆ ಆಸ್ಟ್ರೇಲಿಯಾ ತಂಡ ಸಹ ಆಗಸ್ಟ್ ಅಂತ್ಯದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುತ್ತಿದೆ. ಆ ಪ್ರವಾಸ ಮುಗಿಯುವದೊರಳಗೆ ಐಪಿಎಲ್ ನ ದ್ವಿತಿಯಾರ್ಧ ಮುಗಿದಿರುತ್ತದೆ. ಹಾಗಾಗಿ ಅವರು ಸಹ ಭಾಗವಹಿಸುವುದು ಬಹುತೇಖ ಕಷ್ಟ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರನ್ನು ನಂಬಿಕೊಂಡ ಐಪಿಎಲ್ ಟೀಮುಗಳು ಹೇಗೆ ಈ ಸಂಕಷ್ಟದಿಂದ ಹೊರಬರುತ್ತವೆ ಎಂಬುದನ್ನ ಕಾದು ನೋಡಬೇಕು.