ಕನ್ನಡಿಗರ ವಿಶಾಲ ಹೃದಯದಲ್ಲಿ ಮಲೆಯಾಳಂ ನಿಂದ ಬಂದು ಮಿಂಚು ಹರಿಸಿರುವ ನಟಿಯರು ಯಾರ್ಯಾರು ಗೊತ್ತೇ??

ಕನ್ನಡಿಗರ ವಿಶಾಲ ಹೃದಯದಲ್ಲಿ ಮಲೆಯಾಳಂ ನಿಂದ ಬಂದು ಮಿಂಚು ಹರಿಸಿರುವ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗವಾಗಲೀ ಕನ್ನಡಿಗರ ಹೃದಯವಾಗಲಿ ವಿಶಾಲವಾದದ್ದು, ಅದೇನೋ ಮಾತಿದೆಯಲ್ಲ ನಾವು ಕನ್ನಡಿಗರಲ್ಲವೋ ವಿಶಾಲ ಮನಸ್ಸುಳ್ಳವರು ಎಂದು. ಹಾಗೆಯೇ ನಮ್ಮ ವಿಶಾಲ ಮನಸ್ಸಿನಿಂದಲೇ ಇಂದಿಗೂ ಪರಭಾಷಿಗರು ನಮ್ಮ ರಾಜ್ಯದ ರಾಜಧಾನಿಯಲ್ಲಿ ನೆಮ್ಮದಿಯಿಂದ ಜೀವಿಸುತ್ತಿರೋದು. ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿರುವವರು ಇಲ್ಲಿ ಹೇರಳವಾಗಿ ಸಿಗುತ್ತಾರೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ನೋಡೋದಾದ್ರೆ ಹಲವಾರು ಬೇರೆ ಭಾಷೆಯ ನಟ ನಟಿಯರು ಬಂದು ಇಲ್ಲಿನ ಚಿತ್ರಗಳಲ್ಲಿ ನಟಿಸಿ ಆಮೇಲೆ ಇಲ್ಲಿಯೇ ನಟಿಸಿಕೊಂಡು ಕನ್ನಡಿಗರಂತೆ ನಗಲೆಸಿದವರೂ ಕೂಡ ಇದ್ದಾರೆ.

ಇಂದಿನ ವಿಷಯದಲ್ಲಿ ನಾವು ಮಲಯಾಳಂ ನಿಂದ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ನಟಿಯರ ಬಗ್ಗೆ ತಿಳಿಯೋಣ. ಈ ಲಿಸ್ಟ್ ನಲ್ಲಿ ಹೆಚ್ಚಿನ ನಟಿಯರು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರೊಂದಿಗಿನ ಸಿನಿಮಾದಲ್ಲಿ ಪಾದಾರ್ಪಣೆ ಮಾಡಿರೋದು ಜಾಸ್ತಿ. ಅವರು ಯಾರೆಲ್ಲಾ ಎಂದು ತಿಳಿಯೋಣ ಬನ್ನಿ.

ಮೊದಲಿಗೆ ಮೀರಾ ಜಾಸ್ಮಿನ್ ಹೌದು ಮೀರಾ ಜಾಸ್ಮಿನ್ ರವರು 2004 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಮೌರ್ಯ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರದ ದಿನಗಳಲ್ಲಿ ಅರಸು, ದೇವರು ಕೊಟ್ಟ ತಂಗಿಯಂತಹ ಐಕಾನಿಕ್ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನವನ್ನು ಗೆದ್ದರು. ಎರಡನೇ ಸ್ಥಾನದಲ್ಲಿ ಪಾರ್ವತಿ ಮೆನನ್ ಕಾಣಿಸಿಕೊಳ್ಳುತ್ತಾರೆ. ಪಾರ್ವತಿ ಮೆನನ್ ಕನ್ನಡ ಚಿತ್ರರಂಗದ ಪಾದಾರ್ಪಣೆ ಭರ್ಜರಿಯಾಗಿಯೇ ಇತ್ತು. ಕಾರಣ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪ್ರಕಾಶ್ ನಿರ್ದೇಶನದ, 1 ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿರುವ ಎವರ್ ಗ್ರೀನ್ ಹಿಟ್ ಚಿತ್ರ ಮಿಲನ. ಮಿಲನದ ಯಶಸ್ಸಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾರ್ವತಿ ಮೆನನ್ ಗಟ್ಟಿಯಾಗಿ ನೆಲೆಯೂರಿದರು. ಈಗಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಮೂರನೇ ಸ್ಥಾನದಲ್ಲಿ ಪ್ರಿಯಾಮಣಿ ಕಾಣಿಸಿಕೊಳ್ಳುತ್ತಾರೆ. ಇವರು ಬೆಂಗಳೂರಿನಲ್ಲಿ ಜನಿಸಿದವರಾದರೂ ಇವರು ಮೂಲತಃ ಮಲಯಾಳಂ ನವರೇ. ಇವರೂ ಕೂಡ ತಮ್ಮ ಮೊದಲ ಕನ್ನಡ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರೊಂದಿಗೆ ನಟಿಸಿದರು. 2009ರಲ್ಲಿ ಬಿಡುಗಡೆಯಾದ ರಾಮ್ ಚಿತ್ರದ ಯಶಸ್ಸಿನ ನಂತರ , ವಿಷ್ಣುವರ್ಧನ, ಅಂಬರೀಶ್, ಹೀಗೆ ಹತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ಇಂದಿಗೂ ಕನ್ನಡ ಮಾತ್ರವಲ್ಲದೆ ಭಾರತದಾದ್ಯಂತ ಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ನಟಿ ಭಾವನಾ ಕಾಣಿಸಿಕೊಳ್ಳುತ್ತಾರೆ. ಪುನೀತ್ ರವರ ಜಾಕಿ ಚಿತ್ರದಲ್ಲಿ ನಟಿಸಿದ ಮೇಲೆ ಭಾವನಾರವರು ಕನ್ನಡ ಚಿತ್ರರಂಗದಲ್ಲೇ ಸೆಟಲ್ ಆದ್ರು ಎಂದು ಹೇಳಬಹುದು. ಕನ್ನಡದ ಖ್ಯಾತ ನಿರ್ದೇಶಕರೊಬ್ಬರನ್ನು ಮದುವೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಖಾಯಂ ಆಗಿದ್ದಾರೆ. ಐದನೇ ಸ್ಥಾನದಲ್ಲಿ ಅನುಪಮಾ ಪರಮೇಶ್ವರನ್. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್ ನ ನಟಸಾರ್ವಭೌಮ ಚಿತ್ರದಲ್ಲಿ ಮೊದಲ ಹೀರೋಯಿನ್ ಆಗಿ ನಟಿಸಿ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅನುಪಮಾ ಪರಮೇಶ್ವರನ್ ಯಾವ ಕನ್ನಡ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ.

ಆರನೇ ಸ್ಥಾನದಲ್ಲಿ ನಟಿ ಭಾಮಾ ಕಾಣಿಸಿಕೊಳ್ಳುತ್ತಾರೆ. ಭಾಮಾ ರವರೂ ಕೂಡ ತಮ್ಮ ಚಿತ್ರರಂಗದ ಜರ್ನಿಯನ್ನು ಪ್ರಾರಂಭಿಸಿದ್ದು ಮಲಯಾಳಂ ನಲ್ಲಿಯೇ. ಅವರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ರಾಕಿಂಗ್ ಸ್ಟಾರ್ ಯಶ್ ನಟನೆಯ ಮೊದಲಸಲಾ ಚಿತ್ರದ ಮೂಲಕ. ಆನಂತರದ ದಿನಗಳಲ್ಲಿ ಭಾಮಾ ಸ್ಯಾಂಡಲ್ ವುಡ್ ನಲ್ಲಿ ಆಟೋ ರಾಜ, ಶೈಲೂ ಹೀಗೆ ಒಂದಾದ ಮೇಲೊಂದರಂತೆ ಸಿನಿಮಾ ಮಾಡಿ ಕನ್ನಡಿಗರ ಮನಗೆದ್ದರು.

ಏಳನೇ ಸ್ಥಾನದಲ್ಲಿ ನವ್ಯ ನಾಯರ್ ಕಾಣಿಸಿಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗಜ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನವ್ಯ ನಾಯರ್ ಆನಂತರ ಕನ್ನಡದ ಸ್ಟಾರ್ ನಟರಾದ ವಿಷ್ಣುವರ್ಧನ್, ಶಿವಣ್ಣ, ರವಿಚಂದ್ರನ್ ಹೀಗೆ ಎಲ್ಲರೊಂದಿಗೆ ನಟಿಸಿದ್ದಾರೆ. ಎಂಟನೇ ಸ್ಥಾನದಲ್ಲಿ ನಟಿ ಶಿಲ್ಪಾ ಇದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಚಿಪ್ಪಿ ಎಂದೇ ಖ್ಯಾತರಾಗಿರುವ ಶಿಲ್ಪ ರವರು ಶಿವಣ್ಣ ನಟನೆಯ ಜನುಮದ ಜೋಡಿ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿ ಕನ್ನಡಿಗರ ಮನವನ್ನು ಸೂರೆಗೊಂಡರು.

ಒಂಭತ್ತನೇ ಸ್ಥಾನದಲ್ಲಿ ನಯನತಾರ ಕಾಣಿಸಿಕೊಳ್ಳುತ್ತೆ. ಈಗ ಸೌತ್ ಇಂಡಿಯಾ ಫಿಲ್ಮ್ ಇಂಡಸ್ಟ್ರಿ ನಂ1 ಲೇಡಿ ಸೂಪರ್ ಸ್ಟಾರ್ ಆಗಿ ಖ್ಯಾತರಾಗಿರುವ ನಯನತಾರಾ ರವರ ಮೊದಲ ಚಿತ್ರ ಕೂಡ ಮಲಯಾಳಂ ನಲ್ಲೇ ಬಿಡುಗಡೆ ಆಗಿದ್ದು. ಆನಂತರ ಈಗ ತಮಿಳು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಯನತಾರ ಸೂಪರ್ ಸ್ಟಾರ್ ಉಪೇಂದ್ರ ರವರ ಸೂಪರ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದ ನಯನತಾರಾ ಆನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಈಗ ಡಿಬಾಸ್ ರವರ ಬಹುನಿರೀಕ್ಷಿತ ಮುಂದಿನ ಚಿತ್ರ ರಾಜ ವೀರಮದಕರಿ ನಾಯಕ ಚಿತ್ರದಲ್ಲಿ ನಯನತಾರ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಡಿದೆ.

ಇನ್ನು ಕೊನೆಯದಾಗಿ ಹೇಳೋದಾದ್ರೆ ಅಮಲಾ ಪೌಲ್ ಕಾಣಿಸಿಕೊಳ್ಳುತ್ತಾರೆ ಈ ಲಿಸ್ಟ್ ನಲ್ಲಿ. ಮಲಯಾಳಂ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಕಾಣಿಸಿಕೊಂಡಿರುವ ಅಮಲಾ ಪೌಲ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೈಯೆಸ್ಟ್ ಸದ್ದು ಮಾಡಿದ್ದ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಚಿತ್ರದ ಮೂಲಕ. ಈ ಚಿತ್ರ ಅಮಲಾ ಪೌಲ್ ರವರಿಗೂ ಸಾಕಷ್ಟು ಹೆಸರನ್ನು ತಂದುಕೊಟ್ಟಿತ್ತು . ಆನಂತರ ದಿನಗಳಲ್ಲಿ ಅಮಲಾ ಪೌಲ್ ಬೇರೆ ಭಾಷೆಯ ಚಿತ್ರಗಳಲ್ಲಿ ಬ್ಯುಸಿಯಾದರು.

ಹೀಗೆ ಮಲಯಾಳಂ ನಿಂದ ಬಂದ ನಟಿಯರಲ್ಲಿ ಕೆಲವರು ಒಂದು ಚಿತ್ರದಲ್ಲಿ ನಟಿಸಿ ಹಾಗೇ ಬಂದು ಹಾಗೇ ಹೋದರೆ. ಇನ್ನು ಕೆಲವರು ಇಲ್ಲಿ ಬಂದು ಇನ್ನೂ ನಟಿಸುತ್ತಾ ಇಲ್ಲಿಯೇ ಬದುಕು ಕಟ್ಟಿಕೊಂಡು ಕನ್ನಡಿಗರ ಮನೆಮಗಳಾಗಿ ಎಲ್ಲರ ಮನೆಮನದಲ್ಲಿ ನೆಲೆಸಿದ್ದಾರೆ. ಈ ನಟಿಯರ ಕುರಿತಂತೆ ನಿಮ್ಮ ಫೇವರಿಟ್ ನಟಿ ಯಾರೆಂದು ಕಾಮೆಂಟ್ ಮೂಲಕ ತಿಳಿಸಿ.