ಕನ್ನಡತಿಯ ನಾಯಕ ಹರ್ಷ ಅವರ ತಂಗಿ ಯಾರು ಗೊತ್ತಾ? ಅವರು ಕೂಡ ಸಖತ್ ಫೇಮಸ್ಸಂತೆ.

ನಮಸ್ಕಾರ ಸ್ನೇಹಿತರೇ ಕರ್ನಾಟಕದಲ್ಲಿ ಹುಟ್ಟಿದ್ಮೇಲೆ ಪ್ರತಿಯೊಂದು ಜೀವಕಣದಲ್ಲೂ ಸಹ ಒಂದಲ್ಲ ಒಂದು ರೀತಿಯಲ್ಲಿ ಟ್ಯಾಲೆಂಟ್ ಅನ್ನೋದು ಇದ್ದೇ ಇರುತ್ತೆ. ಕೆಲವೊಮ್ಮೆ ಟ್ಯಾಲೆಂಟ್ ಸಿಗೋ ಪ್ರತಿಕ್ರಿಯೆ ಮೇಲೆ ಚಿತ್ರರಂಗದಲ್ಲಿ ಸ್ಟಾರ್ ಆದರೆ, ಇನ್ನೂ ಕೆಲ ಪ್ರತಿಭೆಗಳು ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಆಗುತ್ತಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗುತ್ತಾರೆ.

ಆದರೆ ಒಂದಂತೂ ನಿಜ ಕನ್ನಡದಲ್ಲಿ ನಿಮ್ಮ ನಿಜವಾದ ಟ್ಯಾಲೆಂಟ್ ನ್ನು ತೋರಿಸಿದ್ದರೆ ಕನ್ನಡಿಗರು ಮಾತ್ರ ನಿಮ್ಮ ಟ್ಯಾಲೆಂಟ್ ನ್ನು ವೇಸ್ಟ್ ಆಗೋದಕ್ಕಂತೂ ಬಿಡೋದಿಲ್ಲ. ಅದು ಕನ್ನಡಿಗರ ವಿಶಾಲ ಗುಣ. ಇಂದಿನ ಈ ವಿಷಯದಲ್ಲಿ ಹೇಳೋಕೆ ಹೊರಟಿರೋದು ಕೂಡ ಕನ್ನಡ ಕಿರುತೆರೆಯಲ್ಲಿ ತಮ್ಮ ಅಭಿನಯ, ಆಟಿಟ್ಯೂಡ್ ಹಾಗೂ ಗತ್ತಿನ ಮೂಲಕ ಹಲವಾರು ಅಭಿಮಾನಿಗಳನ್ನು ಹೊಂದಿರೋ ನಟನೊಬ್ಬರ ಬಗ್ಗೆ ಹೇಳಲಿದ್ದೇವೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರೋ ಕನ್ನಡತಿ ಧಾರವಾಹಿ ಕುರಿತಂತೆ ಕೇಳಿರುತ್ತೀರಾ. ಈ ಲಾಕ್ ಡೌನ್ ಕಾಲದಲ್ಲಿ ಸೀರಿಯಲ್ ಗಳೇ ತಾನೇ ವೀಕ್ಷಕರ ಫೇವರಿಟ್ ಎಂಟರ್ಟೈನ್ಮೆಂಟ್. ಈ ಎಂಟರ್ಟೈನ್ಮೆಂಟ್ ನಲಿ ಕನ್ನಡತಿ ಧಾರವಾಹಿ ಕೂಡ ಹಲವರ ಫೇವರಿಟ್. ಟಾಪ್ ಟಿಆರ್.ಪಿ ಬರೋ ಧಾರವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಕನ್ನಡತಿಯಂತಹ ಧಾರವಾಹಿಗಳನ್ನು ನೋಡಿದ್ರೆ ಕಲರ್ಸ್ ಕನ್ನಡದ ಕ್ವಾಲಿಟಿ ಧಾರವಾಹಿ ಮೇಕಿಂಗ್ ನ ಕುರಿತಂತೆ ಹೆಮ್ಮೆ ಅನಿಸುತ್ತೆ.

ಯಾವುದೇ ಚಿತ್ರಕ್ಕೂ ಕಮ್ಮಿಯಿಲ್ಲದಂತೆ ಅದನ್ನು ಚಿತ್ರೀಕರಿಸುವುದರಿಂದಲೇ ಕನ್ನಡ ಚಿತ್ರರಂಗದ ಕಿರುತೆರೆ ನೆಕ್ಸ್ಟ್ ಲೆವೆಲ್ ಗೆ ಹೋಡಿರೋದು. ಈಗ ವಿಷಯಕ್ಕೆ ಬರೋಣ. ಕನ್ನಡತಿ ಧಾರವಾಹಿಯಲ್ಲಿ ನಾಯಕನಟನಾಗಿ ನಟಿಸುತ್ತಿರುವ ಕಿರಣ್ ರಾಜ್ ರವರ ಬಗ್ಗೆ ಗೊತ್ತೇ ಇರುತ್ತೆ ಎಲ್ಲರಿಗೂ. ಕನ್ನಡತಿ ಧಾರವಾಹಿಯಲ್ಲಿ ಹರ್ಷ ಎಂಬ ಕೋಟ್ಯಾಧಿಪತಿ ಆಗಿ ನಟಿಸುವ ಇವರ ಆಕ್ಟಿಂಗ್ ಸ್ಟೈಲ್ ಯಾವ ಮಾಸ್ ಹೀರೋ ಸ್ಟೈಲ್ ಗೂ ಕಮ್ಮಿಯಿಲ್ಲದಂತೆ ಇದೆ.

ಇವರಿಗೆ ಜೋಡಿಯಾಗಿ ರಂಜನಿ ರಾಘವನ್ ಕೂಡ ನಟಿಸಿದ್ದಾರೆ. ಪ್ರತಿದಿನದ ಪ್ರತಿ ಸಂಚಿಕೆಯಲ್ಲಿ ಸಹ ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಹೊತ್ತು ತರುತ್ತಿದೆ ಈ ಧಾರವಾಹಿ. ಇನ್ನು ಕೇವಲ ಧಾರವಾಹಿಗಳಲ್ಲಿ ಮಾತ್ರ ಹೀರೋ ಆಗಿರದೇ ಕಿರಣ್ ರಾಜ್ ಈ ಲಾಕ್ ಡೌನ್ ನಲ್ಲಿ ಕೂಡ ತಮ್ಮ ಕಿರಣ್ ರಾಜ್ ಟೃಸ್ಟ್ ನ ಮೂಲಕ ಹಸಿದ ಜೀವಗಳ ಹಸಿವನ್ನು ನೀಗೋ ಪುಣ್ಯದ ಕೆಲಸ ಮಾಡಿದ್ದಾರೆ. ಎಷ್ಟಾದರೂ ದೇಶ ಕಾಯೋ ಸೈನಿಕನ ಮಗನಲ್ಲವೇ.

ಇನ್ನು ಕಿರಣ್ ರಾಜ್ ರವರ ಬಗ್ಗೆ ಹೇಳೋದಾದ್ರೆ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡೋ ಕೆಲವು ಸ್ಪೂರ್ತಿದಾಯಕ ವೀಡಿಯೋಗಳು ಅವರನ್ನು ಇನ್ನಷ್ಟು ಯುವ ಮನಸ್ಸು ಗಳ ನೆಚ್ಚಿನ ನಾಯಕನನ್ನಾಗಿ ಮಾಡಿದೆ. ಇನ್ನು ಕಿರಣ್ ರಾಜ್ ರವರ ತಂಗಿ ಕೂಡ ಫೇಮಸ್ಸೇ. ಕಿರಣ್ ರಾಜ್ ರವರ ತಂಗಿಯ ಹೆಸರು ಪೂಜಾ ಎಂದು.

ಈಕೆ ಅದ್ಭುತ ಗಾಯಕಿ. ಈಗಾಗಲೇ ಹಿಂದಿಯ ಹಲವಾರು ಚಿತ್ರಗಳಲ್ಲಿ ತಮ್ಮ ಕಂಠದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ದೆಹಲಿ-ಮುಂಬೈ ಹೀಗೆ ನಾನಾ ಕಡೆಗಳಲ್ಲಿ ಹೋಗಿ ಹಾಡಿನ ರೆಕಾರ್ಡಿಂಗ್ ನಲ್ಲಿ ಭಾಗವಹಿಸುತ್ತಾರೆ. ಇನ್ನು ಇವರ ಗಾಯನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹಲವಾರು ಅಭಿಮಾನಿಗಳಿದ್ದಾರೆ. ಅಣ್ಣ ನಟನಾಗಿ ತಂಗಿ ಗಾಯಕಿಯಾಗಿ ಸಾಧನೆ ಮಾಡುತ್ತಿದ್ದಾರೆ.ಇವರಿಬ್ಬರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸೋಣ. ಇವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.

Post Author: Ravi Yadav