ವಿರಾಟ್ ಕೊಹ್ಲಿ ಅವರು ಮದುವೆಗೂ ಮುನ್ನ ಈ ಖ್ಯಾತ ಕ್ರಿಕೆಟಿಗನ ಹೆಂಡತಿಯೊಂದಿಗೆ ಡೇಟ್ ಹೋಗಿದ್ದರಂತೆ! ಯಾರು ಗೊತ್ತೇ??
ವಿರಾಟ್ ಕೊಹ್ಲಿ ಅವರು ಮದುವೆಗೂ ಮುನ್ನ ಈ ಖ್ಯಾತ ಕ್ರಿಕೆಟಿಗನ ಹೆಂಡತಿಯೊಂದಿಗೆ ಡೇಟ್ ಹೋಗಿದ್ದರಂತೆ! ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ ಸಾಗಾಟಗಾರರು ಹಲವಾರು ವಿಶ್ವ ದಾಖಲೆಗಳನ್ನು ಕೂಡ ಮುರಿದಿದ್ದಾರೆ. ಇಂತಹ ಆಟಗಾರರು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇನ್ನು ಇದೀಗ ಭಾರತ ಕ್ರಿಕೆಟ್ ತಂಡದ ಮೂರು ರೀತಿಯ ಪಂದ್ಯಗಳ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಆಟಗಾರ ವಿರಾಟ್ ಕೊಹ್ಲಿ. ಹೌದು ಇವರು ಇದೀಗ ಭಾರತ ಕ್ರಿಕೆಟ್ ತಂಡದ ಎರಡನೇ ಸಚಿನ್ ತೆಂಡೂಲ್ಕರ್ ಎಂದರೂ ತಪ್ಪಾಗುವುದಿಲ್ಲ.
ಏಕೆಂದರೆ ಇವರು ಕೂಡ ಸಚಿನ್ ಅವರಂತೆ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸಚಿನ್ ಅವರ ಶತಕಗಳ ಶತಕ ದಾಖಲೆಯನ್ನು ಕೂಡ ಇವರು ಮುರಿಯಬಹುದು ಎಂಬ ವಿಶ್ವಾಸ ಇದೀಗಾಗಲೇ ಹಲವು ಕ್ರೀಡಾ ಪ್ರಿಯರಲ್ಲಿ ಮೂಡಿದೆ. ಹೌದು ಸಚಿನ್ ತೆಂಡೂಲ್ಕರ್ ಅವರು ಬಾರಿಸಿದ ನೂರು ಶತಕಗಳನ್ನು ವಿರಾಟ್ ಕೊಹ್ಲಿ ಮುರಿಯುತ್ತಾರೆ ಎಂಬ ನಂಬಿಕೆ ಹಲವರಲ್ಲಿ ಇದೆ. ಅಂತಹ ಆಟಗಾರ ಭಾರತ ಕ್ರಿಕೆಟ್ ತಂಡದ ನಾಯಕರಾಗಿರುವ ಮೆಚ್ಚುವಂತದ್ದು.
ಇನ್ನು ವಿರಾಟ್ ಕೊಹ್ಲಿ ಅವರ ಹೆಸರು ಹಲವು ನಟಿಯರೊಂದಿಗೆ ಕೇಳಿಬಂದಿತ್ತು. ಹೌದು ವಿರಾಟ್ ಕೊಹ್ಲಿ ಅವರು ಆ ನಟಿಯೊಂದಿಗೆ, ಈ ನಟಿಯೊಂದಿಗೆ ಡೇಟ್ ನಲ್ಲಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಹೌದು ನೋಡಲು ತುಂಬಾ ಸುಂದರವಾಗಿರುವ ಹಾಗೂ ಆಕರ್ಷಕವಾಗಿರುವ ವಿರಾಟ್ ಕೊಹ್ಲಿ ಅವರು ಸಾಕಷ್ಟು ಜನರೊಂದಿಗೆ ಡೇಟ್ ಹೋಗಿದ್ದುಂಟು.
ಇನ್ನು ಇವರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ್ತಿ ಸಾರಾ ಟೈಲರ್ ಎಂಬುವವರು ಎಲ್ಲರ ಮುಂದೆ ಪ್ರಪೋಸ ಕೂಡ ಮಾಡಿದ್ದರು. ಇದೆಲ್ಲದರ ಮಧ್ಯೆ ವಿರಾಟ್ ಕೊಹ್ಲಿ ಅವರು ಖ್ಯಾತ ಕ್ರಿಕೆಟ್ ನ ಪತ್ನಿಯೊಂದಿಗೆ ಡೇಟಿಂಗ್ ಹೋಗಿರುವುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಹಾಗಾದರೆ ಮತ್ತೊಬ್ಬ ಆಟಗಾರ ಯಾರು ಹಾಗೂ ಆತನ ಪತ್ನಿ ಯಾರು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ.
ಹೌದು ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ತಂಡದ ಸರ್ವ ಶ್ರೇಷ್ಠ ಆಟಗಾರನ ಹೆಂಡತಿಯೊಂದಿಗೆ ಒಂದು ಬಾರಿ ಡೇಟಿಂಗ್ ಹೋಗಿದ್ದರು. ಆದರೆ ಆ ಸಮಯದಲ್ಲಿ ಆಟಗಾರನಿಗೆ ಹಾಗೂ ಮಹಿಳೆಗೂ ಪರಿಚಯವಿರಲಿಲ್ಲ. ಇನ್ನು ಆ ಕ್ರಿಕೆಟ್ ಆಟಗಾರ ಮತ್ತ್ಯಾರು ಅಲ್ಲ ರೋಹಿತ್ ಶರ್ಮ. ಹೌದು ವಿರಾಟ್ ಕೊಹ್ಲಿ ಯೊಂದಿಗೆ ಡೇಟಿಂಗ್ ಹೋಗಿದ್ದು ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ. ಆದರೆ ಆ ಸಮಯದಲ್ಲಿ ರೋಹಿತ್ ಅವರಿಗೆ ರಿತಿಕ ಪರಿಚಯವಿರಲಿಲ್ಲ.
ಹೌದು 2013ರಲ್ಲಿ ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆ ಪ್ರವಾಸ ಮುಗಿಸಿ ಮರಳಿ ಬಂದಾಗ ವಿರಾಟ್ ಕೊಹ್ಲಿ ಅವರು ರಿತಿಕ ಅವರೊಂದಿಗೆ ಒಂದು ಮೂವಿ ಡೇಟಿಗೆ ಹೋಗಿದ್ದರಂತೆ. ಈ ವಿಷಯ ಅದೆಷ್ಟು ಜನರಿಗೆ ತಿಳಿದಿಲ್ಲ. ಇನ್ನು ರಿತಿಕಾ ಅವರು ಮೊದಮೊದಲು ಯುವರಾಜ್ ಸಿಂಗ್ ಅವರ ಮ್ಯಾನೇಜರ್ ಆಗಿದ್ದರಂತೆ. ನಂತರ ಅವರು ರೋಹಿತ್ ಶರ್ಮಾ ಅವರ ಮ್ಯಾನೇಜರ್ ಆದರು. ಆ ಸಂದರ್ಭದಲ್ಲಿ ರೋಹಿತ್ ಮತ್ತು ರೀತಿಕ ಅವರ ಮಧ್ಯೆ ಪ್ರೇಮಾಂಕುರವಾಗಿ ಇಬ್ಬರು ಮದುವೆಯಾಗಿದ್ದಾರೆ.