ನೀವು ಹಿಂದಿನ ಜನ್ಮದಲ್ಲಿ ಏನು ಆಗಿದ್ದೀರಿ ಎಂದು ನಿಮ್ಮ ಈ ಸ್ವಭಾವಗಳಿಂದ ತಿಳಿದು ಕೊಳ್ಳಬಹುದಾಗಿದೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹಿಂದಿನ ಜನ್ಮದಲ್ಲಿ ತಾನು ಏನಾಗಿದ್ದೆ. ಹೇಗೆ ಸತ್ತೆ ಹೀಗೆ ಹಲವಾರು ಕುತೂಹಲಕಾರಿ ಆಸಕ್ತಿಗಳು ಇದ್ದೇ ಇರುತ್ತವೆ. ಕೆಲವರು ಫೇಸ್ಬುಕ್ ನಲ್ಲಿ ಕೆಲ ಆಪ್ ಗಳ ಮೂಲಕ ಈ ತರಹದ ವಿಷಯಗಳನ್ನು ಕುತೂಹಲದಿಂದ ನೋಡೋದನ್ನೂ ಕೂಡ ನೀವು ನೋಡಿರುತ್ತೀರಾ ಅಥವಾ ನೀವೂ ಕೂಡ ಆ ಆಪ್ ಗಳನ್ನು ಟ್ರೈ ಮಾಡಿರುತ್ತೀರಾ.

ನಿಮ್ಮ ಈ ಹಿಂದಿನ ಜೀವನದಲ್ಲಿ ಏನಾಗಿದ್ದೆ, ಯಾರು ನಾನು ಹೀಗೆ ಹುಡುಕುತ್ತಾ ಹೊರಟರೆ ಸಿಗುವ ಅಸಂಖ್ಯಾತ ಪ್ರಶ್ನೆಗಳಿಗೆ ಇಲ್ಲಿ ನಿಮಗೆ ಸಿಗಲಿದೆ ಪರಿಪೂರ್ಣ ಹಾಗೂ ಸಮಾಧಾನಕರ ಉತ್ತರ. ವ್ಯಕ್ತಿ ಒಂದು ವೇಳೆ ಈ ಜನ್ಮದಲ್ಲಿ ಹೆದರಿಕೆ ಪುಕ್ಕಲ, ವಿಶ್ವಾಸ ಘಾತುಕ , ಕಾ-ಮ ವಾಂಛೆ ಅತಿಯಾಗಿ ಕೂಡಿದ್ದರೆ ಆತ ಖಂಡಿತವಾಗಿಯೂ ಹಿಂದಿನ ಜನ್ಮದಲ್ಲಿ ಕೋತಿಯಾಗಿರುತ್ತಾನೆ. ನಾವೇ ಕೆಲವೊಮ್ಮೆ ಹೇಳುತ್ತಿರುತ್ತೇವೆ ಕೋತಿಯ ಹಾಗೆ ಆಡಬೇಡ ಎಂದು ಹೀಗೆ ಈಗಿನ ಜನ್ಮದ ಗುಘ ವಿಶೇಷಗಳ ಮೂಲಕ ನಾವು ಹಿಂದಿನ ಜನ್ಮದ ತಮ್ಮ ಜನ್ಮರಹಸ್ಯವನ್ನು ತಿಳಿದುಕೊಳ್ಳಬಹುದು.

ಒಂದು ವ್ಯಕ್ತಿ ಕುಡಿದು ತಿನ್ನಲು ಸದಾ ಕಾಲ ಇಷ್ಟಪಡುತ್ತಿದ್ದರೆ , ತನ್ನಲ್ಲೇ ತೃಪ್ತನಾಗಿ ಸಂತೋಷವಾಗಿದ್ದರೆ, ನಡತೆಯಲ್ಲಿ ಮಂದಬುದ್ಧಿಯಾಗಿ ನಿಧಾನಿಯಾಗಿದ್ದಾರ ಎ ಆತ ಕಳೆದ ಜನ್ಮದಲ್ಲಿ ಕತ್ತೆಯಾಗಿದ್ದ ಎಂಬುದನ್ನು ತೋರಿಸುತ್ತದೆ. ಕತ್ತೆಯ ನಿಧಾನ ಪ್ರವೃತ್ತಿಯನ್ನು ಈ ಜನ್ಮದಲ್ಲಿ ಮಾನವನಾಗಿ ಮುಂದುವರೆಸುತ್ತಿರುವನ್ನು ನೋಡಿ ಲೆಕ್ಕ ಹಾಕಬಹುದು.

ಇನ್ನು ಈ ಜನ್ಮದಲ್ಲಿ ವ್ಯಕ್ತಿ ತುಂಬಾ ತಾಳ್ಮೆ ಹಾಗೂ ಆಲೋಚನೆ , ಬುದ್ದಿವಂತಿಕೆಗೆ ಹೆಸರಾಗಿದ್ದರೆ ಅವರು ಹಿಂದಿನ ಜನ್ಮದಲ್ಲಿ ನರಿಯಾಗಿರುತ್ತಾರೆ. ಕ್ಷಿಪ್ರ ಬುದ್ಧಿವಂತಿಕೆ ತೋರಿಸಲು ನರಿ ಸದಾ ಮುಂದು ಇರೋದ್ರಿಂದ ಬುದ್ಧಿವಂತರನ್ನು ಹಿಂದಿನ ಜನ್ಮದಲ್ಲಿ ನರಿಯಾಗಿ ಜನ್ಮ ತಾಳಿರುತ್ತಾರೆಂದು ಅನ್ನಬಹುದು. ಇನ್ನು ವ್ಯಕ್ತಿ ಬೇರೆಯವರನ್ನು ಸದಾ ದ್ವೇ’ಷಿಸುತ್ತಾನೆ ಎಂದರೆ ಆತ ಖಂಡಿತ ವಾಗಿಯೂ ಹಿಂದಿನ ಜನ್ಮದಲ್ಲಿ ಕರಡಿಯಾಗಿರುತ್ತಾನೆ ಎಂದು ನಂಬಿಕೆ. ಏಕೆಂದರೆ ಕರಡಿಗಳಿಗೆ ಮಾನವನೆಂದರೆ ಸುತಾರಾಂ ಇಷ್ಟವಿರೋದಿಲ್ಲ. ಇನ್ನು ವ್ಯಕ್ತಿ ಬಹಳ ಅಹಂಕಾರದಿಂದ ಹಾಗೂ ಮದದಿಂದ ಮೆರೆಯುತ್ತಿದ್ದರೆ ಆತ ಈ ಹಿಂದಿನ ಜನ್ಮದಲ್ಲಿ ಕುದುರೆಯಾಗಿರುತ್ತಾನೆ. ಇನ್ನು ವ್ಯಕ್ತಿ ಉದಾಸೀನತೆಯಿಂದ, ಸ್ವಚ್ಛವಾಗಿರದೆ ಇದ್ದರೆ ಆತ ಹಿಂದಿನ ಜನ್ಮದಲ್ಲಿ ಹಂದಿಯಾಗಿರುತ್ತಾನೆ.

ಒಂದು ವೇಳೆ ವ್ಯಕ್ತಿ ಪರೋಪಕಾರಿ ಸ್ವಭಾವ ಹಾಗೂ ಎಲ್ಲರನ್ನೂ ನಂಬುವಂತೆ ಇದ್ದರೆ ಆತ ಹಿಂದಿನ ಜನ್ಮದಲ್ಲಿ ಕುರಿಯಾಗಿರುತ್ತಾನೆ. ಇನ್ನು ಬುದ್ಧಿವಂತ, ಉದಾರ, ವಿನಯಶೀಲ, ಶಾಂತ ಮತ್ತು ದೃಢ ನಿಶ್ಚಯದ ವ್ಯಕ್ತಿ ಹಿಂದಿನ ಜೀವನದಲ್ಲಿ ಸಿಂಹವಾಗಿರಬಹುದು. ಅದೇ ಒಬ್ಬ ವ್ಯಕ್ತಿ ಬೂಟಾಟಿಕೆಯ ಜೀವನ ಹಾಗೂ ಜನರಿಗೆ ಮೋಸ ಮಾಡುತ್ತಿದ್ದರೆ ಆತ ಹಿಂದಿನ ಜನ್ಮದಲ್ಲಿ ಬೆಕ್ಕಾಗಿರಬಹುದು. ಒಂದು ವೇಳೆ ವ್ಯಕ್ತಿ ಧೈರ್ಯಶಾಲಿಯಾಗಿದ್ದರೆ, ಹಾಗೂ ತನ್ನ ನಿಷ್ಠೆಯಲ್ಲಿ ಇದ್ದರೆ ಹಿಂದಿನ ಜನ್ಮದಲ್ಲಿ ಆತ ನಾಯಿಯಾಗಿರುತ್ತಾನೆ. ಸದಾ ವಟಗುಟ್ಟುವ ಹಾಗೂ ಬೇರೆಯವರನ್ನು ಕೆರಳಿಸುವ ಬುದ್ದಿ ಹೊಂದಿದ್ದರೆ ಆತ ಹಿಂದಿನ ಜನ್ಮದಲ್ಲಿ ಗಿಳಿಯಾಗಿರುತ್ತಾನೆ.

ಇನ್ನು ತೀಕ್ಷ್ಣ ದೃಷ್ಟಿ , ಅಗಾದವಾದ ನೋಟವಿದ್ದರೆ ಇವರು ಹಿಂದಿನ ಜನ್ಮದಲ್ಲಿ ಹದ್ದಾಗಿರುತ್ತಾರೆ . ಹೀಗೇ ಈಗಿರುವ ಜನರ ಬುದ್ಧಿ ಹಾಗೂ ಗುಣನಡತೆಯ ಅನುಸಾರವಾಗಿ ಅವರು ಹಿಂದಿನ ಜನ್ಮದಲ್ಲಿ ಏನಾಗಿದ್ದರೆಂದು ತಿಳಿಯಬಹುದು. ಈ ಹಿಂದಿನ ಜನ್ಮದಲ್ಲಿ ತಾವೇನಾಗಿದ್ದವೆನ್ನುವುದು ಎಲ್ಲರಿಗೂ ಕುತೂಹಲ ಮೂಡಿಸುವಂತದ್ದೆ ಆದರೆ ಈ ಜನ್ಮದಲ್ಲಿ ನಾವು ಮಾನವರಾಗಿ ಜನಿಸಿದ್ದೇವೆ. ಎಲ್ಲರೊಂದಿಗೆ ಮಾನವೀಯ ದೃಷ್ಟಿಯಲ್ಲಿ ನಡೆದುಕೊಂಡು ಉತ್ತಮ ಮಾದರಿಯಾಗಿ ಈ ಸಮಾಜದಲ್ಲಿ ನಡೆದುಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ಯಾಕೆಂದರೆ ಪುರಾಣಗಳ ಪ್ರಕಾರ ಮಾನವ ಜನ್ಮ ದೊರಕುವುದು ಪುಣ್ಯದ ಫಲದಿಂದ ಹಾಗಾಗಿ ಈ ಪುಣ್ಯ ಫಲದಿಂದ ದೊರಕಿರುವ ಮಾನವ ಜನ್ಮವನ್ನು ಸಫಲ ಆಗುವ ರೀತಿಯಿಂದ ಬಾಳಿ ಬದುಕೋಣ. ಈ ಮೇಲಿನ ಮಾಹಿತಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯ ನಮಗೂ ತಲಃಪುವಂತೆ ಮಾಡಿ.

Post Author: Ravi Yadav