ಕೊನೆ ಕ್ಷಣದಲ್ಲಿ ಮತ್ತೊಂದು ಅಧಿಕೃತ ಘೋಷಣೆ ಮಾಡಿದ ಎಬಿಡಿ, ಅಭಿಮಾನಿಗೆ ಹಬ್ಬ. ಏನು ಗೊತ್ತಾ??
ಕೊನೆ ಕ್ಷಣದಲ್ಲಿ ಮತ್ತೊಂದು ಅಧಿಕೃತ ಘೋಷಣೆ ಮಾಡಿದ ಎಬಿಡಿ, ಅಭಿಮಾನಿಗೆ ಹಬ್ಬ. ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಎಬಿಡಿ ವಿಲಿಯರ್ಸ್ ಕ್ರಿಕೆಟ್ ಲೋಕಪ ಅಪರೂಪದ ತಾರೆ. ಸೌತ್ ಆಫ್ರಿಕಾದಲ್ಲಿ ಹುಟ್ಟಿ ಬೆಳೆದು ನ್ಯಾಷನಲ್ ತಂಡಕ್ಕಾಗಿ ಆಡಿದರೂ , ಅವರು ಅತೀ ಹೆಚ್ಚು ಪ್ರೀತಿ ಕಂಡಿದ್ದು ಮಾತ್ರ ಭಾರತದಲ್ಲಿ . ಅದರಲ್ಲೂ ವಿಶೇಷವಾಗಿ ನಮ್ಮ ಕರ್ನಾಟಕದಲ್ಲಿ ಅಂದರೆ ತಪ್ಪಾಗುವುದಿಲ್ಲ. ಎಬಿಡಿ ಚಿಕ್ಕ ವಯಸ್ಸಿನಿಂದಲೂ ಪಕ್ಕಾ ಆಥ್ಲೀಟ್ ಸ್ವಿಮ್ಮಿಂಗ್ , ಬೇಸ್ ಬಾಲ್ ಹೀಗೆ ಹಲವಾರು ಕ್ರೀಡೆಯಲ್ಲಿ ತಂಡವನ್ನು ಪ್ರತಿನಿಧಿಸಿದ್ದ ಅನುಭವವೂ ಅವರಿಗಿದೆ.
ಕೆಲವು ವರ್ಷಗಳ ಹಿಂದೆಯಷ್ಟೇ ಎಬಿಡಿ ಸೌತ್ ಆಫ್ರಿಕಾದ ರಾಷ್ಟ್ರೀಯ ತಂಡದಿಂದ ನಿವೃತ್ತಿ ಪಡೆದು ಕುಟುಂಬದೊಂದಿಗೆ ಆರಾಮವಾಗಿ ಕಾಲಕಳೆಯುತ್ತಿದ್ದರು. ಎಬಿಡಿ ನಿವೃತ್ತಿ ಪಡೆಯಲು ಯಾವುದೇ ಕಾರಣಗಳು ಅಭಿಮಾನಿಗಳಿಗೆ ತೃಪ್ತಿಯಾಗಿರಲಿಲ್ಲ ಯಾಕೆಂದರೆ ಎಬಿಡಿ ಯವರು ನಿವೃತ್ತಿ ಹೊಂದುವ ಹೊತ್ತಿಗೆ ಅವರು ಬ್ಯಾಟಿಂಗ್ ನಲ್ಲಿ ಫುಲ್ ಫಾರ್ಮ್ ನಲ್ಲೇ ಇದ್ದರು ಹಾಗೂ ಅದು ಅವರ ಪೀಕ್ ಟೈಮ್ ಕೂಡ ಆಗಿತ್ತು . ಆದರೂ ಕೂಡ ನಿವೃತ್ತಿ ಪಡೆದುಕೊಂಡಿದ್ದು ಎಲ್ಲ ಅಭಿಮಾನಿಗಳಿಗೆ ನಿರಾಸೆಗೊಳಿಸಿತ್ತು. ಆದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಐಪಿಎಲ್ ಅಭಿಮಾನಿಗಳಿಗೆ ಎಬಿಡಿ ಸಿಹಿ ಸುದ್ದಿಯನ್ನು ಇಟ್ಟುಕೊಂಡಿದ್ದರು.
ಅದೇನೆಂದರೆ ರಾಷ್ಟ್ರೀಯ ತಂಡಕ್ಕೆ ರಾಜೀನಾಮೆ ಕೊಟ್ಟರೂ ಎಬಿಡಿ ಐಪಿಎಲ್ ನಲ್ಲಿ ಆರ್.ಸಿ.ಬಿ ಪರವಾಗಿ ಬ್ಯಾಟ್ ಬೀಸೋದಾಗಿ ಭರವಸೆ ನೀಡಿದ್ದರು. ಭರವಸೆ ಪ್ರಕಾರ ಐಪಿಎಲ್ ನಲ್ಲಿ ಪ್ರತಿ ಬಾರಿ ಎಬಿಡಿ ಬಂದಾಗ ಸ್ಕೋರ್ ಬೋರ್ಡ್ ನಲ್ಲಿ ರನ್ ಮಳೆ ಹರಿಯುತ್ತಿತ್ತು. ಎಬಿಡಿ ಐಪಿಎಲ್ ನ ಸೂಪರ್ ಮ್ಯಾನ್ ಆಗಿ ಪರಿಚಿತರಾಗಿ ಎಲ್ಲರ ಮನಗೆದ್ದರು. ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೈವವಾದರು. ಆದರೆ ಇತ್ತೀಚೆಗೆ ಸೌತ್ ಆಫ್ರಿಕಾದ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ಮಾರ್ಕ್ ಬೌಚರ್ ಎಬಿಡಿ ಇಚ್ಛೆ ಪಟ್ಟಲ್ಲಿ ತಂಡಕ್ಕೆ ವಾಪಾಸ್ಸಾಗಬಹುದು,
ನಿಮ್ಮ ಫಾರ್ಮ್ ಹಾಗೂ ಬ್ಯಾಟಿಂಗ್ ಬಲ ತಂಡಕ್ಕೆ ಅಗತ್ಯ ಇದೆ ಎಂದು ಹೇಳಿದ್ದರು. ಈ ಮಾತನ್ನು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನ ಮುಖ್ಯಸ್ಥ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಗ್ರೇಮ್ ಸ್ಮಿತ್ ಶಿಫಾರಸ್ಸು ಮಾಡಿ , ಎಬಿಡಿ ಬರಲು ಸಿದ್ಧವಾಗಿದ್ದರೆ ಕ್ರಿಕೆಟ್ ಮಂಡಳಿ ಅವರನ್ನು ತುಂಬು ಮನದಿಂದ ಸ್ವಾಗತಿಸಲು ಸಜ್ಜಾಗಿದೆ ಎಂದು ಕೂಡ ಹೇಳಿದ್ದರು. ಮೊದಲಿಗೆ ಎಬಿಡಿ ಒಪ್ಪಿದ್ದರು , ನಂತರದ ದಿನಗಳಲ್ಲಿ ಎಬಿಡಿ ” ನಾನು ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಆಡಲಾರೆ. ಯಾಕೆಂದರೆ ನನ್ನ ವಾಪಾಸು ಬರುವಿಕೆಯಿಂದಾಗಿ, ಯಾವುದೋ ಒಬ್ಬ ಹೊಸ ಯುವ ಆಟಗಾರನ ಸ್ಥಾನ ನಾನು ಕಸಿದು ಕೊಂಡಂತಾಗುತ್ತದೆ . ಹೀಗಾಗಿ ನಾನು ಮರಳಿ ವಾಪಸ್ಸು ಬರಲಾಗುವುದಿಲ್ಲ ಎಂದಿದ್ದಾರೆ.
ಅಲ್ಲದೇ ತಾವು ಇನ್ನು 2 ವರ್ಷಗಳವರೆಗೆ ಕ್ರಿಕೆಟ್ ಖಂಡಿತವಾಗಿಯೂ ಆಡುತ್ತೇನೆ . ಆದ್ದರಿಂದ ಈ ಸೆಪ್ಟೆಂಬರ್ 15 ರಿಂದ ಪ್ರಾರಂಭಗೊಳ್ಳುವ ಐಪಿಎಲ್ 2021 ಪಂದ್ಯಗಳು ನನ್ನ ಕೊನೆಯ ಐಪಿಎಲ್ ಅಲ್ಲ. ನಾನು ಇನ್ನೂ ಐಪಿಎಲ್ ಮ್ಯಾಚ್ ಆಡಲು ಇಷ್ಟಪಡುತ್ತೇನೆ ಎಂದರು. ಅಲ್ಲದೇ ನಾನು ಐಪಿಎಲ್ ಆಡೋವರೆಗೂ ಕೇವಲ ಆರ್.ಸಿ.ಬಿ. ತಂಡಕ್ಕಾಗಿ ಆಡುತ್ತೇನೆ . ಬೇರೆ ಯಾವ ತಂಡದಲ್ಲಿ ಕೂಡ ನಾನು ಆಡಲಾರೆ . ಐಪಿಎಲ್ ಎಂದರೆ ಕೇವಲ ಆರ್.ಸಿ.ಬಿ. ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಈಗಾಗಲೇ ಬೆಂಗಳೂರು ಅಭಿಮಾನಿಗಳಲ್ಲಿ ಸಂತೋಷ ಮನೆಮಾಡಿದ್ದು , ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಎಬಿಡಿ ಇರೋ ತನಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಂತ ಕಾಲರ್ ಎತ್ಕೊಂಡು ಓಡಾಡ್ಬೋದು ಅನ್ನೋದ್ರಲ್ಲಿ ಡೌಟೇ ಇಲ್ಲ. ಇಷ್ಟೊಂದು ವರ್ಷ ಕ್ರಿಕೆಟ್ ನಲ್ಲಿ ಸೇವೆ ಸಲ್ಲಿಸಿದರೂ ಸಹ ಎಬಿಡಿ ಒಮ್ಮೆ ಕೂಡ ಐಪಿಎಲ್ ಪಂದ್ಯಾವಳಿಯಲ್ಲಿ ಸುಸ್ತಾದಂತೆ ಆಗಲೀ , ಅಸಹಾಯಕತೆ ತೋರಿದ್ದಾಗಲಿ ಇಲ್ಲ. ಆವರು ಪ್ರತಿ ಬಾರಿ ಕ್ರೀಸ್ ಗೆ ಬಂದಾಗ ಬೌಲರ್ ಗಳ ಬೆಂಡೆತ್ತಿದಂತೂ ಸಹಜ. ಎಬಿಡಿಯವರು ಇನ್ನೂ ಹಲವಾರು ವರ್ಷಗಳ ಕಾಲ ಹೀಗೆ ಐಪಿಎಲ್ ಅಂಗಳದಲ್ಲಿ ನಮ್ಮನ್ನು ರಂಜಿಸಲೆಂದು ಆಶಿಸೋಣ.