ಲೈಫ್ ನಲ್ಲಿಯೇ ತಿಂದಿರದ ರುಚಿಯ ವೆಜಿಟೇಬಲ್ ಕುರ್ಮ ಮಾಡುವುದು ಹೇಗೆ ಗೊತ್ತೇ??
ಲೈಫ್ ನಲ್ಲಿಯೇ ತಿಂದಿರದ ರುಚಿಯ ವೆಜಿಟೇಬಲ್ ಕುರ್ಮ ಮಾಡುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇಂದು ನಾವು ರೆಸ್ಟೋರೆಂಟ್ ಶೈಲಿಯಲ್ಲಿ ವೆಜಿಟೇಬಲ್ ಕುರ್ಮ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ರೆಸ್ಟೋರೆಂಟ್ ಶೈಲಿಯಲ್ಲಿ ವೆಜಿಟೇಬಲ್ ಕುರ್ಮ ಮಾಡಲು ಬೇಕಾಗುವ ಸಾಮಗ್ರಿಗಳು: 5 – 6 ಹುರುಳಿಕಾಯಿ, 1 ಕ್ಯಾರೆಟ್, 1 ನವಿಲುಕೋಸು, 1 ಕ್ಯಾಪ್ಸಿಕಂ, ಸ್ವಲ್ಪ ಬಟಾಣಿ, 1 ಆಲೂಗೆಡ್ಡೆ, 1 ಚಮಚ ಧನಿಯಾ ಪುಡಿ, ಕಾಲು ಚಮಚ ಅರಿಶಿನ ಪುಡಿ, ಕಾಲು ಚಮಚ ಜೀರಿಗೆ, ಅರ್ಧ ಚಮಚ ಅಚ್ಚ ಕಾರದ ಪುಡಿ, ಅರ್ಧ ಚಮಚ ಗರಂ ಮಸಾಲ, 1 ಮರಾಠಿ ಮೊಗ್ಗು, 1 ಚಕ್ಕೆ, 1 ಚಮಚ ಕಸೂರಿ ಮೇತಿ, 1 ಚಮಚ ಬೆಣ್ಣೆ, 10 – 12 ಎಸಳು ಬೆಳ್ಳುಳ್ಳಿ, 2 ಇಂಚು ಶುಂಠಿ, 10 ಗೋಡಂಬಿ, 1 ಟಮಾಟೋ, 2 ಈರುಳ್ಳಿ, 2 ಹಸಿಮೆಣಸಿನಕಾಯಿ, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಎಣ್ಣೆ.
ರೆಸ್ಟೋರೆಂಟ್ ಶೈಲಿಯಲ್ಲಿ ವೆಜಿಟೇಬಲ್ ಕುರ್ಮ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಣ್ಣಗೆ ಹಚ್ಚಿದ ಈರುಳ್ಳಿ, ಮುರಿದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಶುಂಠಿ, ಗೋಡಂಬಿಯನ್ನು ಹಾಕಿ 5 – 6 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಚ್ಚಿದ ಟೊಮ್ಯಾಟೊವನ್ನು ಹಾಕಿ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣವನ್ನು ಹಾಕಿ ನುಣ್ಣಗೆ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ.
ಮತ್ತೆ ಅದೇ ಬಾಣಲೆಗೆ ಕಸೂರಿ ಮೇತಿಯನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ ಬೆಣ್ಣೆ ಹಾಗೂ 2 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಣ್ಣಗೆ ಹಚ್ಚಿದ ಕ್ಯಾರೆಟ್, ಸಣ್ಣಗೆ ಹಚ್ಚಿದ ಹುರುಳಿಕಾಯಿ, ಸಣ್ಣಗೆ ಹಚ್ಚಿದ ನವಿಲುಕೋಸು, ಸಣ್ಣಗೆ ಹಚ್ಚಿದ ಆಲೂಗಡ್ಡೆ, ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಚಕ್ಕೆ ಹಾಗೂ ಮರಾಠಿ ಮೊಗ್ಗನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಅಚ್ಚಖಾರದ ಪುಡಿ, ಧನಿಯಾ ಪುಡಿ, ಅರಿಶಿನಪುಡಿ, ಗರಂ ಮಸಾಲಾವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಹಸಿಬಟಾಣಿ ಹಾಗೂ ಕ್ಯಾಪ್ಸಿಕಮ್ ಅನ್ನು ಹಾಕಿ ಒಂದು ಬರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಲೋಟ ನೀರು ಹಾಗೂ ರುಬ್ಬಿದ ಮಸಾಲೆ ಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳುತ್ತಾ ತರಕಾರಿ ಬೇಯುವವರೆಗೂ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಕಸೂರಿ ಮೇತಿ ಹಾಗೂ 1 ಚಮಚ ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ರೆಸ್ಟೋರೆಂಟ್ ಶೈಲಿಯಲ್ಲಿ ವೆಜಿಟೇಬಲ್ ಕುರ್ಮ ಸವಿಯಲು ಸಿದ್ದ.