ಬಡವರ ಬಾದಾಮಿಯನ್ನು ನೆನೆಸಿಟ್ಟು ತಿಂದರೇ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಗೋಲ್ಡನ್ ಸ್ಟಾರ್ ಗಣೇಶ್ ರವರ ಹುಡುಗಾಟ ಸಿನಿಮಾವನ್ನು ನೋಡಿರುತ್ತಿರಿ. ಅದರಲ್ಲಿ ಗಣೇಶ್ ನಾಯಕಿ ರೇಖಾಗೆ ಶೇಂಗಾವನ್ನು ಕೊಟ್ಟು ಇದು ಬಡವರ ಬಾದಾಮಿ ಕಣ್ರಿ ಅಂತ ಹೇಳ್ತಿರ್ತಾರೆ. ಹೌದು ಶೇಂಗಾವನ್ನ ಬಡವರ ಬಾದಾಮಿ ಎಂದು ಕರೆಯುವುದು ವಾಡಿಕೆ. ಇಂತಹ ಬಡವರ ಬಾದಾಮಿಯಾದ ಶೇಂಗಾವನ್ನ ನೆನೆಸಿಟ್ಟು ತಿಂದರೇ ನಮ್ಮ ದೇಹಕ್ಕೆ ಅತ್ಯಧಿಕ ಲಾಭಗಳು ಉಂಟಾಗುತ್ತವೆ. ಆ ಲಾಭಗಳು ಯಾವುವು ಎಂಬುದನ್ನ ತಿಳಿಯೋಣ ಬನ್ನಿ.

ನೀವು ಸಾಮಾನ್ಯವಾಗಿ ಜಿಮ್ ಗೆ ಹೋಗುತ್ತಿದ್ದರೇ ಅಲ್ಲಿನ ಟ್ರೈನರ್ ಗಳು ಪೀನಟ್ ಬಟರ್ ತಿನ್ನಿ ಎಂದು ಸಲಹೆ ನೀಡುತ್ತಾರೆ. ಹೌದು ನಿಮ್ಮ ಅಂಗಸೌಷ್ಠವ ಬದಲಾಗಬೇಕೆಂದರೇ, ಮಾಂಸಖಂಡಗಳು ಹುರಿಗೊಂಡು ಮಿಂಚಬೇಕಾದರೇ, ನೆನೆಸಿಟ್ಟ ಶೇಂಗಾವನ್ನು ತಿಂದು ವರ್ಕೌಟ್ ಶುರು ಮಾಡಿ. ಹಾಗೂ ದೇಹದಲ್ಲಿರುವ ಕ್ಯಾನ್ಸರ್ ಸೆಲ್ ಗಳನ್ನು ಅಂತ್ಯ ಗೊಳಿಸುತ್ತದೆ. ದೇಹದಲ್ಲಿನ ರಕ್ತ ಪರೀಚಲನೆ ಸರಾಗವಾಗಿ ಸಾಗಲು ನೆನೆಸಿಟ್ಟ ಶೇಂಗಾ ತಿನ್ನುವುದು ಒಳ್ಳೆಯದು.

ಸಂಧಿವಾತ, ಮೈಕೈ ಹಾಗೂ ಸೊಂಟ ನೋವು ಇರುವವರು ನೆನೆಸಿಟ್ಟ ಶೇಂಗಾ ತಿನ್ನಬಹುದು. ಇದರೊಳಗಿನ ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುವುದಲ್ಲದೇ ಎಲ್ಲಾ ನಾಳಗಳಿಗೂ ಸುಲಭವಾಗಿ ರಕ್ತಸಂಚಾರವಾಗುವಂತೆ ಮಾಡುತ್ತವೆ. ಹೃದ್ರೋಗಿಗಳಿಗೆ ಉತ್ತಮ : ಹೃದಯ ಸಂಭಂದಿ ಖಾಯಿಲೆ ಹೊಂದಿದವರು ಹಾಗೂ ಸ್ಥೂಲ ಕಾಯ ಹೊಂದಿದವರು ಕಡ್ಡಾಯವಾಗಿ ನೆನೆಸಿಟ್ಟ ಬಾದಾಮಿಯನ್ನು ತಿನ್ನಬೇಕು. ಇದು ದೇಹಕ್ಕೆ ಒಳ್ಳೆಯ ಕೊಬ್ಬನ್ನು ನೀಡುವ ಕಾರಣ, ಹೃದಯ ಸುಸಜ್ಜಿತವಾಗಿ ಇರುವಂತೆ ಮಾಡುತ್ತದೆ. ತೂಕ ಕಳೆದುಕೊಳ್ಳುವವರು ಸಹ ದಿನ ಬೆಳಿಗ್ಗೆ ನೆನೆಸಿಟ್ಟ ಶೇಂಗಾವನ್ನು ನಿಯಮಿತವಾಗಿ ಸೇವಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು.