100 ಕೋಟಿಗಳಿಸಿದರೇನು, ಸುಶಾಂತ ಸಿಂಗ್ ಅಭಿಮಾನಿಗಳು ಅಖಾಡಕ್ಕೆ ಇಳಿದು ಸಲ್ಮಾನ್ ಖಾನ್ ರವರಿಗೆ ಶಾಕ್ ನೀಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ನಡೆದಾಗ ಬಹುತೇಕ ಜನರು ಬಾಲಿವುಡ್ ಚಿತ್ರರಂಗದ ಹಲವರು ಸೆಲೆಬ್ರಿಟಿಗಳ ಮೇಲೆ ಸ್ವಜನಪಕ್ಷಪಾತದ ಬಾಣಗಳನ್ನು ಬಿಟ್ಟಿದ್ದರು, ಹೀಗೆ ಸುಶಾಂತ್ ಸಿಂಗ್ ಅಭಿಮಾನಿಗಳು ಪ್ರಮುಖವಾಗಿ ಬೆರಳು ಮಾಡಿದ್ದು ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್ ಅವರ ಬಗ್ಗೆ. ಅಂದೆ ಬಾಲಿವುಡ್ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳ ಸಿನಿಮಾಗಳಿಗೆ ಬುದ್ಧಿ ಕಲಿಸುತ್ತೇವೆ ಎಂದು ಸುಶಾಂತ್ ಸಿಂಗ್ ಅಭಿಮಾನಿಗಳು ಹೇಳಿದ್ದರು. ಅದೇ ರೀತಿ ಕರಣ್ ಜೋಹರ್ ರವರ ಸಿನಿಮಾಗಳು ಕಂಡು ಕೇಳರಿಯದಂತೆ ಉತ್ತರ ನೀಡಿದ್ದರು.

ಅದೇ ಕಾರಣಕ್ಕಾಗಿ ಈ ಹಿಂದೆ ಕರಣ್ ಜೋಹರ್ ರವರ ಸಿನಿಮಾ ಬಿಡುಗಡೆಯಾದಾಗಲೂ ಕೂಡ ಇದೇ ಕಥೆಯಾಗುತ್ತದೆ ಎಂದು ಕೂಡ ಹೇಳಿಕೆ ನೀಡಿದ್ದರು ಆದರೆ ಘಟನೆ ನಡೆದು ಸುಮಾರು ತಿಂಗಳುಗಳು ಎಲ್ಲರೂ ಈ ವಿಷಯವನ್ನು ಮರೆತಿದ್ದಾರೆ ಎಂದು ಕೊಂಡಿದ್ದರು. ಆದರೆ ಅಂದು ಕರಣ ಜೋಹನ್ ರವರಿಗೆ ಹಾಗೂ ಅವರ ಸಿನಿಮಾಗಳಿಗೆ ನೀಡಿದ ಉತ್ತರದ ರೀತಿಯಲ್ಲಿ ಇದೀಗ ಸಲ್ಮಾನ್ ಖಾನ್ ಚಿತ್ರ ಬಿಡುಗಡೆಯಾದ ತಕ್ಷಣ ಸುಶಾಂತ ಸಿಂಗ್ ಅಭಿಮಾನಿಗಳು ಸಲ್ಮಾನ್ ಖಾನ್ ರವರಿಗೆ ಶಾಕ್ ನೀಡಿದ್ದಾರೆ.

ಹೌದು ಸ್ನೇಹಿತರೇ ಸಲ್ಮಾನ್ ಖಾನ್ ಅಭಿಮಾನಿಗಳು ಜೀ ಅಪ್ಲಿಕೇಶನ್ ನಲ್ಲಿ ಸಿನಿಮಾ ನೋಡಲು ಹೋಗಿ ಸರ್ವರ್ ಡೌನ್ ಆಗಿದೆ ಹಾಗೂ ಹೆಚ್ಚು ಜನರು ನೋಡಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿರುವಾಗ ಮತ್ತೊಂದೆಡೆ ಐಎಂಡಿಬಿ ರೇಟಿಂಗ್ ನಲ್ಲಿ ಕಂಡು ಕೇಳಿದರಂತೆ ಸಲ್ಮಾನ್ ಖಾನ್ ರವರ ಚಿತ್ರ ಕಳಪೆ ರೇಟಿಂಗ್ ಪಡೆದು ಕೊಂಡಿದೆ. ಈ ಲೇಖನ ಬರೆಯುವ ಸಮಯದಲ್ಲಿ ಐಎಂಡಿಬಿ ರೇಟಿಂಗ್ ಕೇವಲ 1.9 ಇದು ಸಲ್ಮಾನ್ ಖಾನ್ ರವರ ಜೀವನದಲ್ಲಿ ಅತಿ ಕಡಿಮೆ ರೇಟಿನ ಪಡೆದ ಚಿತ್ರ ಎಂಬ ಹಣೆಪಟ್ಟಿಯನ್ನು ಕಟ್ಟಿ ಕೊಂಡಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.