ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೀಲಂಕಾದಲ್ಲಿ ಭಾರತ ತಂಡವನ್ನು ಮುನ್ನಡೆಸುವ ನಾಯಕ ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಇದೇ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ಇತಿಹಾಸದಲ್ಲಿ ಒಂದು ದೇಶದ ಎರಡು ತಂಡಗಳು ಒಂದೇ ಸಮಯದಲ್ಲಿ ವಿವಿಧ ದೇಶಗಳಲ್ಲಿ ವಿವಿಧ ಟೂರ್ನಿಗಳನ್ನು ಆಡುತ್ತಿವೆ. ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ತಂಡ ಯುವ ಆಟಗಾರರನ್ನು ಗಣನೆಗೆ ತೆಗೆದು ಕೊಂಡರೆ ಖಂಡಿತ ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡು ಏನು ಮೂರು ತಂಡಗಳನ್ನು ಕೂಡ ರಚಿಸಬಹುದಾದ ಅಂತಹ ಸಾಮರ್ಥ್ಯ ಹೊಂದಿದೆ.

ಅದೇ ಕಾರಣಕ್ಕಾಗಿ ಇದೀಗ ಬಿಸಿಸಿಐ ಒಟ್ಟಾರೆಯಾಗಿ ಎರಡು ತಂಡಗಳನ್ನು ರಚಿಸಿ ಒಂದು ತಂಡವನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಹಾಗೂ ಮತ್ತೊಂದು ತಂಡವನ್ನು ಶ್ರೀಲಂಕಾ ದೇಶದ ವಿರುದ್ಧ ಸರಣಿಗೆ ಸಿದ್ಧತೆ ಗೋಳಿಸುತ್ತಿದೆ. ಆದರೆ ಇದೇ ಸಮಯದಲ್ಲಿ ಭಾರತಕ್ಕೆ ಇರುವುದು ಒಬ್ಬನೇ ನಾಯಕ ಅದು ವಿರಾಟ್ ಕೊಹ್ಲಿ. ಆದ ಕಾರಣ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಹಾಗೂ ವಿರಾಟ್ ಕೊಹ್ಲಿ ಅವರ ಜೊತೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಆಡಲು ಹಿರಿಯ ಆಟಗಾರರು ತೇರಲಿರುವ ಕಾರಣ ಯಾರು ಶ್ರೀಲಂಕಾ ವಿರುದ್ಧ ತಂಡವನ್ನು ಮುನ್ನಡೆಸುತ್ತಾರೆ ಎಂಬ ಚರ್ಚೆ ಶುರುವಾಗಿದೆ.

ಆಯ್ಕೆಯಾಗಿರುವ 15 ಜನರ ತಂಡದಲ್ಲಿ ಇಬ್ಬರು ಹಿರಿಯ ಆಟಗಾರರಿಗೆ ಅಥವಾ ಈ ಇಬ್ಬರು ಅನುಭವಿ ಆಟಗಾರರಲ್ಲಿ ಖಂಡಿತ ಒಬ್ಬರು ಭಾರತ ತಂಡವನ್ನು ಮುನ್ನೆಡೆಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ, ಹೌದು ಸ್ನೇಹಿತರೆರೇ ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ರವರ ಹೆಸರು ನಾಯಕನಾಗಿ ಆಯ್ಕೆಯಾಗುವ ಹೆಸರುಗಳಲ್ಲಿ ಮುಂಚೂಣಿಯಲ್ಲಿದೆ. ಅತ್ಯದ್ಭುತ ಐಪಿಎಲ್ ಋತುವನ್ನು ಹೊಂದಿರುವ ಶಿಖರ್ ಧವನ್ ರವರು ನಾಯಕನಾಗುವ ಎಲ್ಲಾ ಸಾಧ್ಯತೆಗಳು ಅದೇ ಸಮಯದಲ್ಲಿ ಹೊಸ ಪ್ರಯೋಗ ಮಾಡಲು ಹಾರ್ದಿಕ್ ಪಾಂಡ್ಯ ರವರನ್ನು ಕೂಡ ನಾಯಕನನ್ನಾಗಿ ಮಾಡಬಹುದಾದ ಸಾಧ್ಯತೆ ಹೆಚ್ಚಾಗಿದೆ. ಈ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Post Author: Ravi Yadav