ನಮಸ್ಕಾರ ಸ್ನೇಹಿತರೇ, ಅನ್ನವನ್ನು ಮಾಡುವಾಗ ಈ ಪದಾರ್ಥವನ್ನು ಸೇರಿಸಿ ಮಾಡಿ ತಿಂದರೆ ಶುಗರ್ ಹೆಚ್ಚಾಗುವ ಭಯ ಇರುವುದಿಲ್ಲ.ಅಲ್ಲದೇ ತೂಕ ಹೆಚ್ಚಾಗುವ ಭಯವಿರುವುದಿಲ್ಲ ಹಾಗೂ ದೇಹದ ಉಷ್ಣಾಂಶವು ಸಹ ಕಡಿಮೆಯಾಗುತ್ತದೆ. ಅದು ಯಾವ ಪದಾರ್ಥ ? , ಯಾವ ರೀತಿ ಅನ್ನ ಮಾಡಬೇಕು ? ಎಂಬುದನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಸಾಮಾನ್ಯವಾಗಿ ಶುಗರ್ ಇರುವವರು ಅನ್ನವನ್ನು ತಿನ್ನಬಾರದು ಎಂಬ ಸಲಹೆಯನ್ನು ವೈದ್ಯರು ನೀಡುತ್ತಾರೆ. ಕೆಲವರು ಶುಗರ್ ಇದ್ದರೂ ಸಹ ಸ್ವಲ್ಪ ಅನ್ನವನ್ನು ತಿನ್ನಲೇಬೇಕು ಎನ್ನುತ್ತಾರೆ. ನಾವು ಹೇಳುವ ಪದಾರ್ಥವನ್ನು ಅನ್ನ ಮಾಡುವಾಗ ಹಾಕಿ ಮಾಡಿದರೆ ಶುಗರ್ ಇರುವವರು ಸಹ ತಿನ್ನಬಹುದು.
ಮನೆಗೆ ಅಕ್ಕಿಯನ್ನು ತರುವಾಗ ಸಾಧ್ಯವಾದಷ್ಟು ಒಂದು ವರ್ಷದ ಹಳೆಯ ಅಕ್ಕಿಯನ್ನು ತರಲು ಪ್ರಯತ್ನಿಸಿ. ಏಕೆಂದರೆ ಹಳೆಯ ಅಕ್ಕಿಯಲ್ಲಿ ಅನ್ನ ಮಾಡಿ ತಿನ್ನುವುದರಿಂದ ಬೇಗ ಜೀರ್ಣವಾಗುತ್ತದೆ. ಅಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಈಗ ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ಸ್ಟೀಮ್ ರೈಸ್ ಅಥವಾ ರಾ ರೈಸ್ ಸಿಗುತ್ತದೆ.ಈಗ ಕೆಂಪು ಅಕ್ಕಿ ಹೆಚ್ಚಾಗಿ ಜನರು ಉಪಯೋಗಿಸುತ್ತಾರೆ.ಇನ್ನೂ ಎಲ್ಲಾ ಕಡೆಗಳಲ್ಲೂ ಹಳೆಯ ಅಕ್ಕಿ ಸಿಗುವುದಿಲ್ಲ. ಒಂದು ವೇಳೆ ಸ್ಟೀಮ್ ಅಕ್ಕಿ ಅಥವಾ ರಾ ರೈಸ್ ಅನ್ನು ಉಪಯೋಗಿಸುವ ಮೊದಲು ಅದನ್ನು ಸ್ವಲ್ಪ ಫ್ರೈ ಮಾಡಿಕೊಂಡು ಉಪಯೋಗಿಸುವುದು ಉತ್ತಮ.
ಅನ್ನವನ್ನು ಮಾಡುವ ವಿಧಾನ: ಮೊದಲು ಒಂದು ಬಟ್ಟಲಿಗೆ 1 ಲೋಟದಷ್ಟು ಅಕ್ಕಿ ಹಾಗೂ ನೀರನ್ನು ಹಾಕಿಕೊಂಡು 3 – 4 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ಮೂರನೇ ಬಾರಿ ಅಕ್ಕಿಯನ್ನು ತೊಳೆದ ನೀರನ್ನು ಔಷಧೀಯ ರೂಪದಲ್ಲಿಯೂ ಸಹ ಉಪಯೋಗಿಸಬಹುದು. ನಂತರ ಅಕ್ಕಿಯನ್ನು 10 -15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಇದಕ್ಕೆ ಕಾಲು ಇಂಚು ಚಕ್ಕೆ, 5 – 6 ಕಾಳುಮೆಣಸು, 3 ಲವಂಗ 1 ಚಮಚ ಜೀರಿಗೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ನೆನೆಸಿದ ಅಕ್ಕಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಮೂರುವರೆ ಲೋಟದಷ್ಟು ನೀರನ್ನು ಹಾಕಿ ಮುಚ್ಚಳವನ್ನು ಮುಚ್ಚದ ಹಾಗೆ ಅನ್ನವನ್ನು ಬೇಯಲು ಬಿಡಿ.ಅನ್ನ ಬೆಂದ ನಂತರ ಒಂದು ಪ್ಲೇಟನ್ನು ಮುಚ್ಚಿ ಅನ್ನದ ಗಂಜಿಯನ್ನು ಬಸಿದುಕೊಳ್ಳಿ ಅಥವಾ ಒಂದು ಜರಡಿ ಸಹಾಯದಿಂದ ಅನ್ನವನ್ನು ಬಸಿದುಕೊಂಡು ಅದೇ ಪಾತ್ರೆಗೆ ಹಾಕಿ ಮುಚ್ಚಳವನ್ನು ಮುಚ್ಚಿ ಕಡಿಮೆ ಉರಿಯಲ್ಲಿ 1 – 2 ನಿಮಿಷಗಳ ಕಾಲ ಬೇಯಿಸಿಕೊಂಡರೆ ಬಿಸಿ ಬಿಸಿ ಅನ್ನ ಸವಿಯಲು ಸಿದ್ದ.