ಈ ಭಾರತೀಯ ಸ್ಟಾರ್ ಕ್ರಿಕೆಟಿಗರು ಕ್ರಿಕೆಟ್ ಮಾತ್ರವಲ್ಲದೆ ಸರ್ಕಾರಿ ಹುದ್ದೆಗಳಲ್ಲೂ ಅಗ್ರಸ್ಥಾನದಲ್ಲಿದ್ದಾರೆ, ಪಟ್ಟಿ ನೋಡಿ.

ಈ ಭಾರತೀಯ ಸ್ಟಾರ್ ಕ್ರಿಕೆಟಿಗರು ಕ್ರಿಕೆಟ್ ಮಾತ್ರವಲ್ಲದೆ ಸರ್ಕಾರಿ ಹುದ್ದೆಗಳಲ್ಲೂ ಅಗ್ರಸ್ಥಾನದಲ್ಲಿದ್ದಾರೆ, ಪಟ್ಟಿ ನೋಡಿ.

ನಮಸ್ಕಾರ ಸ್ನೇಹಿತರೇ ಕ್ರಿಕೇಟ್ ಆಟಗಾರರೆಂದರೇ ಅವರು ವರ್ಷಪೂರ್ತಿ ಕ್ರಿಕೇಟ್ ನಲ್ಲಿಯೇ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆಂದು ಹಲವಾರು ಜನ ಭಾವಿಸಿದ್ದಾರೆ. ಆದರೇ ಕ್ರಿಕೇಟ್ ತಾರೆಯರು ಕ್ರಿಕೇಟ್ ಇಲ್ಲದ ಅವಧಿಯಲ್ಲಿ ಜಾಹಿರಾತಿನ ಶೂಟಿಂಗ್, ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಕೆಲವರು ಸರ್ಕಾರಿ ನೌಕರರಾಗಿ, ತಮ್ಮ ಕೆಲಸ ಮಾಡುತ್ತಾರೆ. ಸರ್ಕಾರಿ ಕೆಲಸದಲ್ಲಿರುವ ಕೆಲವು ಕ್ರಿಕೇಟ್ ಆಟಗಾರರು ಈ ಕೆಳಗಿನಂತಿದ್ದಾರೆ.

ಮೊದಲನೆಯದಾಗಿ ಮಹೇಂದ್ರ ಸಿಂಗ್ ಧೋನಿ – ಭಾರತೀಯ ಕ್ರಿಕೇಟ್ ತಂಡದ ಯಶಸ್ವಿ ನಾಯಕ ಧೋನಿಯವರಿಗೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2019 ರ ವಿಶ್ವಕಪ್ ನ ಸೆಮಿಫೈನಲ್ ನಂತರ ಧೋನಿ ಆರು ತಿಂಗಳು ಭಾರತೀಯ ಸೇನೆಯ ಜೊತೆ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಇನ್ನು ಕೆ.ಎಲ್.ರಾಹುಲ್ ರವರು ಉದಯೋನ್ಮುಖ ಬ್ಯಾಟ್ಸ್ ಮನ್, ಭಾರತದ ಮುಂದಿನ ನಾಯಕ ಕೆ.ಎಲ್ ರಾಹುಲ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಪ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಕಪಿಲ್ ದೇವ್ ರವರು ಭಾರತಕ್ಕೆ ಮೊಟ್ಟಮೊದಲು ವಿಶ್ವಕಪ್ ಗೆಲ್ಲಿಸಿಕೊಟ್ಟ ತಂಡದ ನಾಯಕ ಕಪಿಲ್ ದೇವ್ ಸಹ ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಯುಜವೇಂದ್ರ ಚಾಹಲ್ ರವರು ಲೆಗ್ ರಿಸ್ಟ್ ಸ್ಪಿನ್ನರ್ ಯುಜಿ ಚಾಹಲ್ ಟಿಕ್ ಟಾಕ್ ಮೂಲಕ, ಸದಾ ಕಾಲ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹಾಸ್ಯ ಚಟಾಕಿಗಳಿಂದ ತಂಡದ ಎಲ್ಲಾ ಆಟಗಾರರ ಪ್ರೀತಿಗೆ ಪಾತ್ರರಾಗಿದ್ದರು. ಅವರು ಹರಿಯಾಣದಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಅಷ್ಟೇ ಅಲ್ಲದೆ ಹರ್ಭಜನ್ ಸಿಂಗ್ ರವರು ಟರ್ಬನೇಟರ್ ಖ್ಯಾತಿಯ ಭಜ್ಜಿ ಮೈದಾನದಲ್ಲಿ ಕೇವಲ ಬಾಲ್ ನ್ನು ಮಾತ್ರ ತಿರುಗಿಸುತ್ತಿಲ್ಲ. ಪಂಜಾಬ್ ಸರ್ಕಾರದಲ್ಲಿ ಡಿ.ಎಸ್.ಪಿ ಆಗಿ ಲಾಠಿಯನ್ನು ಸಹ ತಿರುಗಿಸುತ್ತಿದ್ದಾರೆ. ಇನ್ನು ಜೋಗಿಂದರ್ ಶರ್ಮಾ ರವರು 2007 ರ ಟಿ20 ವಿಶ್ವಕಪ್ ನ ಕೊನೆಯ ಓವರ್ ಎಸೆದು ಹೀರೋ ಆಗಿದ್ದ ಜೋಗಿಂದರ್ ಶರ್ಮಾ ಸಹ ಸರ್ಕಾರಿ ನೌಕರರು. ಹರಿಯಾಣ ಸರ್ಕಾರದ ಪೋಲಿಸ್ ಇಲಾಖೆಯಲ್ಲಿ ಡಿ.ಎಸ್.ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇನ್ನು ಕೊನೆಯದಾಗಿ ಆರ್.ವಿನಯ್ ಕುಮಾರ್ ರವರು ದಾವಣಗೆರೆ ಎಕ್ಸ್ ಪ್ರೆಸ್ , ಕನ್ನಡಿಗ ವಿನಯ್ ಕುಮಾರ್ ಸಹ ಸರ್ಕಾರಿ ಉದ್ಯೋಗಿ. ಅವರು ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.