ಕೊನೆಗೂ ಹಲವಾರು ಸರ್ಕಸ್ ಗಳ ಬಳಿಕ ಸಿಹಿಸುದ್ದಿ ಹಂಚಿಕೊಂಡ ಎಬಿ ಡಿವಿಲಿಯರ್ಸ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೆರೇ ನಿಮಗೆಲ್ಲರಿಗೂ ತಿಳಿದಿರುವಂತೆ ಎಬಿ ಡಿವಿಲಿಯರ್ಸ್ ಅವರು ಆಧುನಿಕ ಕ್ರಿಕೆಟಿನ ಹೀರೋ ಎಂದರೆ ತಪ್ಪಾಗಲಾರದು. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ರವರು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದರೆ ಯಾವುದೇ ತಂಡ ಎಬಿ ಡಿವಿಲಿಯರ್ಸ್ ರವರನ್ನು ಔಟ್ ಮಾಡುವವರೆಗೂ ಗೆಲ್ಲುವ ಆಲೋಚನೆ ಕೂಡ ಮಾಡುವುದಿಲ್ಲ.

ಯಾವ ಸಮಯದಲ್ಲಿ ಬೇಕಾದರೂ ಹೇಗೆ ಬೇಕಾದರೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯವನ್ನು ಎಬಿ ಡಿವಿಲಿಯರ್ಸ್ ಅವರು ಹೊಂದಿದ್ದಾರೆ. ಇನ್ನು ಇವರೆಂದರೆ ಕೇವಲ ಸೌತ್ ಆಫ್ರಿಕ ಜನರಿಗೆ ಅಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿಯೇ ಜನರು ಇಷ್ಟಪಡುತ್ತಾರೆ ಅದರಲ್ಲಿಯೂ ಭಾರತದಲ್ಲಿ ಇವರಿಗೆ ಸಿಗುವ ಪ್ರೀತಿ ಇಲ್ಲಿಯೂ ಕೂಡ ಸಿಗುವುದಿಲ್ಲ ಎಂದು ಅವರೇ ಹೇಳಿದ್ದಾರೆ.

ಇನ್ನು ಆರ್ಸಿಬಿ ಅಭಿಮಾನಿಗಳಿಗಂತೂ ಈತ ಒಂದು ಆಪದ್ಬಾಂಧವ ಎಂದು ನಂಬಿದ್ದಾರೆ. ಏಕ ಪಕ್ಷೀಯವಾಗಿ ಹಲವಾರು ಗೆಲುವುಗಳನ್ನು ನೀಡಿದ್ದಾರೆ. ಅದೇ ಕಾರಣಕ್ಕಾಗಿಯೇ ಎಬಿ ಡಿವಿಲಿಯರ್ಸ್ ರವರು ನಿವೃತ್ತಿ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಾಪಸ್ಸು ಬರಬೇಕು ಎಂಬ ಮನವಿ ಕೇಳಿ ಬರುತ್ತಿವೆ. ಇದೇ ಸಮಯದಲ್ಲಿ ಹಲವಾರು ತಿಂಗಳುಗಳಿಂದ ಕೇಳಿ ಬರುತ್ತಿದ್ದ ಸುದ್ದಿಯನ್ನು ಖಚಿತ ಪಡಿಸಿರುವ ಸೌತ್ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಮುಂದಿನ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಟಿ-20 ಸರಣಿಯಲ್ಲಿ ಎಬಿ ಡಿವಿಲಿಯರ್ಸ್ ಅವರು ವಾಪಸಾಗುವುದು ಖಚಿತವಾಗಿದೆ.

Post Author: Ravi Yadav