ಸಿಕ್ಕಾಪಟ್ಟೆ ಕಡಿಮೆ ಆದ ಚಿನ್ನದ ಬೆಲೆ, ಕೈಗೆಟುವ ಬೆಲೆಯಲ್ಲಿ ಚಿನ್ನ, ಆದರೆ ಊಡಿಕೆಗೆ ಇದು ಸರಿಯಾದ ಸಮಯವೇ??

ನಮಸ್ಕಾರ ಸ್ನೇಹಿತರೇ ನಿಮ್ಮ ಭವಿಷ್ಯಕ್ಕಾಗಿ ಅಥವಾ ಯಾವುದೋ ಒಂದು ಕಾರಣಕ್ಕಾಗಿ ಚಿನ್ನ ಖರೀದಿ ಮಾಡುವ ಆಲೋಚನೆಯಲ್ಲಿ ಇದ್ದರೇ ಖಂಡಿತ ಈ ಲೇಖನದಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಾ. ಆದರೆ ಬೆಲೆ ತಿಳಿದ ನಂತರ ಈ ಸಮಯದಲ್ಲಿ ನೀವು ಹೂಡಿಕೆ ಮಾಡಬಹುದೇ ಅಥವಾ ಮತ್ತಷ್ಟು ದಿನಗಳ ಕಾಲ ವೇಟ್ ಮಾಡಿದರೆ ಚಿನ್ನದ ಬೆಲೆ ಎಲ್ಲಿಗೆ ಹೋಗಿ ತಲುಪುತ್ತದೆ ಹಾಗೂ ನೀವು ಇಂದು ಚಿನ್ನವನ್ನು ಖರೀದಿ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ಕೂಡ ತಿಳಿಸುತ್ತೇವೆ ಕೇಳಿ.

ಸ್ನೇಹಿತರೇ ಬಹುಶಹ ನಿಮಗೆಲ್ಲರಿಗೂ ತಿಳಿದಿರಬಹುದು ಕಳೆದ ಕೆಲವೇ ಕೆಲವು ತಿಂಗಳುಗಳ ಹಿಂದೆ ನೀವು ಕೇವಲ 10 ಗ್ರಾಂ ಅಪ್ಪಟ ಚಿನ್ನ ವನ್ನು ಖರೀದಿ ಮಾಡಬೇಕು ಎಂದು ಇದ್ದರೆ ಖಂಡಿತ ನಿಮ್ಮ ಕೈಯಲ್ಲಿ ಕನಿಷ್ಟ 60 ರಿಂದ 70 ಸಾವಿರ ದುಡ್ಡು ಇರಬೇಕಾಗಿತ್ತು. ನೀವು ತೆಗೆದು ಕೊಳ್ಳುವ ಒಡವೆಯ ಆಧಾರದ ಮೇರೆಗೆ ಅದಕ್ಕೆ ಕೂಲಿ ಮತ್ತು ವೆಸ್ಟೇಜ್ ಹಾಕಲಾಗುತ್ತಿತ್ತು, ಕೇವಲ ಚಿನ್ನದ ಬೆಲೆ ಗಮನಿಸುವುದಾದರೆ 58000 ವರೆಗೂ ಕೂಡ ಚಿನ್ನ ತಲುಪಿತ್ತು. ಹೌದು 10 ಗ್ರಾಮಿಗೆ 58000 ವರೆಗೂ ಚಿನ್ನ ತಲುಪಿತ್ತು.

ಆದರೆ ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ, ಇದಕ್ಕೆ ಒಂದು ಚಿನ್ನದ ಮೇಲಿನ ಆಮದು ಸುಂಕ ಕಡಿಮೆ ಮಾಡಲಾಗಿದೆ ಹಾಗೂ ಎರಡನೆಯದು ಚಿನ್ನ ಕೊಂಡು ಕೊಳ್ಳುವವರ ಸಂಖ್ಯೆ ದಿನೇ ದಿನೇ ಕಡಿಮೆ ಯಾಗುತ್ತಿದೆ. ಆದರೂ ಕೂಡ ಮಧ್ಯಮ ವರ್ಗದ ಜನರು ಸರಿಯಾದ ಸಮಯ ನೋಡಿ ಹೂಡಿಕೆ ಮಾಡೋಣ ಎಂದು ಕಾಯುತ್ತಿರುತ್ತಾರೆ, ಯಾಕೆಂದರೆ ಮಧ್ಯಮ ವರ್ಗದ ಜನರ ಜೀವನ ಒಂದು ಪ್ಲಾನಿಂಗ್ ನಂತೆ ನಡೆಯುತ್ತದೆ, ಕೊಂಚ ಯಾಮಾರಿದರೆ ಕೂಡ ಹೆಚ್ಚಿನ ಹಣ ವ್ಯಯಿಸಬೇಕಾದ ಕಾರಣ ಬಹಳ ಕಾಳಜಿ ವಹಿಸಿ ಚಿನ್ನದ ಖರೀದಿ ಮಾಡಲಾಗುತ್ತದೆ.

ಇನ್ನು ಹಾಗಿದ್ದರೆ ಚಿನ್ನದ ಬೆಲೆ ಯ ಕುರಿತು ಮಾತನಾಡುವುದಾದರೇ ಸ್ನೇಹಿತರೇ ಕಳೆದ ಕೆಲವು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆ ಯಾಗುತ್ತಿದ್ದು ಕಳೆದೆರಡು ವಾರಗಳ ಹಿಂದೆ 50 ಸಾವಿರ ರೂಪಾಯಿಗಳಿಗೆ ಬಂದು ನಿಂತಿತ್ತು, ಅಂದರೆ ನಾವು ಮಾತನಾಡುತ್ತಿರುವುದು 24 ಕ್ಯಾರೆಟ್ ಚಿನ್ನದ ಬಗ್ಗೆ. ಹೌದು ಸಾಮಾನ್ಯ 22 ಕ್ಯಾರೆಟ್ ಚಿನ್ನ 47 ಸಾವಿರಕ್ಕೆ ಬಂದು ನಿಂತಿತ್ತು. ಆದರೆ ಇದೀಗ ಎರಡು ವಾರದ ಬಳಿಕ ಮತ್ತಷ್ಟು ಕಡಿಮೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 47670 ರೂಪಾಯಿಗೆ ಬಂದು ನಿಂತಿದೆಯಾ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ 44700 ರೂಪಾಯಿಗೆ ಬಂದು ನಿಂತಿದೆ.

ಇನ್ನು ಇದು ಹೂಡಿಕೆಗೆ ಸರಿಯಾದ ಸಮಯವೇ ಎಂಬುದನ್ನು ಆರ್ಥಿಕ ತಜ್ಞರ ಬಳಿ ಪ್ರಶ್ನೆ ಮಾಡಿದಾಗ ಆರ್ಥಿಕ ತಜ್ಞರು ಹೇಳುವಂತೆ ಎಂಬ ಇನ್ನು ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಯಾಗುವ ಸಾಧ್ಯತೆಗಳು ನಮಗೆ ಕಾಣಿಸುತ್ತವೆ. ಯಾಕೆಂದರೆ ದೇಶದಲ್ಲಿನ ಪರಿಸ್ಥಿತಿ ನೋಡಿದರೆ ಖಂಡಿತ ಯಾರು ಚಿನ್ನ ಖರೀದಿ ಮಾಡುವ ಆಲೋಚನೆ ಮಾಡುವುದಿಲ್ಲ ಆದ ಕಾರಣ ಚಿನ್ನ ಮತ್ತಷ್ಟು ಕಡಿಮೆ ಯಾಗಲಿದೆ, ಇನ್ನು ಕೆಲವು ವಾರಗಳ ಬಳಿಕ ಮತ್ತಷ್ಟು ಚಿನ್ನ ಕಡಿಮೆಯಾಗಿ ಕನಿಷ್ಠ 10 ಗ್ರಾಮಿಗೆ ಎರಡರಿಂದ ಮೂರು ಸಾವಿರ ರೂಪಾಯಿಗಳಷ್ಟು ಕಡಿಮೆಯಾಗಬಹುದು ಎಂದಿದ್ದಾರೆ.

Facebook Comments

Post Author: Ravi Yadav