ಈ ಐಪಿಎಲ್ ನಲ್ಲಿ ಎಲ್ಲ ತಂಡಗಳ ಕೋಚ್ ಗಳು ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?? ಆರ್ಸಿಬಿಯದ್ದೇ ಟಾಪ್.

ಈ ಐಪಿಎಲ್ ನಲ್ಲಿ ಎಲ್ಲ ತಂಡಗಳ ಕೋಚ್ ಗಳು ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?? ಆರ್ಸಿಬಿಯದ್ದೇ ಟಾಪ್.

ನಮಸ್ಕಾರ ಸ್ನೇಹಿತರೇ, ಈ ಬಾರಿಯ ಐಪಿಎಲ್ ಟೂರ್ನಿಯು ಆರಂಭದ ದಿನಗಳಲಿಂದಲೂ ಕೂಡ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಎತ್ತ ನೋಡಿದರೂ ಕೂಡ ಎಲ್ಲ ತಂಡಗಳ ನಡುವೆ ಪೈಪೋಟಿಯ ಪಂದ್ಯಗಳು ನಡೆಯುತ್ತಿದ್ದವು. ಸರಿಯಾಗಿ ಗಮನಿಸರೇ ಇಷ್ಟು ದಿವಸ ಆರ್ಸಿಬಿ ತಂಡವು ಎಲ್ಲರಿಗೂ ಬಾಯಿ ಬಾರಿಸಿ ಗೆದ್ದಂತೆ ಇತರ ತಂಡಗಳು ಕೂಡ ಕೊನೆಯ ಕ್ಷಣಗಳ ವರೆಗೂ ಕೂಡ ಫಲಿತಾಂಶ ಯಾರೋ ಊಹಿಸಿದ ರೀತಿಯಲ್ಲಿ ಬರದೇ ಇರುವಷ್ಟು ರೋಚಕ ಪಂದ್ಯಗಳನ್ನು ಸೃಷ್ಟಿಯಿದ್ದವು.

ಇದು ಪ್ರೇಕ್ಷಕರಿಗೆ ಭರಪೂರಿತ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಬಹುತೇಕರು ಮನೆಯಲ್ಲಿಯೇ ಇರುವ ಕಾರಣ ಹಾಗೂ ಸಂಜೆಯ ಸಮಯದಲ್ಲಿ ಹೊರಹೋಗುವುದಕ್ಕೆ ಅವಕಾಶವಿಲ್ಲದ ಕಾರಣ ಪ್ರೇಕ್ಷಕರಿಗೆ ಇದು ಟೈಮ್ ಪಾಸ್ ಮಾಡುವ ಒಂದು ವಿಧಾನವಾಗಿತ್ತು. ಇನ್ನು ಹೀಗಿರುವಾಗ ಅದು ಕೂಡ ಅರ್ಧಕ್ಕೆ ನಿಂತು ಹೋಗಿದೆ.

ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಆಟಗಾರರು ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೇ. ಆದರೆ ಪ್ರತಿ ತಂಡಗಳ ಪ್ರಮುಖ ಕೋಚ್ ಗಳು ಎಷ್ಟು ಪಡೆದುಕೊಂಡಿದ್ದಾರೆ ಎಂಬುದರ ಕುರಿತು ನಿಮಗೆ ತಿಳಿದಿದೆಯೇ?? ಬನ್ನಿ ಈ ಕುರಿತು ಇಂದು ತಿಳಿಸಿಕೊಡುತ್ತೇವೆ. ಪಟ್ಟಿ ಈ ಕೆಳಗಿನಂತೆ ಇದ್ದು, ಪ್ರತಿಯೊಂದು ತಂಡಗಳ ಕೋಚ್ ಒಂದು ಸೀಸನ್ ಗೆ ಇಷ್ಟು ಕೋತಿ ರೂಪಾಯಿಗಳನ್ನು ಪಡೆಯುತ್ತಾರೆ.

ಚೆನ್ನೈ: ಸ್ಟೀಫನ್ ಫ್ಲೆಮಿಂಗ್- 3.4 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸೈಮನ್ ಕಟಿಚ್- 4 ಕೋಟಿ, ಮುಂಬೈ ಇಂಡಿಯನ್ಸ್: ಮಹೇಲ ಜಯವರ್ಧನೆ- 2.25 ಕೋಟಿ, ಕೋಲ್ಕತಾ ನೈಟ್ ರೈಡರ್ಸ್: ಬ್ರೆಂಡನ್ ಮೆಕಲಮ್ – 3.4 ಕೋಟಿ, ಪಂಜಾಬ್: ಅನಿಲ್ ಕುಂಬ್ಳೆ- 4 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್: ರಿಕಿ ಪಾಂಟಿಂಗ್ – 4 ಕೋಟಿ, ಸನ್‌ರೈಸರ್ಸ್ ಹೈದರಾಬಾದ್: ಟ್ರೆವರ್ ಬೇಲಿಸ್- 2.25 ಕೋಟಿ, ರಾಜಸ್ಥಾನ್ ರಾಯಲ್ಸ್: ಆಂಡ್ರ್ಯೂ ಮೆಕ್ಡೊನಾಲ್ಡ್ -3.4 ಕೋಟಿ