ಸಾಸ್ ಗಳಿಲ್ಲದೆ ವೆಜಿಟೇಬಲ್ ಫ್ರೈಡ್ ರೈಸ್ ಮಾಡುವ ವಿಧಾನ ರುಚಿಯಂತೂ ಮರೆಯೋಕಾಗಲ್ಲ. ಹೇಗೆ ಗೊತ್ತೆ??

ಸಾಸ್ ಗಳಿಲ್ಲದೆ ವೆಜಿಟೇಬಲ್ ಫ್ರೈಡ್ ರೈಸ್ ಮಾಡುವ ವಿಧಾನ ರುಚಿಯಂತೂ ಮರೆಯೋಕಾಗಲ್ಲ. ಹೇಗೆ ಗೊತ್ತೆ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಸಾಸ್ ಗಳನ್ನು ಬಳಸದೆ ವೆಜಿಟೇಬಲ್ ಫೈಡ್ ರೈಸ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸಾಸ್ ಗಳನ್ನು ಬಳಸದೆ ವೆಜಿಟೇಬಲ್ ಫೈಡ್ ರೈಸ್ ಬೇಕಾಗುವ ಪದಾರ್ಥಗಳು:4 ಚಮಚ ಎಣ್ಣೆ, 2 ಗಡ್ಡೆ ಬೆಳ್ಳುಳ್ಳಿ, 2 ಇಂಚು ಶುಂಠಿ, ಸ್ವಲ್ಪ ಕರಿಬೇವು, 4 – 5 ಹಸಿಮೆಣಸಿನಕಾಯಿ, 3 ಈರುಳ್ಳಿ, 2 ಕ್ಯಾರೆಟ್, 10 – 15 ಹುರುಳಿಕಾಯಿ, 1 ಕ್ಯಾಪ್ಸಿಕಮ್, ಅರ್ಧ ಬಟ್ಟಲು ಹಸಿ ಬಟಾಣಿ, ರುಚಿಗೆ ತಕಷ್ಟು ಉಪ್ಪು, 1 ಚಮಚ ಕಾಳು ಮೆಣಸಿನಪುಡಿ, ಅರ್ಧ ಚಮಚ ಗರಂ ಮಸಾಲ, ಕೊತ್ತಂಬರಿ ಸೊಪ್ಪು, ಅರ್ಧ ಓಳು ನಿಂಬೆ ಹಣ್ಣು,ಅನ್ನ.

ಸಾಸ್ ಗಳನ್ನು ಬಳಸದೆ ವೆಜಿಟೇಬಲ್ ಫೈಡ್ ರೈಸ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 4 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಬೆಳ್ಳುಳ್ಳಿ ಹಾಗೂ ಸಣ್ಣಗೆ ಹಚ್ಚಿದ ಶುಂಠಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಕರಿಬೇವು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಕ್ಯಾರೆಟ್, ಸಣ್ಣಗೆ ಹಚ್ಚಿದ ಹುರುಳಿಕಾಯಿ, ಉದ್ದನೆ ಹಚ್ಚಿದ ಕ್ಯಾಪ್ಸಿಕಂ, ಅರ್ಧ ಬಟ್ಟಲು ಹಸಿ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತರಕಾರಿ ಬೇಯುವವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ 1 ಚಮಚದಷ್ಟು ಕಾಳುಮೆಣಸಿನಪುಡಿ, ಅರ್ಧ ಚಮಚ ಗರಂ ಮಸಾಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಅನ್ನವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ. ಕೊನೆಯದಾಗಿ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಸಾಸ್ ಗಳನ್ನು ಬಳಸದೆ ವೆಜಿಟೇಬಲ್ ಫೈಡ್ ರೈಸ್ ಸವಿಯಲು ಸಿದ್ದ.