ಐಪಿಎಲ್ ನಿಂದ ವಿಶ್ವಕಪ್ ನಲ್ಲಿ ಅವಕಾಶ ಕಳೆದುಕೊಂಡ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತಾ??

ಐಪಿಎಲ್ ನಿಂದ ವಿಶ್ವಕಪ್ ನಲ್ಲಿ ಅವಕಾಶ ಕಳೆದುಕೊಂಡ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಐಪಿಎಲ್ ಹಲವಾರು ಆಟಗಾರರಿಗೆ ಒಂದು ಕಡೆ ಉತ್ತಮ ವೇದಿಕೆಯಾಗಿದೆ. ಮತ್ತೊಂದು ಕಡೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದರೆ ಮುಂದಿನ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯುವುದು ಅಸಾಧ್ಯದ ಮಾತಾಗಿತ್ತು, ಹಲವಾರು ತಿಂಗಳುಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಎಲ್ಲ ಸಾಧ್ಯತೆಯಿತ್ತು. ಆದರೆ ನಡೆದ ಕೆಲವೇ ಕೆಲವು ಪಂದ್ಯಗಳಲ್ಲಿ ವಿಫಲವಾಗುವ ಮೂಲಕ ಈ ಮೂರು ಯುವ ಆಟಗಾರರು ವಿಶ್ವಕಪ್ ತಂಡದಿಂದ ದೂರ ಹೋಗಿದ್ದಾರೆ.

ಮೊದಲನೆಯದಾಗಿ ಮನೀಶ್ ಪಾಂಡೆ ರವರು ಐಪಿಎಲ್ 2021 ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಕಂಡಿತಾ ಭಾರತ ತಂಡಕ್ಕೆ ವಿಶ್ವಕಪ್ ನಲ್ಲಿ ಆಯ್ಕೆ ಯಾಗುತ್ತಿದ್ದರು. ಯಾಕೆಂದರೆ ಶ್ರೇಯಸ್ ಅಯ್ಯರ್ ರವರು ಇಂಜುರಿ ಸಮಸ್ಯೆಯಿಂದ ದೂರ ಉಳಿದಿರುವ ಕಾರಣ ಮನಿಷಾ ಪಾಂಡೆ ರವರು ಬಹಳ ಸುಲಭವಾಗಿ ಆಯ್ಕೆ ಯಾಗುತ್ತಿದ್ದರು, ಆದರೆ ಇಡೀ ಐಪಿಎಲ್ ನಲ್ಲಿ ಕೇವಲ 193 ರನ್ ಗಳಿಸಿರುವ ಮನೀಶ್ ರವರ ಪಂದ್ಯ ಗೆಲ್ಲಿಸಿಕೊಡಲು ವಿಫಲವಾಗಿದ್ದಾರೆ, ಅದರಲ್ಲಿಯೂ ಇವರ ಸರಾಸರಿ ಸ್ಟ್ರೈಕ್ ರೇಟ್ ಕೇವಲ 123.71.

ಇನ್ನು ಎರಡನೆಯದಾಗಿ, ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತ ತಂಡದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕಾಯಂ ಸ್ಥಾನ ಪಡೆದುಕೊಳ್ಳುವ ಭರವಸೆ ಮೂಡಿಸಿದ್ದ ಇಶಾನ್ ಕಿಶನ್ ರವರು, ಈ ಬಾರಿಯ ಐಪಿಎಲ್ ನಲ್ಲಿ ಸರಾಸರಿ 14.60 ರ ಸರಾಸರಿಯಲ್ಲಿ ಕೇವಲ 73 ರನ್ ಮತ್ತು 82.95 ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದ್ದಾರೆ ಮತ್ತು ಐದು ಇನ್ನಿಂಗ್ಸ್ ಅವಧಿಯಲ್ಲಿ ಕೇವಲ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಗಳಿಸಿದ್ದಾರೆ.

ಇನ್ನು ಮೊದಲೆನೆಯದಾಗಿ ಬಾರಿ ಸದ್ದು ಮಾಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್ ರವರು, ಐಪಿಎಲ್ 2021 ಟೂರ್ನಿಯಲ್ಲಿ ಕೇವಲ 24.71 ರ ಸರಾಸರಿಯಲ್ಲಿ ಕೇವಲ 173 ರನ್ ಗಳಿಸಿದ್ದಾರೆ, ಈ ಮೂಲಕ ಬಹುತೇಕ ವಿಶ್ವಕಪ್ ತಂಡದಿಂದ ದೂರ ಸರಿಸಿದ್ದಾರೆ, ಆದರೆ ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ರವರು, ಗುಣ ಮೂಕರಾಗಿ ವಾಪಸ್ಸು ಸರಿಯಾದ ಸಮಯದಲ್ಲಿ ಆಗದಿದ್ದರೆ ಖಂಡಿತಾ ಸೂರ್ಯ ಕುಮಾರ್ ಯಾದವ್ ರವರು ಸ್ಥಾನ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.