ಮಾವಿನಹಣ್ಣಿನಲ್ಲಿ ರಾಸಾಯನಿಕ ಹಾಕಿದ್ದಾರೆಂದು ಕಂಡು ಹಿಡಿಯುವುದು ಹೇಗೆ ಗೊತ್ತಾ..? ಅದು ಎಷ್ಟು ಸುಲಭ ಗೊತ್ತಾ??

ಮಾವಿನಹಣ್ಣಿನಲ್ಲಿ ರಾಸಾಯನಿಕ ಹಾಕಿದ್ದಾರೆಂದು ಕಂಡು ಹಿಡಿಯುವುದು ಹೇಗೆ ಗೊತ್ತಾ..? ಅದು ಎಷ್ಟು ಸುಲಭ ಗೊತ್ತಾ??

ನಮಸ್ಕಾರ ಸ್ನೇಹಿತರೇ ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಇಂದಿನ ವೈಜ್ಞಾನಿಕ ಯುಗದಲ್ಲಿ ವರ್ಷ ಪೂರ್ತಿ ಮಾವಿನ ಹಣ್ಣು ಸಿಗುತ್ತಿದ್ದರೂ ಕೂಡ ಏಪ್ರಿಲ್-ಮೇ ಹಾಗೂ ಜೀವನ ತಿಂಗಳಗಳಲ್ಲಿ ಸಿಗುವ ಹಣ್ಣಿನ ರುಚಿ ಸಂಪೂರ್ಣವಾಗಿಬಹಳ ಅದ್ಭುತ ರುಚಿಯಿಂದ ಕೂಡಿರುತ್ತದೆ ಯಾಕೆಂದರೆ ಅದು ಸಾಮಾನ್ಯವಾಗಿ ಮಾವು ಬೆಳೆಯುವ ಸಮಯ. ಇದೀಗ ಕೊನೆಗೂ ಆ ಸಮಯ ಬಂದಿದೆ. ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣಿನ ಸೀಸನ್ ಬಂದಾಗಿದೆ. ಆದ ಕಾರಣ ಪ್ರತಿಯೊಬ್ಬರೂ ಕೂಡ ಮಾವಿನ ಹಣ್ಣಿನ ರುಚಿ ನೋಡುತ್ತಿದ್ದರೆ.

ಆದರೆ ಇದೇ ಸಮಯದಲ್ಲಿ ಗ್ರಾಹಕರನ್ನು ತಮ್ಮ ಹಣ್ಣುಗಳ ಕಡೆ ಆಕರ್ಷಿಸಲು ಹಾಗೂ ಹಣ್ಣುಗಳು ಬೇಗ ಹಣ್ಣಾಗಿ ಬಣ್ಣ ತಿರುಗಿದರೆ ಬೇಗ ವ್ಯಾಪಾರ ಮಾಡಬಹುದು ಎಂಬ ಕಾರಣಕ್ಕೆ ಮಾವಿನ ಹಣ್ಣಿನ ಮೇಲೆ ರಾಸಾಯನಿಕಗಳ ರಾಶಿಯನ್ನೇ ಬಳಸಲಾಗುತ್ತದೆ. ಆದರೆ ಸಾಮಾನ್ಯವಾಗಿ ಕಣ್ಣುಗಳಿಗೆ ಸಾಕಷ್ಟು ಶಕ್ತಿ ನೀಡಿ, ವಿಟಮಿನ್ ಎ ಅನ್ನು ದೇಹಕ್ಕೆ ನೀಡುವ ಮಾವು, ಈ ರಾಸಾಯನಿಕಗಳಿಂದ ಉಪಯೋಗದ ಬದಲು ಅದರ ವಿರುದ್ದದ ಕೆಲಸ ಮಾಡುತ್ತವೆ.

ಇನ್ನು ಹೀಗಿರುವಾಗ ನಾವು ಮಾರುಕಟ್ಟೆಗೆ ಹೋದಾಗ ರಾಸಾಯನಿಕ ಬಳಸಿದ ಹಣ್ಣುಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಹಾಗಿದ್ದರೆ ಹೇಗೆ ರಾಸಾಯನಿಕ ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದಾದರೆ ಮಾವಿನ ಹಣ್ಣು ಸಂಪೂರ್ಣವಾಗಿ ಹಳದಿಯಾಗಿ ಹಣ್ಣಾಗಿದಂತೆ ಕಂಡರೂ ಕೂಡ ಅವುಗಳ ತೊಟ್ಟು ಮಾತ್ರ ಹಸಿರಾಗಿದ್ದರೆ ಆ ಹಣ್ಣಿನ ಮೇಲೆ ರಾಸಾಯನಿಕ ಬಳಸಲಾಗಿದೆ ಎಂದರ್ಧ. ಇನ್ನು ಅಷ್ಟೇ ಅಲ್ಲದೇ, ಒಂದು ಬಕೆಟ್ ನಲ್ಲಿ ನೀರು ಹಾಕಿ ಅದಕ್ಕೆ ನೀವು ತಂದಿರುವ ಮಾವಿನ ಹಾನುಗಳನ್ನು ಹಾಕಿ, ಹಣ್ಣು ತೇಲಲು ಆರಂಭಿಸಿದರೆ ಮಾವಿನ ಹಣ್ಣುಗಳನ್ನು ರಾಸಾಯನಿಕ ಬಳಸಿ ಹಣ್ಣು ಮಾಡಲಾಗಿದೆ ಎಂದರ್ಥ.