ಗೆದ್ದು ಮುಖ್ಯಮಂತ್ರಿ ಆದ ಬೆನ್ನಲ್ಲೆ ಮಮತಾ ರವರಿಗೆ ಬಿಗ್ ಶಾಕ್, ಮೋದಿ ಕೈಯಲ್ಲಿ ಸುಪ್ರೀಂ ಪವರ್. ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದರೂ ಕೂಡ ಬಹುಮತ ಸಾಧಿಸುವಲ್ಲಿ ವಿಫಲವಾಗಿದೆ ಆದರೆ ಮತ್ತೊಂದೆಡೆ ಮಮತಾ ಬ್ಯಾನರ್ಜಿ ಅವರು ಐತಿಹಾಸಿಕ ಗೆಲುವಿನ ಮೂಲಕ ಮತ್ತೊಮ್ಮೆ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಟಿಎಂಸಿ ಪಕ್ಷ ಬಹುಮತ ಸ್ಥಾಪಿಸುತ್ತಿದ್ದಂತೆ ಅದ್ಯಾಕೋ ತಿಳಿದಿಲ್ಲ ಬಂಗಾಳದಲ್ಲಿ ಹಲವಾರು ಕಹಿ ಘಟನೆಗಳು ನಡೆಯುತ್ತಿವೆ.

ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಟಿಎಂಸಿ ಕಾರ್ಯಕರ್ತರು ಮುಗಿಬಿದ್ದಿದ್ದಾರೆ ಹಾಗೂ ಈಗಾಗಲೇ ಆರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಇಹಲೋಕ ತ್ಯಜಿಸಿದ್ದಾರೆ, ಇದಕ್ಕೆಲ್ಲಾ ನೇರವಾಗಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪಕ್ಷದ ಕಾರ್ಯಕರ್ತರು ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಸಮಯದಲ್ಲಿ ರಾಜ್ಯದಲ್ಲಿ ಬಹುತೇಕ ಶಾಂತಿ ಕದಡಿದೆ, ಅದೇ ಕಾರಣಕ್ಕಾಗಿ ಬಂಗಾಳ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಲು ಕೂಡಲೇ ರಾಜ್ಯಪಾಲರು ಅಧಿಕಾರ ಕೈಗೊಳ್ಳಬೇಕು ಎಂಬ ಮಾತು ಕೇಳಿಬಂದಿತ್ತು.

ಆದರೆ ಅದು ಸಾಧ್ಯವಿಲ್ಲ ಅದೇ ಕಾರಣಕ್ಕಾಗಿ ಇದೀಗ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಸುಪ್ರೀಂಕೋರ್ಟ್ ನಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಲಾಗಿದೆ. ಆದರೆ ಇದೇ ಸಮಯದಲ್ಲಿ ನರೇಂದ್ರ ಮೋದಿರವರು ಎಲ್ಲ ರೀತಿಯ ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿದೆ, ಒಂದು ವೇಳೆ ಟಿಎಂಸಿ ಕಾರ್ಯಕರ್ತರ ಮೇಲೆ ಕೇಳಿ ಬರುತ್ತಿರುವ ಆರೋಪಗಳು ನಿಜವೇ ಆದಲ್ಲಿ ನರೇಂದ್ರ ಮೋದಿರವರು ತಮ್ಮ ಅಧಿಕಾರ ಬಳಸಿ ಮಮತಾ ಸರ್ಕಾರವನ್ನು ವಜಾ ಮಾಡಬಹುದು, ರಾಷ್ಟ್ರಪತಿ ಆಡಳಿತ ಕೂಡ ಜಾರಿ ಮಾಡಬಹುದು. ಈ ಹಿಂದೆ ಇಂದಿರಾ ಗಾಂಧಿಯವರು 39 ಬಾರಿ ರಾಷ್ಟ್ರಪತಿ ಆಡಳಿತವನ್ನು ಮಾಡಿದ್ದನ್ನು ನಾವು ಇಲ್ಲಿ ನೆನೆಯಬಹುದು, ಒಂದು ವೇಳೆ ನರೇಂದ್ರ ಮೋದಿರವರು ಕೂಡ ಈ ರೀತಿಯ ನಿರ್ಧಾರ ತೆಗೆದುಕೊಂಡರೆ ಯಾವುದೇ ಅಚ್ಚರಿಪಡಬೇಕಾಗಿಲ್ಲ.

Facebook Comments

Post Author: Ravi Yadav