ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದಿಡೀರ್ ಎಂದು ಮನೆ ಮಂದಿಯೆಲ್ಲ ಇಷ್ಟ ಪಡುವಂತೆ ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ ಗೊತ್ತೇ??

15

ನಮಸ್ಕಾರ ಸ್ನೇಹಿತರೇ , ಇಂದು ನಾವು ದಿಡೀರ್ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಈ ಚಟ್ನಿಯನ್ನು ಫ್ರಿಡ್ಜ್ ನಲ್ಲಿ 6 ತಿಂಗಳುಗಳ ಕಾಲ ಸ್ಟೋರ್ ಮಾಡಬಹುದು ಮತ್ತು 2 ತಿಂಗಳುಗಳ ಕಾಲ ಹೊರಗಡೆ ಸ್ಟೋರ್ ಮಾಡಬಹುದು. ದಿಡೀರ್ ಬೆಳ್ಳುಳ್ಳಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: 10 – 12 ಬ್ಯಾಡಿಗೆ ಮೆಣಸಿನಕಾಯಿ, 3 ಚಮಚ ಎಣ್ಣೆ, 40 – 50 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, ಸಣ್ಣ ನಿಂಬೆ ಹಣ್ಣು ಗಾತ್ರದ ಹುಣಸೆ ಹಣ್ಣು,ಸ್ವಲ್ಪ ಕರಿಬೇವು, 1 ಚಮಚ ಜೀರಿಗೆ, ರುಚಿಗೆ ತಕಷ್ಟು ಉಪ್ಪು, ಅರ್ಧ ಚಮಚ ಇಂಗು.

ದಿಡೀರ್ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಅದೇ ಬಾಣಲೆಗೆ ಬೆಳ್ಳುಳ್ಳಿ ಎಸಳನ್ನು ಹಾಕಿ.

3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಎಡಕ್ಕೆ ಸ್ವಲ್ಪ ಶುಂಠಿಯನ್ನು ಹಾಕಿ 2 – 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುಣಸೆ ಹಣ್ಣನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವನ್ನು ಹಾಕಿ 2 – 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚ ಜೀರಿಗೆ ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಸ್ವಲ್ಪ ಇಂಗನ್ನು ಹಾಕಿ ಮಿಕ್ಸ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ, ಫ್ರೈ ಮಾಡಿಕೊಂಡ ಬ್ಯಾಡಿಗೆ ಮೆಣಸಿನಕಾಯಿ ಹಾಗೂ 2 ಚಮಚದಷ್ಟು ಎಣ್ಣೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಂಡರೆ ದಿಡೀರ್ ಬೆಳ್ಳುಳ್ಳಿ ಚಟ್ನಿ ಸವಿಯಲು ಸಿದ್ದ.