ಸಲ್ಮಾನ್ ಖಾನ್ ಗೆ ಮರ್ಮಾಘಾತ, ಸುಶಾಂತ್ ರವರನ್ನು ಮರೆಯದ ಅಭಿಮಾನಿಗಳು ಮಾಡಲು ಹೊರಟಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ವರ್ಷಗಳ ಹಿಂದೆ ಬಾಲಿವುಡ್ ಚಿತ್ರರಂಗದಲ್ಲಿ ಇಂದಿಗೂ ಮರೆಯಲಾಗದಂತಹ ಘಟನೆ ನಡೆದು ಹೋಗಿತ್ತು, ಜನರ ಅಚ್ಚು ಮೆಚ್ಚಿನ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ರವರು ಇಹಲೋಕ ತ್ಯಜಿಸಿದ್ದರು, ಹೀಗೆ ಸುಶಾಂತ್ ಸಿಂಗ್ ರಜಪೂತ್ ರವರು ಈ ರೀತಿಯ ನಿರ್ಧಾರ ತೆಗೆದು ಕೊಳ್ಳಲು ಬಾಲಿವುಡ್ ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು.

ಅದರಲ್ಲಿಯೂ ಸದಾ ಬಾಲಿವುಡ್ ಚಿತ್ರರಂಗದ ಹಿರಿಯ ನಟರ ಮಕ್ಕಳಿಗೆ ಹಾಗೂ ಕೆಲವೊಂದು ಕುಟುಂಬಗಳಿಗೆ ಮಾತ್ರ ಆದ್ಯತೆ ನೀಡುತ್ತಾ ಬಂದಿದ್ದ ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್ ಅವರ ವಿರುದ್ಧ ಟೀಕೆಗಳ ಬಾಣಗಳು ಸುರಿಸಿದ್ದರು. ಈಗಾಗಲೇ ಕರನ್ ಜೋಹರ್ ರವರು ಇದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಿದ್ದಾರೆ ಎಂದರೆ ತಪ್ಪಾಗಲಾರದು ಯಾಕೆಂದರೆ ಕರನ್ ಜೋಹರ್ ನಿರ್ಮಾಣದ ಚಿತ್ರ ವಿಶ್ವದಲ್ಲಿಯೇ ಅತಿ ಕಡಿಮೆ ರೇಟಿಂಗ್ ಪಡೆದುಕೊಂಡಿತು ಹಾಗೂ ಕಾಫಿ ವಿತ್ ಕರಣ್ ಕಾರ್ಯಕ್ರಮ ಮುಂದುವರಿಸಲು ವಾಹಿನಿ ಅನುವು ಮಾಡಿಕೊಡದೇ ಕಾರ್ಯಕ್ರಮ ನಿಲ್ಲಿಸಿಬಿಟ್ಟಿತು.

ಇನ್ನು ಇದೇ ಸಮಯದಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಒಗ್ಗಟ್ಟಾಗಿ ಸುಶಾಂತ್ ಸಿಂಗ್ ರವರ ಅಭಿಮಾನಿಗಳು ಸಲ್ಮಾನ್ ಖಾನ್ ರವರ ಚಿತ್ರ ಬಂದಾಗ ಕೂಡ ನಮ್ಮ ಉತ್ತರ ನೀಡುವ ಸಮಯ ಬರುತ್ತದೆ ಎಂದಿದ್ದರು, ಇದೀಗ ಸಲ್ಮಾನ್ ಖಾನ್ ರವರು ರಾಧೆ ಸಿನಿಮಾಗಾಗಿ ಸಕಲ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಇದೀಗ ಮತ್ತೊಮ್ಮೆ ಸುಶಾಂತ್ ಅಭಿಮಾನಿಗಳು ಒಂದಾಗಿದ್ದಾರೆ, ಈ ಚಿತ್ರ ಅದೇಗೆ ಬಾಕ್ಸ್ ಆಫೀಸ್ ನಲ್ಲಿ ಹಣ ಗಳಿಸುತ್ತದೆ ಹಾಗೂ ಹೇಗೆ ಉತ್ತಮ ರೇಟಿಂಗ್ ಪಡೆದು ಕೊಳ್ಳುತ್ತದೆ ಎಂಬುದನ್ನು ನಾವು ಕೂಡ ನೋಡುತ್ತೇವೆ ಎಂದು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದಾರೆ. ಇಷ್ಟು ದಿನಗಳ ಕಾಲ ಯಾರು ಈ ಕುರಿತು ಮಾತನಾಡಿದ ಕಾರಣ ಎಲ್ಲರೂ ಮರೆತಿದ್ದಾರೆ ಎಂದು ಕೊಂಡಿದ್ದರು ಆದರೆ ಸುಶಾಂತ ಅಭಿಮಾನಿಗಳು ಯಾವುದನ್ನು ಕೂಡ ಮರೆತಂತೆ ಕಾಣುತ್ತಿಲ್ಲ.

Facebook Comments

Post Author: Ravi Yadav