ಕೊನೆಗೂ ಮನೆಯಿಂದ ಹೊರಬಂದ ಬಳಿಕ ಸುದೀಪ್ ರವರನ್ನು ಭೇಟಿ ಮಾಡಿದ ರಾಜೀವ್, ಆಗ ಸುದೀಪ್ ರವರು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾರು ಊಹಿಸದ ರೀತಿಯಲ್ಲಿ ಮನೆಯಿಂದ ಹೊರಗಡೆ ಬಂದಿರುವ ರಾಜೀವ್ ರವರು ಬಿಗ್ ಬಾಸ್ ಆರಂಭವಾಗುವ ಮುನ್ನವೂ ಕೂಡ ಸುದೀಪ್ ರವರ ಆತ್ಮೀಯ ಸ್ನೇಹಿತರಾಗಿದ್ದರು. ಸುದೀಪ್ ರವರು ಇವರನ್ನು ಸ್ನೇಹಿತರು ಎಂದು ಕೊಂಡಿದ್ದರೂ ಕೂಡ ರಾಜೀವ್ ರವರು ಹೇಳಿದಂತೆ, ರಾಜೀವ್ ರವರು ಸುದೀಪ್ ರವರಿಗೆ ದೊಡ್ಡ ಅಭಿಮಾನಿಯಾಗಿದ್ದರು.

ಅದೇ ಕಾರಣಕ್ಕಾಗಿ ಸುದೀಪ್ ಅವರ ಹೆಸರನ್ನು ಕೈ ಮೇಲೆ ಅಚ್ಚೆ ಕೂಡ ಹಾಕಿಸಿ ಕೊಂಡಿದ್ದಾರೆ ರಾಜೀವ್ ರವರು. ಆದರೆ ಇವರನ್ನು ಸುದೀಪ್ ರವರು ಒಬ್ಬ ಉತ್ತಮ ಗೆಳೆಯ ಎಂದು ಕೊಳ್ಳುತ್ತಾರೆ ಇದು ನಿಜಕ್ಕೂ ಅವರ ದೊಡ್ಡ ಗುಣ, ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಹೋಗುವಾಗ ರಾಜೀವ್ ರವರನ್ನು ವೇದಿಕೆಯ ಮೇಲೆ ಸ್ವಾಗತ ಮಾಡಲು ಸುದೀಪ್ ರವರು ಇರಲಿಲ್ಲ. ಅಷ್ಟೇ ಅಲ್ಲದೇ ಅವರಿಗೆ ಅನಾರೋಗ್ಯ ಇರುವ ಕಾರಣ ಭೇಟಿ ಮಾಡಲು ಕೂಡ ಸಾಧ್ಯವಾಗಿರಲಿಲ್ಲ.

ಆದರೆ ಕೊನೆಗೂ ಇದೀಗ ರಾಜೀವ್ ರವರು ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಸುದೀಪ್ ಅವರನ್ನು ಭೇಟಿಯಾಗಿದ್ದು, ರಾಜೀವ್ ರವರ ಬಳಿ ಮಾತನಾಡಿರುವ ಸುದೀಪ್ ರವರು, ನೀವು ಗೋಲ್ಡನ್ ಪಾಸ್ ಬಳಸದೆ ತಪ್ಪು ಮಾಡಿದ್ದೀರಿ, ನಿಮಗೆ ಸಿಕ್ಕ ಅವಕಾಶಗಳನ್ನು ನೀವು ಕಳೆದುಕೊಂಡಿರಿ. ಆಗಿದ್ದು ಆಗಿದೆ ಇನ್ನು ಮುಂದೆ ಜೀವನದಲ್ಲಿ ಯಾವುದೇ ಅವಕಾಶ ಸಿಕ್ಕರೂ ಕೂಡ ಕಳೆದು ಕೊಳ್ಳಬೇಡ,ಅದು ಚಿಕ್ಕ ಅವಕಾಶ ವಾಗಿರಲಿ ಅಥವಾ ದೊಡ್ಡದಾಗಿರಲಿ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡ ಎಂದು ಧೈರ್ಯ ತುಂಬಿ ಕಳುಹಿಸಿದ್ದಾರೆ. ಇನ್ನು ರಾಜೇವ್ ರವರ ಹೊರಹೋದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯ ಬೇಡಿ.

Facebook Comments

Post Author: Ravi Yadav