ಆರ್ಸಿಬಿ ತಂಡವನ್ನು ಚೆನ್ನೈ ಸೋಲಿಸಿದರೂ ಕೂಡ ವಿರಾಟ್ ಕೊಹ್ಲಿ ಸಖತ್ ಖುಷಿಯಾಗಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಮೊದಲ ನಾಲ್ಕು ಐಪಿಎಲ್ ಪಂದ್ಯಗಳನ್ನು ಗೆಲ್ಲುವ ಮೂಲಕ ಐಪಿಎಲ್ ಟೂರ್ನಿ ಯನ್ನು ಶುಭಾರಂಭ ಮಾಡಿತ್ತು. ಇದೇ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಇತಿಹಾಸದಲ್ಲಿ ಈ ರೀತಿಯ ಆರಂಭವನ್ನು ಆರ್ಸಿಬಿ ತಂಡ ಪಡೆದು ಕೊಂಡಿತ್ತು, ಆದರೆ ನಾಲ್ಕು ಪಂದ್ಯಗಳು ಗೆದ್ದಾಗ ಆದ ಖುಷಿ ಚೆನ್ನೈ ತಂಡದ ಮೇಲೆ ಗೆದ್ದಿದ್ದರೆ ಮತ್ತಷ್ಟು ಹೆಚ್ಚಿನ ಖುಷಿ ಆರ್ಸಿಬಿ ಅಭಿಮಾನಿಗಳಿಗೆ ಸಿಗುತ್ತಿತ್ತು. ಆದರೆ ನಾಲ್ಕು ಪಂದ್ಯಗಳನ್ನು ಗೆದ್ದ ಕೊಹ್ಲಿ ಪಡೆ ಸೋಲಬಾರದ ಪಂದ್ಯದಲ್ಲಿ ಸೋಲನ್ನು ಕಂಡಿತ್ತು.

ಐಪಿಎಲ್ ಟೂರ್ನಿ ಆರಂಭವಾದ ದಿನಗಳಿಂದಲೂ ಕೂಡ ಆರ್ಸಿಬಿ ಹಾಗೂ ಚೆನ್ನೈ ನಡುವೆ ಆ ರೀತಿಯ ಹೈವೋಲ್ಟೇಜ್ ಪಂದ್ಯಗಳು ಸದಾ ನಡೆಯುತ್ತಿರುತ್ತವೆ, ಹೀಗಿರುವಾಗ ಆರ್ಸಿಬಿ ತಂಡಕ್ಕೆ ಕಪ್ ಗೆಲ್ಲುವುದು ಎಷ್ಟು ಮುಖ್ಯವೋ ಚೆನ್ನೈ ತಂಡದ ವಿರುದ್ಧ ಗೆಲ್ಲಬೇಕು ಎಂಬುದು ಅಷ್ಟೇ ಮುಖ್ಯ ಎನ್ನುತ್ತಾರೆ ಅಭಿಮಾನಿಗಳು. ಇಷ್ಟೆಲ್ಲಾ ಹೈವೋಲ್ಟೇಜ್ ಪಂದ್ಯದ್ದಲ್ಲಿ ಆರ್ಸಿಬಿ ತಂಡ ಸೋತರೂ ಕೂಡ ವಿರಾಟ್ ಕೊಹ್ಲಿ ರವರು ಮಾತ್ರ ಹೆಚ್ಚಿನ ಸಂತಸದಲ್ಲಿ ಇದ್ದಾರಂತೆ. ಯಾಕೆ ಗೊತ್ತಾ ಬನ್ನಿ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ವಿರಾಟ್ ಕೊಹ್ಲಿ ರವರು ಆರ್ಸಿಬಿ ತಂಡದ ನಾಯಕನಷ್ಟೇ ಅಲ್ಲ, ಬದಲಾಗಿ ಭಾರತ ಕ್ರಿಕೆಟ್ ತಂಡದ ನಾಯಕ ಕೂಡ. ಇನ್ನು ಐಪಿಎಲ್ ಮುಗಿದ ಮೇಲೆ ಟಿ 20 ವಿಶ್ವಕಪ್ ಆರಂಭವಾಗುವ ಕಾರಣ ಜಡೇಜ ರವರು ಇಂತಹ ಅದ್ಭುತ ಫಾರ್ಮ್ ನಲ್ಲಿ ಇರುವುದು ನಾಯಕನಿಗೆ ಖುಷಿ ತರಿಸಿದೆ, ಭಾರತಕ್ಕೆ ಈ ರೀತಿಯ ಆಲ್-ರೌಂಡರ್ ಗಳ ಅಗತ್ಯತೆ ಹೆಚ್ಚಾಗಿದ್ದು, ಜಡೇಜ ರವರು ಇದೇ ರೀತಿಯ ಆಟ ಮುಂದುವರಿಸಿದರೆ ಭಾರತ ಸುಲಭವಾಗಿ ಕಪ್ ಗೆಲ್ಲಬಹುದು, ಅದರಲ್ಲಿಯೂ ಇನ್ನಿತರ ಆಟಗಾರರ ಜೊತೆ ಜಡೇಜಾ ಕೈಜೋಡಿಸಿದಲ್ಲಿ ಭಾರತ ಒಂದು ಪಂದ್ಯ ಸೋಲುವುದು ಕೂಡ ಅನುಮಾನ ವಾಗಲಿದೆ. ಅದೇ ಕಾರಣಕ್ಕಾಗಿ ಜಡೇಜಾ ರವರ ಫಾರ್ಮ್ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ಪ್ರದರ್ಶನಗೊಂಡರೂ ಕೂಡ ವಿರಾಟ್ ಕೊಹ್ಲಿ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಇದರಿಂದ ಭಾರತ ಕ್ರಿಕೆಟ್ ತಂಡಕ್ಕೆ ಒಳ್ಳೆಯದಾಗುತ್ತದೆ ಎಂದಿದ್ದಾರೆ

Post Author: Ravi Yadav