ಲಾಕ್ಡೌನ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, ಯಾರೂ ಕೇಳುವವರಿಲ್ಲ, ಊಡಿಕೆಗೆ ಇದು ಸದಾವಕಾಶವೇ??

ಲಾಕ್ಡೌನ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, ಯಾರೂ ಕೇಳುವವರಿಲ್ಲ, ಊಡಿಕೆಗೆ ಇದು ಸದಾವಕಾಶವೇ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ತಿಂಗಳುಗಳ ಹಿಂದೆ ಸರಿ ಸುಮಾರು ನೀವು 10 ಗ್ರಾಂ ಚಿನ್ನ ಕೊಂಡುಕೊಳ್ಳಬೇಕು ಎಂದರೆ ನಿಮ್ಮ ಕೈಯಲ್ಲಿ ಕನಿಷ್ಠ 56 ಸಾವಿರ ರೂಪಾಯಿಗಳು ಇರ ಬೇಕಾಗಿತ್ತು. ಪರಿಸ್ಥಿತಿ ಹೇಗಿತ್ತು ಎಂದರೆ ಮಧ್ಯಮ ವರ್ಗದವರು ಚಿನ್ನ ಕೊಂಡುಕೊಳ್ಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿ ಬಿಟ್ಟಿತ್ತು, ಪಾಪ ತಮ್ಮ ಜೀವನ ಪೂರ್ತಿ ಕೂಡಿಟ್ಟಿರುವ ಹಣವನ್ನು ಮದುವೆಗೆ ಬಂದಾಗ ಚಿನ್ನ ಕೊಂಡು ಕೊಳ್ಳಲು ಬೇಕಾದ ಸಂದರ್ಭದಲ್ಲಿ ಖರ್ಚು ಮಾಡುವ ಸ್ಥಿತಿ ಎದುರಾಗಿದ್ದು

ಅದೇ ಸಮಯದಲ್ಲಿ ನಾವು ಹೀಗೆ ಬಿಟ್ಟರೆ ಇನ್ನಷ್ಟು ಚಿನ್ನದ ಬೆಲೆ ಏರಿಕೆಯಾಗುತ್ತದೆ ಎಂದು ಸಾಲ ಮಾಡಿ ಚಿನ್ನ ಕೊಂಡವರು ಕೂಡ ಇದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನು ಕಳೆದ ಕೆಲವು ತಿಂಗಳುಗಳಿಂದ ಬಹುತೇಕ ಕಡಿಮೆ ಯಾಗಿದ್ದ ಚಿನ್ನದ ಬೆಲೆ ಕಳೆದ ವಾರ ಕೇವಲ ಎರಡು ದಿನದಲ್ಲಿ 10 ಗ್ರಾಮಿಗೆ ಸಾವಿರಕ್ಕೂ ಹೆಚ್ಚು ರೂಪಾಯಿ ಬೆಲೆ ಹೆಚ್ಚಾಗಿತ್ತು.

ಆದರೆ ಇದೀಗ ದೇಶದ ಎಲ್ಲೆಡೆ ಬಹುತೇಕ ನಗರಗಳು ಸ್ತಬ್ಧವಾಗಿರುವ ಕಾರಣ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ ಕಂಡಿದೆ, ಇನ್ನು ಹೂಡಿಕೆದಾರರ ವಿಚಾರವನ್ನು ತೆಗೆದು ಕೊಳ್ಳುವುದಾದರೆ ಈ ಸಮಯ ಬಿಟ್ಟು ಇನ್ನು ಕೆಲವು ವಷ್ಟು ದಿನಗಳ ಕಾಲ ನಂತರ ನೀವು ಹೂಡಿಕೆ ಮಾಡಿದರೆ ಉತ್ತಮ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ, ಕಳೆದ 23ನೇ ತಾರೀಖಿನಂದು 24 ಕ್ಯಾರೆಟ್ ಚಿನ್ನಕ್ಕೆ 49200 ನೀಡ ಬೇಕಾಗಿತ್ತು ಆದರೆ ಇಂದು ಐದು ದಿನಗಳ ಬಳಿಕ ಸಾವಿರಕ್ಕೂ ಹೆಚ್ಚು ರೂಪಾಯಿ ಕಡಿಮೆಯಾಗಿ 48160 ರೂಪಾಯಿಗೆ ಬಂದಿದೆ ಇನ್ನು ಕೆಲವು ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.