ಹೆಚ್ಚು ಸಮಯ ಬೇಡವೇ ಬೇಡ, ಜಸ್ಟ್ 5 ನಿಮಿಷಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಟೊಮೋಟೊ ಸಾಂಬಾರ್ ಹೀಗೆ ಮಾಡಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 5 ನಿಮಿಷಗಳಲ್ಲಿ ಟೊಮೋಟೊ ಸಾಂಬಾರ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಟೊಮೇಟೊ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಚಮಚ ಜೀರಿಗೆ, ಒಂದೂವರೆ ಚಮಚ ಬೆಲ್ಲ, ಸ್ವಲ್ಪ ಅರಿಶಿಣ ಪುಡಿ, ಅರ್ಧ ಚಮಚ ಸಾಂಬಾರ್ ಪುಡಿ,2 ಚಮಚ ಅಚ್ಚಖಾರದ ಪುಡಿ, ಸ್ವಲ್ಪ ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, 8 -10 ಬೆಳ್ಳುಳ್ಳಿ ಎಸಳು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, ಚಿಟಿಕೆ ಇಂಗು, 5 ಟೊಮ್ಯಾಟೋ.

ಟೊಮೊಟೊ ಸಾಂಬಾರ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 2 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಹಚ್ಚದ ಟಮೊಟೊವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಟೊಮೆಟೊವನ್ನು ಸಣ್ಣದಾಗಿ ಹಚ್ಚಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದೇ ಬಟ್ಟಲಿಗೆ 2 ಚಮಚದಷ್ಟು ಅಚ್ಚಖಾರದ ಪುಡಿ, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದೂವರೆ ಚಮಚ ಬೆಲ್ಲ, ಅರ್ಧ ಚಮಚ ಸಾಂಬಾರ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬಟ್ಟಲಿನಲ್ಲಿ ಮಿಕ್ಸ್ ಮಾಡಿಕೊಂಡ ಮಿಶ್ರಣವನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಎಣ್ಣೆ ಬಿಡುವವರೆಗೂ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಇಂಗನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ಪೂನ್ ನ ಸಹಾಯದಿಂದ ಸ್ಮಾಶ್ ಮಾಡಿಕೊಳ್ಳುತ್ತಾ ಬೇಯಿಸಿಕೊಳ್ಳಿ. ನಂತರ ನಿಮಗೆ ಬೇಕಾಗುವಷ್ಟು ನೀರನ್ನು ಹಾಕಿ ಮುಚ್ಚಳವನ್ನು ಮುಚ್ಚಿ 5 ನಿಮಿಷಗಳ ಕಾಲ ಕುದಿಸಿಕೊಂಡರೆ ಟೊಮೆಟೊ ಸಾಂಬಾರ್ ಸವಿಯಲು ಸಿದ್ಧ.

Post Author: Ravi Yadav