ಮನೆಯಲ್ಲಿಯೇ ಮಾಡಿ ಅದ್ಭುತ ರುಚಿಯ ನೀರ್ ಚಟ್ನಿ, ಎಲ್ಲರೂ ಕೇಳಿ ಕೇಳಿ ಹಾಕಿಸ್ಕೊಳ್ತಾರೆ. ಹೇಗೆ ಗೊತ್ತೇ??

ಮನೆಯಲ್ಲಿಯೇ ಮಾಡಿ ಅದ್ಭುತ ರುಚಿಯ ನೀರ್ ಚಟ್ನಿ, ಎಲ್ಲರೂ ಕೇಳಿ ಕೇಳಿ ಹಾಕಿಸ್ಕೊಳ್ತಾರೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ,ಇಂದು ನಾವು ಹೋಟೆಲ್ ಶೈಲಿಯ ನೀರ್ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನೀರ್ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: ಸ್ವಲ್ಪ ಎಣ್ಣೆ,1 ಬಟ್ಟಲು ಕಡಲೆಬೀಜ, ಮುಕ್ಕಾಲು ಬಟ್ಟಲು ಹುರಿಗಡಲೆ,4 – 5 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಪುದಿನ,ಸ್ವಲ್ಪ ಹುಣಸೆಹಣ್ಣು,1 ಬಟ್ಟಲು ಹಸಿ ತೆಂಗಿನತುರಿ,ರುಚಿಗೆ ತಕಷ್ಟು ಉಪ್ಪು, ಸ್ವಲ್ಪಕೊತ್ತಂಬರಿ ಸೊಪ್ಪು,1 ಚಮಚ ಸಾಸಿವೆ, 2 ಒಣಮೆಣಸಿನಕಾಯಿ.

ನೀರ್ ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಬಟ್ಟಲು ಕಡಲೆಬೀಜವನ್ನು ಹಾಕಿ ಕೆಂಪು ಬಣ್ಣ ತಿರುಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮುಕ್ಕಾಲು ಬಟ್ಟಲು ಹುರಿಗಡಲೆ, 4 – 5 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಪುದಿನ,ಸ್ವಲ್ಪ ಹುಣಸೆಹಣ್ಣು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ.

ನಂತರ ಒಂದು ಮಿಕ್ಸ್ ಜಾರಿಗೆ ತಣ್ಣಗಾದ ಮಿಶ್ರಣ,1 ಬಟ್ಟಲು ಹಸಿ ತೆಂಗಿನತುರಿ,ರುಚಿಗೆ ತಕಷ್ಟು ಉಪ್ಪು,ಕೊತ್ತಂಬರಿ ಸೊಪ್ಪು ಹಾಗೂ ನೀರನ್ನು ಹಾಕಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಿಕೊಳ್ಳಿ. ಮತ್ತೊಂದು ಕಡೆ ಗ್ಯಾಸ್ ಮೇಲ ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ 1 ಚಮಚ ಸಾಸಿವೆ, ಸ್ವಲ್ಪ ಕರಿಬೇವು, 2 ಒಣಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಹೋಟೆಲ್ ಶೈಲಿಯ ನೀರ್ ಚಟ್ನಿ ಸವಿಯಲು ಸಿದ್ದ.